Spiritual: ಹಿಂದೂ ಧರ್ಮದಲ್ಲಿ ಅನೇಕ ನಂಬಿಕೆಗಳಿದೆ. ಆ ನಂಬಿಕೆಯ ಪ್ರಕಾರ, ಮನೆಯಲ್ಲಿ ಕೆಲ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು. ಹಾಗೇನಾದರೂ ಇಟ್ಟರೆ, ದಾರಿದ್ರ್ಯ ಬೆನ್ನತ್ತುತ್ತದೆಯಂತೆ. ಹಾಗಾದ್ರೆ ಮನೆಯಲ್ಲಿ ಯಾವ ವಸ್ತುಗಳನ್ನು ಖಾಲಿ ಮಾಡಿ ಇಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಅಕ್ಕಿ ಡಬ್ಬ, ಅರಿಶಿನ ಡಬ್ಬ, ಉಪ್ಪಿನ ಡಬ್ಬ. ಈ ಮೂರು ಡಬ್ಬಗಳು ಎಂದಿಗೂ ಖಾಲಿ ಇರಬಾರದು. ಅಂದ್ರೆ ಮನೆಯಲ್ಲಿ ಅಕ್ಕಿ, ಉಪ್ಪು, ಅರಿಶಿನ ಪುಡಿ ಎಂದಿಗೂ ಸಂಪೂರ್ಣವಾಗಿ ಖಾಲಿಯಾಗಬಾರದು. ಹಾಗೇನಾದರೂ ಮುಗಿಯುತ್ತ ಬಂದರೆ, ಬೇಗ ಆ ವಸ್ತುಗಳನ್ನು ಖರೀದಿಸಿ ತಂದಿಡಬೇಕು. ಇಲ್ಲವಾದಲ್ಲಿ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ.
ಎರಡನೇಯದಾಗಿ ಪರ್ಸ್. ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ, ತಮ್ಮ ಬಳಿ ಎಷ್ಟು ಪರ್ಸ್‌ಗಳಿದ್ದರೂ ಕೂಡ, ಅದರಲ್ಲಿ ಒಂದು ರೂಪಾಯಿಯಾದರೂ ಇಡಿ. ಖಾಲಿ ಇರಿಸಬೇಡಿ. ಹೆಚ್ಚಾಗಿ ಹೆಣ್ಣು ಮಕ್ಕಳ ಬಳಿ ವ್ಯಾನೆಟಿ ಬ್ಯಾಗ್, ಪರ್ಸ್, ಕ್ಲಚ್ ಸೇರಿ ಹಲವು ವಿಧಧ ಪರ್ಸ್‌ಗಳಿರುತ್ತದೆ. ಅದರಲ್ಲಿ ನೀವು ಒಂದು ರೂಪಾಯಿಯಾದರೂ ಇರಿಸಿ. ಪರ್ಸ್ ಖಾಲಿಯಾಗಿದ್ದರೆ, ದಾರಿದ್ರ್ಯ ಬೆನ್ನತ್ತಿದೆ ಎಂದರ್ಥ.
ಮೂರನೇಯದಾಗಿ ದೇವರ ಕೋಣೆಯಲ್ಲಿರುವ ಅರಿಶಿನ- ಕುಂಕುಮದ ಬಟ್ಟಲು, ಕಲಶ ಕೂಡ ಖಾಲಿಯಾಗಿರಬಾರದು. ಕಲಶದಲ್ಲಿ ದುಡ್ಡು ಅಥವಾ ಅಕ್ಕಿ ಕಾಳಾದರೂ ಇರಬೇಕು. ನಾಲ್ಕನೇಯದಾಗಿ ನೀರಿನ ಪಾತ್ರೆ. ನೀರಿನ ಪಾತ್ರೆ ಖಾಲಿಯಾಗುತ್ತಿದ್ದಂತೆ, ಅದನ್ನು ತೊಳೆದು ಸ್ವಚ್ಛಗೊಳಿಸಿ, ಅದರಲ್ಲಿ ನೀರು ತುಂಬಿಸಿಡಬೇಕು.
ಐದನೇಯದಾಗಿ ಅನ್ನದ ಪಾತ್ರೆ. ಅನ್ನ ರಾತ್ರಿಯಾಗುತ್ತಿದ್ದಂತೆ ಖಾಲಿಯಾಗುತ್ತದೆ. ಆಗ ಕೆಲವರು ಅನ್ನದ ಪಾತ್ರೆಯನ್ನು ತೊಳೆದು ಇಡುತ್ತಾರೆ. ಆದರೆ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಲಕ್ಷ್ಮೀ ದೇವಿ ರಾತ್ರಿಯ ಹೊತ್ತು ಮನೆಗೆ ಬರುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಅನ್ನದ ಪಾತ್ರೆಯಲ್ಲಿ ನಾಲ್ಕು ಕಾಳಾದರೂ ಅನ್ನವಿರಬೇಕು. ಮರುದಿನ ಆ ಅನ್ನವನ್ನು ದನ ಅಥವಾ ಯಾವುದಾದರೂ ಪ್ರಾಣಿಗೆ ಹಾಕಿ, ಪಾತ್ರೆ ತೊಳೆದು, ಮತ್ತೆ ಅದರಲ್ಲಿ ಅನ್ನ ಮಾಡಬೇಕು.
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..