Saturday, April 19, 2025

Latest Posts

ಮಧುಮಗಳಿಗೆ ಈ 3 ವಸ್ತುವನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ..

- Advertisement -

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಆಕೆಗೆ ಮದುವೆಯಾದ ಬಳಿಕ. ಹಾಗಾಗಿ ಆ ವೈವಾಹಿಕ ಜೀವನ ಅತ್ಯುತ್ತಮವಾಗಿರಲೆಂದೇ, ಮದುವೆಯನ್ನ ಶಾಸ್ತ್ರೋಕ್ತವಾಗಿ ಮಾಡೋದು. ಹೀಗೆ ಮದುವೆ ಮಾಡುವಾಗ, ಹೆಣ್ಣಿಗೆ ಉಡುಗೊರೆಗಳನ್ನ ಕೊಡಲಾಗುತ್ತದೆ. ಆದ್ರೆ ಮಧುಮಗಳಿಗೆ ಕೆಲ ಉಡುಗೊರೆಗಳನ್ನ ಕೊಡಬಾರದು, ಹಾಗೆ ಮಾಡುವುದರಿಂದ, ಆಕೆಯ ಜೀವನ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದ್ರೆ ಅದೆಂಥ ಗಿಫ್ಟ್‌ಗಳನ್ನ ಕೊಡಬಾರದು ಅಂತಾ ತಿಳಿಯೋಣ ಬನ್ನಿ..

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ಮೊದಲನೇಯ ಉಡುಗೊರೆ, ಉಪ್ಪು. ಎಂದಿಗೂ ಯಾರಿಗೂ ಉಪ್ಪನ್ನು ದಾನ ಮಾಡಬಾರದು ಅಂತಾ ಹೇಳಲಾಗತ್ತೆ. ಯಾಕಂದ್ರೆ ಹಾಗೆ ಉಪ್ಪನ್ನು ಕೊಡುವುದರಿಂದ ಮನೆಗೆ ದರಿದ್ರ ಸಂಭವಿಸುತ್ತದೆ. ಅದೇ ರೀತಿ, ಉಪ್ಪಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಮಗಳು ಗಂಡನ ಮನೆಗೆ ಉಪ್ಪು ತೆಗೆದುಕೊಂಡು ಹೋದರೆ, ಆಕೆಯ ಋಣ ತೀರಿಲ್ಲವೆಂದು ಅರ್ಥ. ಹಾಗಾಗಿ ನಿಮ್ಮ ಮಗಳಿಗೆ ಇದರಿಂದ ಸಂಕಷ್ಟ ಎದುರಾಗಬಹುದು. ಆದ್ದರಿಂದ ಉಪ್ಪು ಕೊಡಬೇಡಿ.

ಎರಡನೇಯ ಉಡುಗೊರೆ, ಒಲೆ. ಹಲವರು ಮಗಳನ್ನು ಮದುವೆ ಮಾಡಿ ಕೊಡುವಾಗ, ರಾಶಿ ರಾಶಿ ಪಾತ್ರೆ ಸಾಮಾನು, ಮಂಚ, ಕಪಾಟು, ಫ್ರಿಜ್, ಇತ್ಯಾದಿ ವಸ್ತುಗಳನ್ನು ಉಡುಗೊರೆಯನ್ನಾಗಿ ಕೊಡುತ್ತಾರೆ. ಆದ್ರೆ ಒಲೆಯನ್ನು ಮಾತ್ರ ಕೊಡುವುದಿಲ್ಲ. ಅಂದ್ರೆ ಸ್ಟವ್ ಕೊಡೋದಿಲ್ಲಾ. ಯಾಕಂದ್ರೆ ಆಕೆ ಹೋದ ಮನೆಯಲ್ಲೇ ಒಲೆ ಉರಿಸಬೇಕೆ ಹೊರತು. ತಾನು ತೆಗೆದುಕೊಂಡ ಹೋದ ಒಲೆಯನ್ನ ಸಪರೇಟ್ ಆಗಿ ಉರಿಸಬಾರದು. ಹಾಗಾಗಿ ಒಲೆಯನ್ನು ಗಿಫ್ಟ್ ಆಗಿ ಕೊಡಬೇಡಿ.

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಮೂರನೇಯ ಉಡುಗೊರೆ, ಗಣಪತಿಯ ಫೋಟೋ, ಅಥವಾ ಮೂರ್ತಿ. ಮಗಳು ಗಂಡನ ಮನೆಗೆ ಹೋಗುವಾಗ ನೀವು ಅವಳಿಗೆ ಎಂಥದ್ದೇ ಗಿಫ್ಟ್ ಕೊಡಿ. ಆದ್ರೆ ಗಣೇಶನ ಮೂರ್ತಿ ಮಾತ್ರ ಕೊಡಬೇಡಿ. ಯಾಕಂದ್ರೆ ನೀವು ನಿಮ್ಮ ಮನೆಯ ಲಕ್ಷ್ಮೀಯನ್ನ ಕಳುಹಿಸುವುದರ ಜೊತೆ, ಗಣೇಶನನ್ನೂ ಆಕೆಯೊಂದಿಗೆ ಕಳುಹಿಸಿದರೆ, ನಿಮ್ಮ ಮನೆ ಉದ್ಧಾರವಾಗುವುದಿಲ್ಲ. ತವರು ಮನೆ ಬಡತನದಿಂದ ಕೂಡಿರಬಾರದು ಅಂದ್ರೆ, ಗಣಪತಿಯನ್ನು ಗಿಫ್ಟ್ ಆಗಿ ಕೊಡಬೇಡಿ..

- Advertisement -

Latest Posts

Don't Miss