Health Tips: ಮೊದಲೆಲ್ಲ ಯಾವಾಗ ನೀರಿನ ಚೀಲ ಒಡೆಯುತ್ತಿತ್ತೋ, ಅಥವಾ ಹೊಟ್ಟೆ ನೋವು ಶುರುವಾಗುತ್ತಿತ್ತೋ, ಆವಾಗ ಆಸ್ಪತ್ರೆಗೆ ಓಡುತ್ತಿದ್ದರು. ಆದರೆ ಈಗ ಕೆಲವು ಆಸ್ಪತ್ರೆಗಳಲ್ಲಿ ಹೆರಿಗೆ ನೋವಿನಿಂದ ಹೆಣ್ಣು ಮಕ್ಕಳು ಬೊಬ್ಬೆ ಹಾಕುತ್ತಾರೆಂಬ ಕಾರಣಕ್ಕೆ, ಇಲ್ಲ ಸಲ್ಲದ ಕಾರಣ ಕೊಟ್ಟು, ಸಿಸರೀನ್ ಮಾಡಿಬಿಡುತ್ತಾರೆ. ಇನ್ನು ಕೆಲ ಗರ್ಭಿಣಿಯರೇ, ತಮಗೆ ನಾರ್ಮಲ್ ಡಿಲೆವರಿ ಬೇಡಾ, ಸಿಸರಿನ್ ಮಾಡಿಸಿಬಿಡಿ ಎನ್ನುತ್ತಾರೆ. ಮತ್ತೆ ಕೆಲವರು ಉತ್ತಮ ಮುಹೂರ್ತ ನೋಡಿ, ಈ ಸಮಯಕ್ಕೆ ಮಗು ಹುಟ್ಟಿದ್ರೆ ನನಗೆ ಲಕ್ ಅಂತಾ ಜ್ಯೋತಿಷಿಗಳು ಹೇಳಿದ್ದಾರೆ. ಹಾಗಾಗಿ ಈ ದಿನವೇ ನನಗೆ ಹೆರಿಗೆ ಮಾಡಿಸಿಕೊಡಿ ಎಂದು ಕೇಳುತ್ತಾರೆ. ಹೀಗೆ ಮಾಡುವುದು ತಪ್ಪು ಅಂತಾರೆ ವೈದ್ಯರು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಈ ಬಗ್ಗೆ ಮಾತನಾಡಿರುವ ವೈದ್ಯರು, ಸರಿಯಾಗಿ ವಾರ ಪೂರ್ಣವಾಗದಿದ್ದಲ್ಲಿ, ಇಷ್ಟಬಂದಂತೆ ಹೆರಿಗೆ ಮಾಡಿಸಲಾಗುವುದಿಲ್ಲ. ವಾರ ತುಂಬಿದರಷ್ಟೇ ಹೆರಿಗೆ ಮಾಡಿಸಬಹುದು. ಅಲ್ಲದೇ, ವಾರ ತುಂಬಿದರೂ ಮುಂದಿನ ದಿನಗಳು ಉತ್ತಮವಾಗಿದೆ ಎಂದರೆ, ಅದು ಸಾಧ್ಯವಾಗುವುದಿಲ್ಲ. ವಾರ ತುಂಬಿದ ಬಳಿಕ, ಹೊಟ್ಟೆ ನೋವು ಶುರುವಾದಾಗ, ಹೆರಿಗೆ ಮಾಡಿಸಲೇಬೇಕಾಗುತ್ತದೆ. ಇಂಥ ಸಂದರ್ಭವನ್ನು ನಿರ್ಲಕ್ಷಿಸಿದರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಹಾನಿಯುಂಟಾಗುತ್ತದೆ.
ಇನ್ನು ಈ ಬಗ್ಗೆ ವಿವರಿಸಿದ ವೈದ್ಯರು, ಮುಹೂರ್ತವಿಟ್ಟು ಹೆರಿಗೆ ಮಾಡಿಸಿಕೊಳ್ಳುವುದು ತುಂಬಾ ಅಪಾಯಕಾರಿ. ಇನ್ನು ತಾಯಿಗೆ ಬಿಪಿ, ಶುಗರ್ ಸೇರಿ ಯಾವುದೇ ಆರೋಗ್ಯ ಸಮಸ್ಯೆ ಇದ್ದಾಗ ಮಾತ್ರ, ಅವಧಿಪೂರ್ವವಾಗಿ ಹೆರಿಗೆ ಮಾಡಿಸಲಾಗುತ್ತದೆ. ಇನ್ನು ಹೆರಿಗೆ ಸರಿಯಾದ ಸಮಯಕ್ಕೆ ಆದರೆ, ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..