ಇಂಥವರಿಗೆ ಎಂದಿಗೂ ಸಹಾಯ ಮಾಡಲೇಬೇಡಿ ಅಂತಾರೆ ಚಾಣಕ್ಯರು..

Spiritual: ಮನುಷ್ಯ ಅಂದ ಮೇಲೆ ಕಷ್ಟ ಬಂದೇ ಬರುತ್ತದೆ. ಹಾಗೆ ಕಷ್ಟ ಬಂದಾಗ, ಅವನ ಸ್ನೇಹಿತ, ಸಂಬಂಧಿಕ ಅಥವಾ ಪರಿಚಯಸ್ಥರೋ, ಅವರಿಗೆ ಸಹಾಯ ಮಾಡುವುದು ಧರ್ಮ. ಆದರೆ ಚಾಣಕ್ಯರು ಕೆಲವರಿಗೆ ಸಹಾಯ ಮಾಡಲೇಬಾರದು ಎನ್ನುತ್ತಾರೆ. ಹಾಗಾದ್ರೆ ಯಾರಿಗೆ ನಾವು ಸಹಾಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯವರು ಅತೃಪ್ತರು. ಇವರಿಗೆ ನೀವು ಧನಸಹಾಯ ಮಾತ್ರವಲ್ಲ. ಜೀವ ಕೊಟ್ಟರೂ ಸಾಲುವುದಿಲ್ಲ. ಅವರ ಮನಸ್ಥಿತಿಯೇ ಅಷ್ಟು ಕೆಟ್ಟದ್ದಿರುತ್ತದೆ. ಅವರ ಬಳಿ ಎಷ್ಟೇ ಇದ್ದರೂ, ಅವರು ಯಾರಿಗೂ ಸಹಾಯ ಮಾಡುವುದಿಲ್ಲ. ಬದಲಾಗಿ ಎಲ್ಲರೂ ತಮಗೇ ಸಹಾಯ ಮಾಡುತ್ತಲೇ ಇರಬೇಕು. ಉಡುಗೊರೆ, ದುಡ್ಡು ಎಲ್ಲವನ್ನನೂ ಕೊಡುತ್ತಲೇ ಇರಬೇಕು ಎಂದು ಬಯಸುತ್ತಾರೆ. ಇಂಥ ಸ್ವಭಾವದವರಿಗೆ ಎಂದಿಗೂ ಸಹಾಯ ಮಾಡಬಾರದು. ಇಂಥವರಿಗೆ ಸಹಾಯ ಮಾಡಿದರೆ, ಕಲ್ಲಿನ ಮೇಲೆ ನೀರು ಸುರಿದಂತೆ ಎನ್ನುತ್ತಾರೆ ಚಾಣಕ್ಯರು.

ಎರಡನೇಯವರು ಕೆಟ್ಟ ಸ್ವಭಾವದವರು. ಕೆಟ್ಟ ಸ್ವಭಾವದವರಿಗೆ ಸಹಾಯ ಮಾಡಿದರೆ, ನಾವೇ ಪಶ್ಚಾತಾಪ ಪಡಬೇಕಾಗುತ್ತದೆ. ಇಂಥವರಿಗೆ ಸಹಾಯ ಮಾಡುವುದಷ್ಟೇ ಅಲ್ಲ. ಇಂಥವರ ಸಂಗವೂ ಮಾಡಬಾರದು. ಇವರ ಸಂಗ ಮಾಡಿದರೆ, ಮುಂದೆ ನಮಗೂ ಕಷ್ಟ ತಂದಿಡುತ್ತಾರೆ. ಹಾಗಾಗಿ ಇಂಥವರಿಗೆಂದೂ ನಾವು ಸಹಾಯ ಮಾಡಬಾರದು ಅಂತಾರೆ ಚಾಣಕ್ಯರು.

ಮೂರನೇಯವರು ಕೆಟ್ಟ ಚಟ ಹೊಂದಿರುವವರು. ಚಟ ಚಟ್ಟಕ್ಕೆ ಮೂಲ ಎನ್ನುತ್ತಾರೆ. ಒಮ್ಮೆ ಯಾವುದಾದರೂ ಚಟ ತಾಕಿದರೆ, ಸಾಯುವವರೆಗೂ ಆ ಚಟ ನಮ್ಮ ಬೆನ್ನು ಬಿಡುವುದಿಲ್ಲ. ಹಾಗಾಗಿ ಚಟ ಇರುವವನಿಗೆ ಯಾರೂ ಹೆಣ್ಣು ಕೊಡಲು ಇಚ್ಛಿಸುವುದಿಲ್ಲ. ಅಲ್ಲದೇ, ಚಟಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಅವನು ಅದಕ್ಕಾಗಿ ಕಳ್ಳತನ, ದರೋಡೆ, ಸಾಲ ಏನು ಬೇಕಾದರೂ ಮಾಡುತ್ತಾನೆ. ಹಾಗಾಗಿ ಚಟ ಇದ್ದವನಿಗೆ ಎಂದಿಗೂ ಸಹಾಯ ಮಾಡಬಾರದು ಅಂತಾರೆ ಚಾಣಕ್ಯರು.

ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..

ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

About The Author