Spiritual: ನಾವು ಉದ್ಧಾರವಾಗಲು ಕೆಲವೊಮ್ಮೆ, ಕೆಲವರು ಹೇಳುವ ಮಾತನ್ನು ಕೇಳುವ ಅನಿವಾರ್ಯತೆ ಇರುತ್ತದೆ. ಅದರಲ್ಲೂ ಮನೆಯಲ್ಲಿರುವ ಹಿರಿಯರು, ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾರೆ. ಅದು ನಮಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಕೆಲವರು ಹಿರಿಯರ ಮಾತನ್ನು ಕಡೆಗಣಿಸುತ್ತಾರೆ. ಆದರೆ ನಾವೆಂದು 4 ಜನರ ಮಾತನ್ನು ಕಡೆಗಣಿಸಬಾರದಂತೆ. ಹಾಗಾದ್ರೆ ಆ 4 ಜನ ಯಾರು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ತಾಯಿ. ತಾಯಿ ಕರುಣಾಮಯಿಯಾಗಿರುತ್ತಾಳೆ. ಕೆಲವೊಮ್ಮೆ ಮಕ್ಕಳಿಗೆ ಮುದ್ದು ಮಾಡಿ ಬುದ್ಧಿ ಹೇಳುತ್ತಾಳೆ. ಕೆಲವೊಮ್ಮೆ ಬೈದು ಬುದ್ಧಿ ಹೇಳುತ್ತಾಳೆ. ಆಕೆ ಎಂದಿಗೂ ತನ್ನ ಮಕ್ಕಳಿಗೆ ಕೆಟ್ಟದಾಗಲಿ ಎಂದು ಬಯಸುವುದಿಲ್ಲ. ಸದಾ ಮಕ್ಕಳ ಏಳಿಗೆಯನ್ನು ಬಯಸುತ್ತಾಳೆ. ಹಾಗಾಗಿ ತಾಯಿಯಾದವಳು ಮಕ್ಕಳಿಗೆ ಬುದ್ಧಿ ಹೇಳಿದರೆ, ಅಥವಾ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಿದರೆ, ಅವಳ ಮಾತನ್ನು ಕಡೆಗಣಿಸಬಾರದು.
ಎರಡನೇಯವರು ತಂದೆ. ಕೆಲವು ತಂದೆಯರು ಕೋಪಿಷ್ಠರಾಗಿರುತ್ತಾರೆ. ಕೆಲವರು ಸಮಾಧಾನಿಗಳಾಗಿರುತ್ತಾರೆ. ಬೈದು, ಗದರಿ, ಬಡಿದು ಬುದ್ಧಿ ಹೇಳಿದರೂ, ಅದು ತಮ್ಮ ಮಕ್ಕಳು ದಾರಿ ತಪ್ಪಬಾರದು. ಅವರಿಗೆ ಸದಾ ಒಳ್ಳೆಯದಾಗಬೇಕು. ನಾಲ್ಕು ಜನ ತಮ್ಮ ಮಕ್ಕಳ ಬಗ್ಗೆ ಒಳ್ಳೆಯದನ್ನ ಮಾತನಾಡಬೇಕು. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು ಎಂದು ತಂದೆ ಬುದ್ಧಿ ಹೇಳುತ್ತಾರೆ. ಹಾಗಾಗಿ ತಂದೆಯ ಮಾತನ್ನು ಎಂದಿಗೂ ಕಡೆಗಣಿಸಬಾರದು.
ಮೂರನೇಯವರು ಗುರು. ಜನ್ಮ ಕೊಟ್ಟು, ಜೀವನ ಪಾಠ ಹೇಳುವವಳು ತಾಯಿಯಾಗಿದ್ದರೆ. ಸಮಾಜದಲ್ಲಿ ಹೇಗೆ ಜೀವನ ಸಾಗಿಸಬೇಕು ಅಂತಾ ಹೇಳಿಕೊಡುವುದು ಗುರು. ಗುರುಗಳು ತಮ್ಮ ಜ್ಞಾನವನ್ನು ಮಕ್ಕಳಿಗೆ ಹಂಚುತ್ತಾರೆ. ಅದನ್ನು ಅಳವಡಿಸಿಕೊಂಡರೆ, ನಾವು ಉತ್ತಮ ಜೀವನ ನಡೆಸಬಹುದು. ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಹಾಗಾಗಿ ಗುರುಗಳ ಮಾತನ್ನು ಎಂದಿಗೂ ಕಡೆಗಣಿಸಬಾರದು.
ನಾಲ್ಕನೇಯವರು ಹಿರಿಯರು. ಹಿರಿಯರು ಜೀವನವನ್ನು ಎಲ್ಲ ರೀತಿಯಿಂದ ಅನುಭವಿಸಿದ ಅನುಭವಿಗಳಾಗಿರುತ್ತಾರೆ. ಹಾಗಾಗಿ ಮಕ್ಕಳು ತಪ್ಪು ಮಾಡಿದಾಗ, ಬುದ್ಧಿ ಹೇಳುತ್ತಾರೆ. ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಮಕ್ಕಳು ಯಾವ ಕೆಲಸ ಮಾಡಿದರೆ, ಅದಕ್ಕೆ ಯಾವ ರೀತಿಯ ಪ್ರತಿಫಲ ಬರುತ್ತದೆ..? ಎಂಥ ಊಟ ಸೇವಿಸಿದರೆ, ಆರೋಗ್ಯ ಹೇಗಿರುತ್ತದೆ ಎಂದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಹಿರಿಯರು ಬುದ್ಧಿ ಹೇಳಿದರೆ, ಅದನ್ನು ಎಂದಿಗೂ ಕಡೆಗಣಿಸಬೇಡಿ.
ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..