Wednesday, September 17, 2025

Latest Posts

ಮನೆಯಲ್ಲಿ ಈ ವಸ್ತುಗಳು ಎಂದಿಗೂ ಖಾಲಿಯಾಗಲು ಬಿಡಲೇಬೇಡಿ..

- Advertisement -

Spiritual: ಹಿಂದೂಗಳಲ್ಲಿ ಇರುವ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕೆಲವು ಪದಾರ್ಥಗಳು ಎಂದಿಗೂ ಖರ್ಚಾಗಬಾರದು. ಆ ವಸ್ತು ಇನ್ನೇನು ಖರ್ಚಾಗುತ್ತಿದೆ ಎಂದಾಗಲೇ, ಅದನ್ನು ಮತ್ತೊಂದಿಷ್ಟು ತರಿಸಿ ಇಟ್ಟುಕೊಳ್ಳಬೇಕು. ಯಾಕಂದ್ರೆ ಆ ವಸ್ತುಗಳು ಖಾಲಿಯಾದರೆ, ಅಪಶಕುನವೆಂದರ್ಥ. ಹಾಗಾದ್ರೆ ಎಂಥ ವಸ್ತುಗಳು ಖಾಲಿಯಾಗಬಾರದು ಅಂತಾ ತಿಳಿಯೋಣ ಬನ್ನಿ..

ಅಕ್ಕಿ, ಧಾನ್ಯಗಳ ಡಬ್ಬಿ: ಅಕ್ಕಿ ಡಬ್ಬಿ ಅಥವಾ ಯವುದೇ ಧಾನ್ಯಗಳ ಡಬ್ಬಿ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಅಕ್ಕಿ ಡಬ್ಬ ಖಾಲಿಯಾದರೆ, ಆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ. ಲಕ್ಷ್ಮೀಯ ಅವಕೃಪೆಗೆ ಪಾತ್ರರಾಗುತ್ತೀರಿ ಎಂದರ್ಥ. ಅಲ್ಲದೇ, ಅನ್ನದ ಕೊರತೆಯುಂಟಾಗುವ ಸೂಚನೆ ಇದು ಎಂಬರ್ಥವನ್ನು ಸೂಚಿಸುತ್ತದೆ. ಹಾಗಾಗಿ ಅಕ್ಕಿ ಖಾಲಿಯಾಗುವ ಮುನ್ನ, ಅಕ್ಕಿ ತರಿಸಿಟ್ಟುಕೊಳ್ಳಬೇಕು.

ಅರಿಶಿನ: ಅರಿಶಿನ ಮಂಗಳಕರ ಸಂಕೇತವಿರುವ ವಸ್ತು. ಹಾಗಾಗಿ ಮನೆಯಲ್ಲಿ ಎಂದಿಗೂ ಅರಿಶಿನ ಖಾಲಿಯಾಗಬಾರದು. ಅಡುಗೆಗೆ, ಪೂಜೆಗೆ ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನ ಖಾಲಿಯಾಗುವುದು ಎಂದರೆ, ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುವುದು ಎಂದರ್ಥ. ಹಾಗಾಗಿ ಮನೆಯಲ್ಲಿ ಎಂದಿಗೂ ಅರಿಶಿನ ಖಾಲಿಯಾಗದಂತೆ ನೋಡಿಕೊಳ್ಳಿ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ, ಅರಿಶಿನ ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಹಾಗಾಗಿ ಮನೆಯಲ್ಲಿ ಅರಿಶಿನ ಖಾಲಿಯಾಗಬಾರದು.

ಕುಂಕುಮ: ಕುಂಕುಮ ಹೆಣ್ಣಿನ ಸೌಭಾಗ್ಯದ ಸಂಕೇತ. ಹಾಗಾಗಿ ಕುಂಕುಮ ಎಂದಿಗೂ ಖಾಲಿಯಾಗಬಾರದು. ಮನೆಯಲ್ಲಿ ಸದಾ ಅರಿಶಿನ- ಕುಂಕುಮ ಇರುವುದು, ಸಕಾರಾತ್ಮಕತೆಯ, ಮಂಗಳಕರವಾದ ಸಂಕೇತವಾಗಿರುತ್ತದೆ. ಹಾಗಾಗಿ ಅರಿಶಿನ- ಕುಂಕುಮ ಎಂದಿಗೂ ಖಾಲಿಯಾಗದಂತೆ ನೋಡಿಕೊಳ್ಳಿ.

ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..

ಬ್ರಾಹ್ಮಿ ಮುಹೂರ್ತದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..?

- Advertisement -

Latest Posts

Don't Miss