Saturday, October 19, 2024

Latest Posts

ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..

- Advertisement -

ಕೆಲವರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾರೆ. ಹೆಚ್ಚು ಜಂಕ್ ಫುಡ್ ತಿನ್ನೋದಿಲ್ಲಾ. ಆದ್ರೂ ಕೂಡ ಅಂಥವರಿಗೆ ಬೊಜ್ಜು ಬೆಳೆಯುತ್ತದೆ. ಆದ್ರೆ ಅದಕ್ಕೆ ಕಾರಣವೇನೆಂದು ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ರಾತ್ರಿ ಊಟವಾದ ತಕ್ಷಣ ಮಲಗಿಬಿಡುತ್ತಾರೆ. ಇದೇ ಅವರ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾದ್ರೆ ನಾವು ರಾತ್ರಿ ಊಟವಾದ ಮೇಲೆ ಯಾವಾಗ ನಿದ್ದೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..?

ಮಧ್ಯಾಹ್ನ ಊಟವಾದ ತಕ್ಷಣ ಮಲಗಬಹುದು. ಆದ್ರೆ ರಾತ್ರಿ ಊಟವಾದ ತಕ್ಷಣ ಮಲಗಬಾರದು. ಬದಲಾಗಿ 2 ಗಂಟೆ ಬಿಟ್ಟು ಮಲಗಬೇಕಂತೆ. ನೀವು ಆ ಎರಡು ಗಂಟೆಯಲ್ಲಿ ನೀರು ಬಿಟ್ಟು ಮತ್ತೇನನ್ನೂ ಸೇವಿಸಬಾರದು. ಅಲ್ಲದೇ, ನೀವು ಒಂದು ವಾಕಿಂಗ್ ಬೇಕಾದ್ರೆ ಮಾಡಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವೇನಾದ್ರೂ ರಾತ್ರಿ ಊಟವಾದ ತಕ್ಷಣ ಮಲಗಿದ್ರೋ, ಅಥವಾ ಮಲಗುವ ಹೊತ್ತಿಗೆ ಏನಾದ್ರೂ ಸೇವನೆ ಮಾಡಿ, ಮಲಗಿದ್ರೋ, ನಿಮ್ಮ ಬೊಜ್ಜು ಬೆಳೆಯೋದು ಗ್ಯಾರಂಟಿ.

ಅಲ್ಲದೇ ನೀವು ಮಾರ್ನಿಂಗ್ ವಾಕ್ ಮಾಡುವವರಾಗಿದ್ರೆ, ನೀವು ಬೆಳಿಗ್ಗೆ ವಾಕ್ ಮಾಡುವ ಬದಲು, ಸಂಜೆ ವಾಕ್ ಮಾಡಿದ್ರೆ, ತುಂಬಾ ಒಳ್ಳೆಯದು. ಅದರಲ್ಲೂ ಲೋ ಬಿಪಿ ಇದ್ದವರು ರಾತ್ರಿ ಊಟವಾದ ಬಳಿಕ 500 ಹೆಜ್ಜೆ ನಡೆಯುವುದು ತುಂಬಾ ಒಳ್ಳೆಯದು. ಇದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ. ಲೋ ಬಿಪಿ ಇದ್ದವರಂತೂ ಯಾವುದೇ ಕಾರಣಕ್ಕೂ ರಾತ್ರಿ ಊಟವಾದ ತಕ್ಷಣ ಮಲಗಬೇಡಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಬೇಡಿ. ಅಂಥವರು ವಾಕಿಂಗ್ ಮಾಡಲೇಬೇಕು.

ನಿದ್ದೆ ಬರದಿದ್ದರೆ ಅಥವಾ ಗೊರಕೆ ಸಮಸ್ಯೆ ಇದ್ದಲ್ಲಿ ಈ ಪರಿಹಾರ ಮಾಡಿಕೊಳ್ಳಿ..

ಅಲ್ಲದೇ ಸಂಜೆ ವಾಕಿಂಗ್ ಮಾಡುವುದು ಮತ್ತು ರಾತ್ರಿ ಊಟವಾದ ಬಳಿಕ ವಾಕಿಂಗ್ ಮಾಡುವುದರಿಂದ ಬೊಜ್ಜು ಬೆಳೆಯುವುದಿಲ್ಲ. ತೂಕ ಇಳಿಕೆಗೆ ಇದು ಸಹಾಯಕವಾಗಿದೆ. ಅಲ್ಲದೇ ಬೆಳಿಗ್ಗೆ ವಾಕಿಂಗ್ ಬದಲು ಯೋಗ ಮಾಡುವುದು ಉತ್ತಮ.

- Advertisement -

Latest Posts

Don't Miss