Spiritual: ನಾವು ಧರಿಸುವ ಬಟ್ಟೆಗಳು ಸದಾ ಚೆಂದವಾಗಿ, ಸ್ವಚ್ಛವಾಗಿ ಇರಬೇಕು. ಇದು ಬರೀ ಫ್ಯಾಶನ್‌ಗಷ್ಟೇ ಬಟ್ಟೆ ಧರಿಸುವುದಲ್ಲ. ಬದಲಾಗಿ, ನಾವು ಧರಿಸುವ ಬಟ್ಟೆಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಸ್ವಚ್ಛವಾದ, ಹರಿಯದ ಬಟ್ಟೆ ಧರಿಸುವುದರಿಂದ, ಲಕ್ಷ್ಮೀ ದೇವಿ ಒಲಿಯುತ್ತಾಳೆ. ಆದರೆ ಕೆಲ ಬಟ್ಟೆಗಳನ್ನು ನಾವು ಧರಿಸುವುದರಿಂದ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತೇವೆ. ಹಾಗಾದರೆ ನಾವು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ತಿಳಿಯೋಣ ಬನ್ನಿ..
ಸ್ವಚ್ಛವಾಗಿರದ ಬಟ್ಟೆ. ನಾವು ಧರಿಸುವ ಬಟ್ಟೆಯನ್ನು ನಾವು ತೊಳೆದು, ಸ್ವಚ್ಛವಾಗಿ ಇರಿಸಬೇಕು. ಅಂಥ ಬಟ್ಟೆ ಧರಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಆದರೆ ಸರಿಯಾಗಿ ಬಟ್ಟೆ ತೊಳೆಯದೇ, ಬೆವರಿರುವ ಬಟ್ಟೆಯನ್ನು ಧರಿಸಿದರೆ, ನಮ್ಮಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದ ಮಾನಸಿಕ ನೆಮ್ಮದಿ, ದೈಹಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಎಲ್ಲವೂ ಹಾಳಾಗುತ್ತದೆ.
ಸುಟ್ಟ ಬಟ್ಟೆ. ಬಟ್ಟೆ ಸುಟ್ಟರೆ, ಅದನ್ನು ಅಪಶಕುನ, ಅಮಂಗಳ ಎಂದು ಕರೆಯಲಾಗುತ್ತದೆ. ಹಾಗಾಗಿ ಅಂಥ ಬಟ್ಟೆಯನ್ನು ಧರಿಸಬಾರದು ಎಂದು ಹೇಳಲಾಗುತ್ತದೆ. ಅಂಥ ಬಟ್ಟಯನ್ನು ಮರುಬಳಕೆ ಮಾಡಿದ್ದಲ್ಲಿ, ನಿಮ್ಮ ಮಾನಸಿಕ ನೆಮ್ಮದಿ ಮತ್ತು, ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂಬ ನಂಬಿಕೆ ಇದೆ.
ಹರಿದ ಜೇಬಿರುವ ಅಥವಾ ಹರಿದಿರುವ ಬಟ್ಟೆ. ಇಂಥ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಕೂಡ ಹದಗೆಡುತ್ತದೆ. ಹರಿದ ಜೇಬಿರುವ ಬಟ್ಟೆ ಧರಿಸಬಾರದೋ, ಅಂತೆಯೇ, ಹರಿದಿರುವ ಪರ್ಸ್ ಸಹ ಬಳಸಬಾರದು.
ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..
ಇಂಥ ಊಟವನ್ನು ಎಂದಿಗೂ ತಿನ್ನಬೇಡಿ: ಇದು ನಿಮ್ಮ ಅದೃಷ್ಟವನ್ನು ಕಸಿಯುತ್ತದೆ..