Thursday, July 25, 2024

Latest Posts

777 ಚಾರ್ಲಿ ಪ್ರಿಮೀಯರ್ ಶೋ ನೋಡಿದ ಮಂದಿ ಹೇಗೆ ರಿಯಾಕ್ಟ್ ಮಾಡಿದ್ದಾರೆ ಗೊತ್ತಾ..?

- Advertisement -

777 ಚಾರ್ಲಿ ಸಿನಿಮಾದ ಪ್ರಿಮಿಯರ್ ಶೋ ಬೇರೆ ಬೇರೆ ರಾಜ್ಯದಲ್ಲಿ ತೋರಿಸಿದ್ದು, ಹಲವು ಪ್ರೇಕ್ಷಕರು ಕಣ್ಣೀರಾಗಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ, ಮನ ಮಿಡಿಯುವಂತಿದೆ ಎಂದು ಚಾರ್ಲಿ ಮತ್ತು ಧರ್ಮಾ ನಟನೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಲ್ಲದೇ ಈ ಸಿನಿಮಾವನ್ನ ಯಾವುದೇ ಬೇರೆ ಸಿನಿಮಾಗೆ ಹೋಲಿಸಲು ಸಾಧ್ಯವಿಲ್ಲ. ಇದು ಬೇರೆ ರೀತಿಯದ್ದೇ ಸಿನಿಮಾ, ಮನುಷ್ಯನ ಜೀವನಕ್ಕೆ ಸಂಬಂಧಪಟ್ಟಿದ್ದಾಗಿದೆ, ಇದನ್ನು ನೋಡಿ ಹಲವರು ಕಣ್ಣೀರು ಹಾಕಿದ್ದಾರೆ ಎಂದು ಪ್ರೇಕ್ಷಕರು ಅನಿಸಿಕೆ ಹೇಳಿದ್ದಾರೆ.

ಲೋಕಸಭಾ ಸದಸ್ಯೆ ಮನೇಕಾ ಗಾಂಧಿ ಕೂಡ ಈ ಸಿನಿಮಾ ನೋಡಿದ್ದು, ಇಂಥ ಸಿನಿಮಾವನ್ನು ಜನ ನೋಡಿ ಸಪೋರ್ಟ್ ಮಾಡಬೇಕು. ನಾನು ಈ ಸಿನಿಮಾವನ್ನು ನೋಡಿದೆ. ನನಗೆ ತುಂಬಾ ಇಷ್ಟವಾಯ್ತು. ನಾನು ಈ ಸಿನಿಮಾಗೆ ಐದಕ್ಕೆ ಐದು ಮಾರ್ಕ್ಸ್ ಕೊಡ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಮನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ನಾಯಿಗಳಿದ್ದು, ಅವುಗಳನ್ನ ಕಾಪಾಡಿ ತಂದು ಸಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು 777 ಚಾರ್ಲಿ ಸಿನಿಮಾ ಟೇಲರ್ ನೋಡಿದ್ರೇನೆ, ಭಾವುಕವಾಗಿಸುವ ರೀತಿ ಇದೆ. ಇನ್ನು ಸಿನಿಮಾ ಹೆಂಗಿರ್ಬಹುದು ಅನ್ನೋದೇ ನೋಡುವವರಿಗೆ ಕುತೂಹಲ. ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ, ಧರ್ಮ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದು, ಪಶುವೈದ್ಯನ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನು ವೈದ್ಯೆಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ದಾನೀಶ್ ಶೇಠ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಪರಮವಾಹ್ ಸ್ಟುಡಿಯೋ ಪ್ರೊಡಕ್ಷನ್ ಬ್ಯಾನರ್‌ನ ಅಡಿಯಲ್ಲಿ ಮೂಡಿ ಬರುತ್ತಿರುವ 777 ಚಾರ್ಲಿ ಸಿನಿಮಾ ಇದೇ ಜೂನ್ 10ಕ್ಕೆ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಚಾರ್ಲಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.

 

 

 

 

 

 

- Advertisement -

Latest Posts

Don't Miss