ಮನುಷ್ಯ ಅಂದಮೇಲೆ ಕೋಪ, ಖುಷಿ, ಸುಖ ದುಃಖ ಎಲ್ಲವೂ ಇರುತ್ತದೆ. ದುಃಖವನ್ನ ಹೇಗಾದರೂ ತಡೆದುಕೊಳ್ಳಬಹುದು. ಖುಷಿಯನ್ನ ಅನುಭವಿಸಬಹುದು. ಆದ್ರೆ ಕೋಪವನ್ನ ಮಾತ್ರ ನಾವು ತಡೆದುಕೊಳ್ಳಬೇಕಾಗುತ್ತದೆ. ಯಾಕಂದ್ರೆ ನಾವು ಯಾವಾಗ ಕೋಪವನ್ನು ತಡೆದುಕೊಳ್ಳುವುದಿಲ್ಲವೋ, ಆವಾಗ ನಮ್ಮಿಂದ ಅಚಾತುರ್ಯ ನಡೆದು ಹೋಗುತ್ತದೆ. ಹಾಗಾಗಿ ತಾಳ್ಮೆಗೆಡದೇ, ಸುಮ್ಮನಿರುವುದು ಲೇಸು. ಹಾಗಾದ್ರೆ ನಾವ್ಯಾಕೆ ಸಿಟ್ಟು ಮಾಡಿಕೊಳ್ಳಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ನಿದ್ರೆಯ ಮಧ್ಯದಲ್ಲಿ ನೀರು ಕುಡಿಯುವ ಅಭ್ಯಾಸವಿದೆಯೇ? ಈ ವಿಷಯಗಳನ್ನು ತಿಳಿದರೆ ಶಾಕ್ ಆಗುತ್ತೀರಿ..!
ಕೆಲವರಿಗೆ ಕೋಪ ಬಂದರೆ, ಸಡನ್ನಾಗಿ ಅದನ್ನ ತೋರಿಸಿಬಿಡ್ತಾರೆ. ಹೊಡೆಯುವುದೋ, ಬೈಯ್ಯುವುದೋ, ಅಥವಾ ಕೈಗೆ ಸಿಕ್ಕ ವಸ್ತುವನ್ನ ಒಡೆದು ಹಾಕುವುದೋ, ಹೀಗೆ ಕೋಪವನ್ನ ತೋರಿಸುತ್ತಾರೆ. ಆದ್ರೆ ಇದರಿಂದ ಯಾರಿಗೆ ನಷ್ಟವಾಗತ್ತೆ..? ಕೋಪ ತೋರಿಸಿದವರಿಗೇ ನಷ್ಟವಾಗತ್ತೆ. ನೀವು ಯಾರಿಗೆ ಹೊಡೆದಿರುತ್ತೀರೋ, ಬೈಯ್ದಿರುತ್ತೀರೋ, ಅವರ ದೃಷ್ಟಿಯಲ್ಲಿ ನೀವು ಕೆಟ್ಟವರಾಗುತ್ತೀರಿ. ಒಡೆದು ಹಾಕಿದ ವಸ್ತು, ಹಾಳಾಗಿ ಹೋಗುತ್ತದೆ. ಮತ್ತೆ ಅದನ್ನ ಕೊಂಡುಕೊಳ್ಳಲು ದುಡ್ಡು ವ್ಯರ್ಥ ಮಾಡಬೇಕಾಗುತ್ತದೆ. ಹಾಗಾಗಿ ಕೋಪವನ್ನ ನಿಯಂತ್ರಣದಲ್ಲಿಡಬೇಕು.
ಗೌತಮ ಬುದ್ಧ ಕೋಪದ ಬಗ್ಗೆ ಒಂದು ಮಾತನ್ನ ಹೇಳಿದ್ದಾರೆ. ಕೋಪವೆಂದರೆ, ಬಿಸಿ ಬಿಸಿ ಕೆಂಡವಿದ್ದಂತೆ. ನೀವು ಆ ಕೆಂಡವನ್ನು ಬೇರೆಯವರ ಮೇಲೆ ಎಸೆಯಲು ಹೋಗುತ್ತೀರಿ. ಆದ್‌ರೆ ನೀವು ಆ ಕೆಂಡವನ್ನು ಹಿಡಿದ ಕಾರಣ, ನಿಮ್ಮ ಕೈ ಸುಟ್ಟು ಹೋಗುತ್ತದೆ. ಅದೇ ರೀತಿ ಕೋಪ ಕೂಡ ಕೆಂಡವಿದ್ದಂತೆ. ನೀವು ಆ ಕೋಪವನ್ನು ಬೇರೆಯವರ ಮೇಲೆ ತೋರಿಸಲು ಹೋದರೆ, ನಿಮಗೇ ನಷ್ಟವಾಗುತ್ತದೆ.
ಸೋಂಪು ನೀರು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ..ಸೌಂದರ್ಯ ಹೆಚ್ಚುತ್ತದೆ..!
ಎಷ್ಟೋ ಮನೆಯಲ್ಲಿ ಕೋಪದಿಂದ, ತಾಳ್ಮೆಗೆಟ್ಟು ಸಂಬಂಧವೇ ಹಾಳಾಗಿ ಹೋಗಿದೆ. ಕೋಪದಲ್ಲಿ ಎಷ್ಟೋ ಜನರ ಪ್ರಾಣ ಹೋಗಿದೆ. ಆ ಕೋಪವೆಲ್ಲ ಶಾಂತವಾಗಿ, ನಾನು ಮಾಡಿದ್ದು ತಪ್ಪು ಅನ್ನೋ ಪಶ್ಚಾತಾಪದ ಅರಿವಾಗುವಷ್ಟರಲ್ಲಿ, ಅನಾಹುತ ನಡೆದೇ ಹೋಗಿರುತ್ತದೆ. ನಂತರ ಪಶ್ಚಾತಾಪ ಮಾಡಿಯೂ ಉಪಯೋಗವಾಗುವುದಿಲ್ಲ.