Sunday, June 1, 2025

Latest Posts

ಈಗ ಮನೆಯಲ್ಲೇ ಸುಲಭವಾಗಿ ತಯಾರಿಸಿ ಮ್ಯಾಂಗೋ ಫಾಲೂದಾ..

- Advertisement -

ಪಾಲೂದಾ, ಐಸ್‌ಕ್ರೀಮ್ ತಿನ್ನೋಕ್ಕೆ ಮೊದಲೆಲ್ಲ, ಹೊಟೇಲ್‌ಗಳಿಗೆ ಹೋಗಬೇಕಿತ್ತು. ಆದ್ರೀಗ ರೆಸಿಪಿಯನ್‌ನ ತಿಳಿದುಕೊಂಡು, ನಮಗೆ ಬೇಕಾದ್ದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಸುಲಭವಾಗಿ ಮ್ಯಾಂಗೋ ಫಾಲೂದಾ ತಯಾರಿಸುವುದು ಹೇಗೆ ಅಂತಾ ತಿಳಿಸಲಿದ್ದೇವೆ.

ಮಾಡುವ ವಿಧಾನ: 2 ಕಪ್ ನೀರನ್ನು ಕುದಿಸಿ. ಇದಕ್ಕೆ 1 ಪ್ಯಾಕೇಟ್ ಸ್ಟ್ರಾಬೇರಿ ಜೆಲ್ಲಿ ಪುಡಿ ಸೇರಿಸಿ. ಚೆನ್ನಾಗಿ ಕೈಯಾಡಿಸುತ್ತಾ ಜೆಲ್ಲಿ ತಯಾರಿಸಿ. ಬಳಿಕ ಇದನ್‌ನು ಸೆಟ್ ಮಾಡಲು ಫ್ರಿಜ್‌ನಲ್ಲಿರಿಸಿ. ಜೆಲ್ಲಿ ಸೆಟ್ ಆದ ಬಳಿಕ, ಚೌಕಾಕಾರದಲ್ಲಿ ಚಿಕ್ಕ ಚಿಕ್ಕ ತುಂಡುಗಳನ್ನು ಕತ್ತರಿಸಿ. ಈಗ ಒಂದು ಸ್ಪೂನ್ ಚೀಯಾ ಸೀಡ್ಸ್ ನೆನೆಸಲು ಇಡಿ. ಒಂದು ಗಂಟೆಯಾದರೂ ಚೀಯಾ ಸೀಡ್ಸ್ ನೆನೆಯಬೇಕು.

ಈಗ ಮತ್ತೊಮ್ಮೆ 1 ಕಪ್ ನೀರನ್ನು ಕುದಿಸಲು ಇರಿಸಿ, ಇದಕ್ಕೆ ಫಾಲೂದಾಗೆ ಹಾಕುವಂಥ ಶ್ಯಾವಿಗೆ ಸಿಗುತ್ತದೆ. ಒಂದು ಕಪ್ ಶ್ಯಾವಿಗೆಯನ್ನು ಸೇರಿಸಿ, ಅದು ಕೊಂಚ ಬೆಂದ ಬಳಿಕ ಗ್ಯಾಸ್ ಆಫ್ ಮಾಡಿ, ನೀರಿನಿಂದ ಶ್ಯಾವಿಗೆಯನ್ನು ಬೇರ್ಪಡಿಸಿ. ಈಗ ಫಾಲೂದಾಗೆ ಬೇಕಾದ ಶ್ಯಾವಿಗೆ ರೆಡಿ.

ಈಗ ಮೊದಲೇ ಕುದಿಸಿ, ಆರಿಸಿ, ಪ್ರಿಜ್‌ನಲ್ಲಿರಿಸಿ ತಣ್ಣಗಾದ 2 ಕಪ್ ಹಾಲನ್ನು ತೆರೆದುಕೊಂಡು ಅದರಲ್ಲಿ ಎರಡು ಸ್ಪೂನ್ ಸಕ್ಕರೆ ಹಾಕಿ. ಈಗ ಫಾಲೂದಾ ಸೆಟ್ ಮಾಡಿ. ಒಂದು ಗ್ಲಾಸ್‌್ ತೆಗೆದುಕೊಂಡು, ಕೊಂಚ ಚೀಯಾ ಸೀಡ್ಸ್, ಕೊಂಚ ಜೆಲ್ಲಿ, ಎರಡು ಸ್ಪೂನ್ ಮ್ಯಾಂಗೋ ಪಲ್ಪ್, 2 ಸ್ಪೂನ್‌ ಶ್ಯಾವಿಗೆ, ಹಾಲು, ಐಸ್‌ಕ್ರೀಮ್, ಸಣ್ಣಗೆ ಕತ್ತರಿಸಿದ ಮ್ಯಾಂಗೋ, ಇದರ ಮೇಲೆ ಮತ್ತೆ ಜೆಲ್ಲಿ, ಸ್ಟ್ರಾಬೇರಿ ಸಿರಪ್, ಡ್ರೈಫ್ರೂಟ್ಸ್ ಹಾಕಿ ಗಾರ್ನಿಶ್ ಮಾಡಿದ್ರೆ, ಮ್ಯಾಂಗೋ ಫಾಲೂದಾ ರೆಡಿ.

ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

- Advertisement -

Latest Posts

Don't Miss