- Advertisement -
ಹಣ್ಣಿನಿಂದ ಮಿಲ್ಕ್ ಶೇಕ್ ತಯಾರಿಸಿ ನೀವು ಕುಡಿದಿರಬಹುದು. ಆದ್ರೆ ನಾವಿವತ್ತು ಓರಿಯೋ ಬಿಸ್ಕೇಟ್ ಬಳಸಿ ಹೇಗೆ ಓರಿಯೋ ಮಿಲ್ಕ್ ಶೇಕ್ ತಯಾರಿಸೋದು ಅಂತಾ ಹೇಳಲಿದ್ದೇವೆ. ಹಾಗಾದ್ರೆ ಓರಿಯೋ ಮಿಲ್ಕ್ ಶೇಕ್ ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕು ಓರಿಯೋ ಬಿಸ್ಕೇಟ್ಸ್, ಅರ್ಧ ಬಾಳೆಹಣ್ಣು, ಒಂದು ಗ್ಲಾಸ್ ಕುದಿಸಿ, ತಣಿಸಿದ ಹಾಲು, ಅವಶ್ಯಕತೆ ಇದ್ದಷ್ಟು ಸಕ್ಕರೆ, ಒಂದು ಕಪ್ ಐಸ್‌ಕ್ರೀಮ್.
ಮಾಡುವ ವಿಧಾನ: ಬ್ಲೆಂಡರ್‌ಗೆ ಓರಿಯೋ ಬಿಸ್ಕೇಟ್ಸ್, ಬಾಳೆಹಣ್ಣು, ಹಾಲು, ಸಕ್ಕರೆ ಮತ್ತು ಐಸ್‌ಕ್ರಿಮ್ ಹಾಕಿ ಬ್ಲೆಂಡ್ ಮಾಡಿದ್ರೆ ಓರಿಯೋ ಮಿಲ್ಕ್ ಶೇಕ್ ರೆಡಿ. ಫ್ರೆಶ್ ಕ್ರೀಮ್, ಓರಿಯೋ ಬಿಸ್ಕೇಟ್, ಮತ್ತು ಸ್ಟ್ರಾಬೇರಿ ಜೊತೆ ಗಾರ್ನಿಶ್ ಮಾಡಿ, ಸರ್ವ್ ಮಾಡಿ.
- Advertisement -