Friday, June 20, 2025

Latest Posts

ಮನೆಯಲ್ಲೇ ತಯಾರಿಸಿ ಹೊಟೇಲ್ ಸ್ಟೈಲ್ ಪನೀರ್ ಪಲಾವ್..

- Advertisement -

ಪಲಾವ್ ಅಂದ್ರೆ ಹಲವರಿಗೆ ಪ್ರೀತಿಪಾತ್ರವಾದ ತಿಂಡಿ. ಕೊಟ್ರೆ ಮೂರು ಹೊತ್ತು ಪಲಾವ್ ತಿಂತೀನಿ ಅನ್ನುವವರೂ ಇದ್ದಾರೆ. ಹಾಗಾಗಿ ನಾವಿವತ್ತು, ಪನೀರ್ ಪಲಾವ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋದನ್ನ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಒಂದು ಬೌಲ್ ಪನೀರ್, ಎರಡು ಸ್ಪೂನ್ ಮೊಸರು, ಮೂರು ಕಪ್ ರೈಸ್, ಶುಂಠಿ- ಬೆಳ್ಳುಳ್ಳು- ಹಸಿಮೆಣಸಿನಕಾಯಿ ಪೇಸ್ಟ್, ಅರಿಶಿನ ಪುಡಿ, ಎರಡು ಸ್ಪೂನ್ ಗರಂ ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಬೀನ್ಸ್, ಅರ್ಧ ಬೌಲ್ ನೆನೆಸಿದ ಬಟಾಣಿ, ನಾಲ್ಕು ಸ್ಪೂನ್ ತುಪ್ಪ, 2 ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಪ್ಯಾನ್‌ಗೆ ಬೆಣ್ಣೆ ಹಾಕಿ, ಪನೀರ್ ಹುರಿದುಕೊಳ್ಳಿ. ನಂತರ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಕೊಂಚ ಬಿಸಿಯಾದ ಬಳಿಕ, ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು ಹಾಕಿ ಹುರಿಯಿರಿ. ನಂತರ ಇದಕ್ಕೆ ಈರುಳ್ಳಿ ಸೇರಿಸಿ ಹುರಿಯಿರಿ.

ಇದಾದ ಬಳಿಕ, ಕ್ಯಾರೆಟ್, ಬೀನ್ಸ್, ಬಟಾಣಿ, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಹುರಿಯಿರಿ. ಈಗ ಪನೀರ್, ಅಕ್ಕಿ ಸೇರಿಸಿ ಕೊಂಚ ಮಿಕ್ಸ್ ಮಾಡಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಎರಡು ಸ್ಪೂನ್ ಮೊಸರು, ಸಕ್ಕರೆ- ಉಪ್ಪು, ನೀರು ಸೇರಿಸಿ ಮಿಕ್ಸ್ ಮಾಡಿ, ಮೂರು ವಿಶಲ್ ಹೊಡೆಸಿದ್ರೆ, ಪಲಾವ್ ರೆಡಿ. ಇದಕ್ಕೆ ಕೊತ್ತೊಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ.

- Advertisement -

Latest Posts

Don't Miss