ಪನೀರ್‌ನಿಂದ ಮಾಡಿದ ರೆಸಿಪಿ ಟೇಸ್ಟ್ ಮಾಡಬೇಕು ಅಂದ್ರೆ ನೀವು ಹೊಟೇಲ್‌ಗೆ ಹೋಗಲೇಬೇಕು ಅಂತಿಲ್ಲ. ಅದರ ಬದಲು ನೀವೇ ಮನೆಯಲ್ಲಿ ಪನೀರ್ ರೆಸಿಪಿ ರೆಡಿ ಮಾಡಬಹುದು. ಹಾಗಾಗಿ ನಾವಿಂದು ಪನೀರ್ ಘೀ ರೋಸ್ಟ್ ಮಾಡೋದು ಹೇಗೆ..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 400 ಗ್ರಾಂ ಪನೀರ್, ಅರ್ಧ ಸ್ಪೂನ್ ಅರಿಶಿನ ಪುಡಿ, 8 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ, ಸೋಂಪು, ಕಾಳುಮೆಣಸು, ಕೊತ್ತೊಂಬರಿ ಕಾಳು, 5 ಬೆಳ್ಳುಳ್ಳಿ ಎಸಳು, ಚಿಕ್ಕತುಂಡು ಹಸಿ ಶುಂಠಿ, 2 ಸ್ಪೂನ್ ಹುಣಸೆರಸ, ಕಾಲು ಕಪ್ ತುಪ್ಪ, 3 ಸಣ್ಣಗೆ ಕತ್ತರಿಸಿದ ಈರುಳ್ಳಿ, 5 ಕರಿಬೇವು, ಕಾಲು ಕಪ್ ಮೊಸರು, 1 ಸ್ಪೂನ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಪನೀರ್, ಅರಿಶಿನ, ಕೊಂಚ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ಪಕ್ಕಕ್ಕಿರಿಸಿ. ನಂತರ ಮಸಾಲೆ ತಯಾರಿಸಿಕೊಳ್ಳಿ. ಮೊದಲು ಪ್ಯಾನ್‌ಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಜೀರಿಗೆ, ಸೋಂಪು, ಕಾಳುಮೆಣಸು, ಕೊತ್ತೊಂಬರಿ ಕಾಳು ಇವಿಷ್ಟನ್ನ ಹಾಕಿ ಹುರಿಯಿರಿ. ಬಳಿಕ ಈ ಮಿಶ್ರಣವನ್ನ ತಣಿಸಿ, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಹುಣಸೆರಸ, ಇವಿಷ್ಟರ ಜೊತೆಗೆ ಕೊಂಚ ಕೊಂಚವೇ ನೀರು ಹಾಕುತ್ತಾ, ಮಸಾಲೆ ರುಬ್ಬಿಕೊಳ್ಳಿ.
ಈ ಮತ್ತೆ ಪ್ಯಾನ್ ಬಿಸಿ ಮಾಡಿ, ಅದರಲ್ಲಿ ತುಪ್ಪ ಹಾಕಿ. ಬಳಿಕ ಆಗಲೇ ರೆಡಿಮಾಡಿಟ್ಟುಕೊಂಡ ಪನೀರ್‌ನ್ನು ಸೇರಿಸಿ. ಪನೀರ್ ಒಡೆಯದಂತೆ, ಹುರಿಯಿರಿ. ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿ. ಈಗ ಅದೇ ಪ್ಯಾನ್‌ಗೆ ಈರುಳ್ಳಿ, ಕರಿಬೇವು, ಹಾಕಿ ಹುರಿಯಿರಿ. ಬಳಿಕ ತಯಾರಿಸಿಟ್ಟುಕೊಂಡ ಮಸಾಲೆ ಸೇರಿಸಿ, 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ನಂತರ ಇದಕ್ಕೆ ಮೊಸರು ಸೇರಿಸಿ, 1 ನಿಮಿಷ ಮಿಕ್ಸ್ ಮಾಡಿ.
ನಂತರ ಉಪ್ಪು, ಬೆಲ್ಲ, ಅರ್ಧ ಕಪ್ ನೀರು ಹಾಕಿ, ಕೊಂಚ ಕುದಿಸಿ. ಕೊನೆಯದಾಗಿ ಪನೀರ್ ಸೇರಿಸಿ, 5 ನಿಮಿಷ ಲಿಡ್ ಮುಚ್ಚಿ ಮಂದ ಉರಿಯಲ್ಲಿ ಬೇಯಿಸಿದರೆ, ಪನೀರ್ ಘೀ ರೋಸ್ಟ್ ರೆಡಿ. ಇದನ್ನು ಚಪಾತಿ, ರೋಟಿ, ನಾನ್, ಕುಲ್ಚಾದೊಂದಿಗೆ ಹಸಿ ಈರುಳ್ಳಿ ಜೊತೆ ಸವಿದರೆ ಟೇಸ್ಟಿಯಾಗಿರತ್ತೆ.
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 2