ಪನೀರ್ ಜಿಲೇಬಿ ರೆಸಿಪಿ

Recipe: ನಾರ್ಮಲ್ ಜಿಲೇಬಿಯನ್ನು ಎಲ್ಲರೂ ಟೇಸ್ಟ್ ಮಾಡೇ ಮಾಡಿರ್ತೀರಾ. ಆದರೆ, ಪನೀರ್ ಬೆರೆಸಿ ಮಾಡಿದ ಜಿಲೇಬಿ ತಿಂದಿರೋದು ತುಂಬಾ ಅಪರೂಪವಾಗಿರಬಹುದು. ಇಂದು ನಾವು ಪನೀರ್ ಜಿಲೇಬಿ ಹೇಗೆ ತಯಾರಿಸೋದು ಅಂತಾ ಹೇಳಲಿದ್ದೇವೆ.

ಮೂರು ಗ್ರಾಂ ಪನೀರನ್ನು ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಚಿಟಿಕೆ ಬೇಕಿಂಗ್ ಪೌಡರ್, 2 ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಕಪ್ ಮೈದಾ, ಅರ್ಧ ಕಪ್ ತಣ್ಣಗಿನ ಹಾಲು, ಇವಿಷ್ಟು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಅರಶಿನ ಅಥವಾ ಕೇಸರಿ ಬಣ್ಣವನ್ನ ಹಾಕಬೇಕು. ಇದಕ್ಕೆ ನೀವು ನೀರು ಸೇರಿಸಬಾರದು. ಈ ಜಿಲೇಬಿ ಹಿಟ್ಟು ರೆಡಿ.

ಈಗ ಸಕ್ಕರೆ ಪಾಕ ಮಾಡಿಕೊಳ್ಳಿ. ಗ್ಯಾಸ್ ಆನ್ ಮಾಡಿ, ಪ್ಯಾನ್ ಬಿಸಿಗಿಟ್ಟು, 300 ಗ್ರಾಮ್ ಸಕ್ಕರೆ, 2 ಏಲಕ್ಕಿ, ಹಾಕಿ ಸಕ್ಕರೆ ಪಾಕ ತಯಾರಿಸಿ. ಈಗ ಎಣ್ಣೆ ಬಿಸಿ ಮಾಡಿ, ಅದು ಕಾದ ಬಳಿಕ, ಜಿಲೇಬಿ ಮಾಡಿ. ರೆಡಿಯಾದ ಜಿಲೇಬಿಯನ್ನು ಪಾಕಕ್ಕೆ ಹಾಕಿದರೆ, ಪನೀರ್ ಜಿಲೇಬಿ ರೆಡಿ.

ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

About The Author