ಪಾನೀಪೂರಿಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಅನ್ನೋದು ಕೊರೋನಾ ಟೈಮಲ್ಲಿ ಎಲ್ಲರಿಗೂ ಗೊತ್ತಾಗಿತ್ತು. ಹೊರಗಡೆ ಪಾನೀಪೂರಿ ತಿನ್ನೋಕ್ಕಾಗದೇ, ಮನೆಯಲ್ಲಿ ರೆಸಿಪಿಯನ್ನು ಕಲಿತು ಪಾನೀಪೂರಿ ಮಾಡಿ, ತಿಂದಿದ್ದರು. ಆದ್ರೆ ಪಾರಿಪೂರಿಯೊಂದಿಗೆ ಸವಿಯುವ ಪಾನಿಯನ್ನ ಪರ್ಫೆಕ್ಟ್ ಆಗಿ, ಯಾರೂ ಮಾಡಿರೋಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವಿಂದು ಪಾನಿಪೂರಿಯ ಪಾನಿ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಖಾರಾ ಬೂಂದಿ, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಎರಡು ಸ್ಪೂನ್ ಜೀರಿಗೆ, 6 ರಿಂದ 7 ಒಣಮೆಣಸು, ಮೂರರಿಂದ ನಾಲ್ಕು ಹಸಿಮೆಣಸು, ಒಂದು ಕಟ್ಟು ಪುದೀನಾ, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಒಂದು ತುಂಡು ಹಸಿ ಶುಂಠಿ, 10 ಎಸಳು ಬೆಳ್ಳುಳ್ಳಿ, ಒಂದು ನಿಂಬೆ ಹಣ್ಣು, 50 ಗ್ರಾಂ ಬೆಲ್ಲ, ಅರ್ಧ ಕಪ್ ಹುಣಸೆಹಣ್ಣು, ಕೊಂಚ ಕೊಂಚ ಪೆಪ್ಪರ್ ಪುಡಿ, ಸೇಂಧವ ಲವಣ, ಚಾಟ್ ಮಸಾಲೆ, ಆಮ್‌ಚುರ್ ಪುಡಿ, ಜೀರಿಗೆ ಪುಡಿ, ಉಪ್ಪು ಇವೆಲ್ಲವನ್ನೂ ರುಚಿಗೆ ತಕ್ಕಷ್ಟು ಸೇರಿಸಿಕೊಳ್ಳಿ.
ಮಾಡುವ ವಿಧಾನ: ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಕೊತ್ತೊಂಬರಿ ಕಾಳು, ಜೀರಿಗೆ, ಒಣಮೆಣಸು ಹಾಕಿ, ಚೆನ್ನಾಗಿ ಹುರಿಯಿರಿ. ನಂತರ ಈ ಮಿಶ್ರಣ ತಣಿದ ಮೇಲೆ, ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿಕೊಳ್ಳಿ.
ಈಗ ಚಟ್ನಿ ತಯಾರಿಸಿಕೊಳ್ಳಿ. ಒಂದು ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಇವೆಲ್ಲವನ್ನು ರುಬ್ಬಿ ಚಟ್ನಿ ತಯಾರಿಸಿಕೊಳ್ಳಿ. ನಂತರ ಈ ಚಟ್ನಿಗೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ.
ಈಗ ಕೊಂಚ ಬಿಸಿ ನೀರಿನಲ್ಲಿ ಹುಣಸೆಹಣ್ಣನ್ನು ಮತ್ತು ಬೆಲ್ಲವನ್ನು ಸಪರೇಟ್ ಆಗಿ ನೆನೆಸಿಡಿ. 10 ನಿಮಿಷ ಬಿಟ್ಟು ಹುಣಸೆ ಹಣ್ಣಿನ ರಸವನ್ನು ತೆಗೆದು, ಗಾಳಿಸಿಕೊಳ್ಳಿ. ಈ ಹುಣಸೆ ನೀರಿಗೆ ಬೆಲ್ಲದ ನೀರನ್ನ ಕೂಡ ಗಾಳಿಸಿ ಸೇರಿಸಿ. ಈಗ ಹುಣೆ ಮತ್ತು ಬೆಲ್ಲದ ನೀರು ರೆಡಿ. ಇದರ ಎರಡು ಭಾಗವಾಗಿ ವಿಂಗಡಿಸಿ. ಮತ್ತು ಒಂದು ಭಾಗ ಹಾಗೇ ಇರಲಿ.
ಇನ್ನೊಂದು ಬೌಲ್‌ನಲ್ಲಿರುವ ನೀರಿಗೆಈಗಾಗಲೇ ತಯಾರಿಸಿ ಇಟ್ಟುಕೊಂಡ ಪುದೀನಾ ಚಟ್ನಿಯನ್ನು ಸೇರಿಸಿ. ಜೊತೆಗೆ 2 ಸ್ಪೂನ್ ತಯಾರಿಸಿಟ್ಟುಕೊಂಡ ಮಸಾಲೆ ಪುಡಿಯನ್ನ ಸೇರಿಸಿ. ಇದರೊಂದಿಗೆ ಪೆಪ್ಪರ್ ಪುಡಿ, ಸೇಂಧವ ಲವಣ, ಚಾಟ್ ಮಸಾಲೆ, ಆಮ್‌ಚುರ್ ಪುಡಿ, ಜೀರಿಗೆ ಪುಡಿ, ಉಪ್ಪು ಇವುಗಳನ್ನ ಸೇರಿಸಿಕೊಳ್ಳಿ. ಪಾನೀಪುರಿ ತಿನ್ನುವ ಹೊತ್ತಿಗೆ, ಈ ನೀರಿಗೆ ಈರುಳ್ಳಿ ಮತ್ತು ಬೂಂದಿ ಆ್ಯಡ್ ಮಾಡಿದ್ರೆ ಆಯ್ತು..
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?