Saturday, July 27, 2024

Latest Posts

ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..?

- Advertisement -

Health Tips: ಮಗು ಹೊಟ್ಟೆಯಲ್ಲಿ ಇದೆ ಅಂತಾ ಗೊತ್ತಾದಾಗಿನಿಂದ ಅದಕ್ಕೆ ಶಿಕ್ಷಣ ಕೊಡಿಸಿ, ಕೆಲಸ ಸಿಗುವವರೆಗೂ ಅದು ಅಪ್ಪ ಅಮ್ಮನ ಜವಾಬ್ದಾರಿಯಾಗಿರುತ್ತದೆ. ಅದು ಯಾವುದರಲ್ಲೂ ವೀಕ್ ಇದ್ದರೂ ಅದಕ್ಕೆಲ್ಲ ಅಪ್ಪ ಅಮ್ಮನೇ ಕಾರಣ ಅನ್ನುವ ಕಾಲವಿದು. ಹಾಗಾದ್ರೆ ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ಪುಟ್ಟ ಮಗು 6 ವಾರಕ್ಕಂದ್ರೆ, ತಮ್ಮವರನ್ನು ಗುರುತು ಹಿಡಿದು, ಆ ಊ ಎಂದು ಮಾತನಾಡಲು ಶುರು ಮಾಡುತ್ತದೆ. ಆರು ತಿಂಗಳಿಗಂದ್ರೆ, ಅಪ್ಪ ಅಮ್ಮನನ್ನು ತನ್ನದೇ ಭಾಷೆಯಲ್ಲಿ ಮಾತನಾಡಿಸುತ್ತದೆ. ಕೆಲವರು 8 ತಿಂಗಳಾಗುವುದರೊಳಗೆ ಅಮ್ಮ ಅಪ್ಪ ಅನ್ನಲು ಶುರು ಮಾಡುತ್ತಾರೆ. ಈ ವೇಳೆ ಅಪ್ಪ ಅಮ್ಮ ಅಥವಾ ಮನೆಮಂದಿ ಆ ಮಗುವಿನೊಂದಿಗೆ, ಚೆನ್ನಾಗಿ ಮಾತನಾಡಲು ಶುರು ಮಾಡಬೇಕು. ಆಗ ಮಗು ಕೂಡ ಸ್ಪಷ್ಟವಾಗಿ, ಬೇಗ ಮಾತನಾಡಲು ಕಲಿಯುತ್ತದೆ.

ಅಮ್ಮ ಅಪ್ಪ ಅಥವಾ ಮನೆ ಮಂದಿ ಬರೀ ಟಿವಿ ನೋಡುತ್ತ ಕುಳಿತರೆ, ಮೊಬೈಲ್, ಕಂಪ್ಯೂಟರ್‌ ಬಳಕೆಯಲ್ಲಿದ್ದರೆ, ಮಗು ಕೂಡ ಮಾತು ಕಲಿಯಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಮಕ್ಕಳು ಲೇಟಾಗಿ ಮಾತನಾಡಲು, ತಂದೆ ತಾಯಿಗಳೇ ಕಾರಣ ಅಂತಾ ಹೇಳ್ತಾರೆ. ಯಾಕಂದ್ರೆ ನಾವು ಮಕ್ಕಳೊಂದಿಗೆ ಮಾತನಾಡುತ್ತಲೇ ಇದ್ದರೆ, ಮಕ್ಕಳು ತಮ್ಮ ಗ್ರಾಸ್ಪಿಂಗ್ ಪವರ್‌ನಿಂದ ಆ ಮಾತನ್ನು ಕಲಿಯುತ್ತಾರೆ.

ಇನ್ನು ಮನೆಯಲ್ಲಿ ಮಾತನಾಡುವವರಿದ್ದು ಕೂಡ ಮಕ್ಕಳು 2-3 ವರ್ಷವಾದರೂ ಮಾತನಾಡುತ್ತಿಲ್ಲವೆಂದಲ್ಲಿ, ನೀವು ವೈದ್ಯರ ಬಳಿಕ ಕಿವಿ ಚೆಕಪ್ ಕೂಡ ಮಾಡಿಸಬೇಕಾಗುತ್ತದೆ. ಕಿವುಡು ತನ ಸಂಭವಿಸಿದರೆ, ಅಂಥ ಮಕ್ಕಳು ಮಾತನಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ವೈದ್ಯರ ಬಲಿ ಕರೆದೊಯ್ದು ಪರೀಕ್ಷೆ ಮಾಡಿಸುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss