Thursday, December 5, 2024

Latest Posts

ಮಕ್ಕಳಿಗೆ ಶಿಕ್ಷಣ ನೀಡದ ಪೋಷಕರು, ಮಕ್ಕಳಿಗೆ ಶತ್ರುಗಳಿದ್ದಂತೆ..

- Advertisement -

Spiritual: ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿರುವ ಚಾಣಕ್ಯರು, ತಂದೆ ತಾಯಿಯ ಬಗ್ಗೆಯೂ ಕೆಲ ಮಾತುಗಳನ್ನು ಹೇಳಿದ್ದಾರೆ. ತಂದೆ ತಾಯಿ ಅಂದರೆ ಹೇಗಿರಬೇಕು..? ಎಂಥ ತಂದೆ ತಾಯಿ ಮಕ್ಕಳಿಗೆ ಒಳ್ಳೆಯ ದಾರಿ ತೋರಿಸುತ್ತಾರೆ..? ಎಂಥ ತಂದೆ ತಾಯಿ ಮಕ್ಕಳಿಗೆ ಶತ್ರುಗಳಾಗಿರುತ್ತಾರೆ ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಯಾವ ತಂದೆ ತಾಯಿ ಮಕ್ಕಳಿಗೆ ಶಿಕ್ಷಣ ನೀಡುವುದಿಲ್ಲವೋ, ಅವರೇ ಮಕ್ಕಳಿಗೆ ನಿಜವಾದ ಶತ್ರುಗಳು ಎಂದು ಚಾಣಕ್ಯರು ಹೇಳಿದ್ದಾರೆ. ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಪೋಷಕರು ಸಮಾಜಕ್ಕೆ ಒಂದು ಕೊಡುಗೆಯನ್ನು ಕೊಟ್ಟಂತೆ ಎಂದು ಚಾಣಕ್ಯರು ಹೇಳಿದ್ದಾರೆ. ಏಕೆಂದರೆ ಯಾವ ಮಕ್ಕಳಿಗೆ ಶಿಕ್ಷಣವಿರುವುದಿಲ್ಲವೋ, ಅವರು ಸಮಾಜದಲ್ಲಿ ಅವಮಾನಿತರಾಗುತ್ತಾರೆ. ಹಂಸಕ್ಕೆ ಇರುವ ಕೊಂಕಿನಂತೆ, ಶಿಕ್ಷವಿಲ್ಲದ ಮಕ್ಕಳು ಎಂಬುವುದು ಚಾಣಕ್ಯರ ಮಾತು.

ಇಂದಿನ ಕಾಲದಲ್ಲಿ ಶಿಕ್ಷಣವಿಲ್ಲದ ಮಕ್ಕಳನ್ನು ಕಸಕ್ಕಿಂತ ಕಡೆಯಾಗಿ ನೋಡುತ್ತಾರೆ. ಹಲವರು ಶಿಕ್ಷಣವಿಲ್ಲದೇ, ಹಲವಾರು ವಿದ್ಯೆ ಕಲಿತು ಜೀವನ ಸಾಗಿಸುತ್ತಿದ್ದಾರೆ ಅನ್ನುವುದು ನಿಜ. ಆದರೂ ಶಿಕ್ಷಣವೆಂಬುದು ಎಲ್ಲ ಮಕ್ಕಳಿಗೂ ಅತ್ಯಗತ್ಯ. ಮಕ್ಕಳು ನಾಲ್ಕು ಜನರೊಡನೆ ಬೆರೆಯುವುದಕ್ಕೆ, ಹೋದಲ್ಲಿ ಹೇಗೆ ಇರಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ನಡತೆ ಇರಬೇಕು ಎಂದು ಅರಿಯಲು ಶಾಲೆಗೆ ಹೋಗುವುದು ಮುಖ್ಯವಾಗಿದೆ. ಹಾಗಾಗಿ ಎಲ್ಲ ಪೋಷಕರು, ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಲೇಬೇಕು.

ಶಿಕ್ಷಣವಿರುವ ಬುದ್ಧಿವಂತ ಮಕ್ಕಳ ನಡುವೆ ಇರುವ ಮೂರ್ಖ ಮಗುವನ್ನು ಎಲ್ಲರೂ ಹಂಗಿಸುತ್ತಾರೆ. ತಮಾಷೆ ಮಾಡುತ್ತಾರೆ. ಅವನ ಮನಸ್ಸನ್ನು ಘಾಸಿಗೊಳಿಸುತ್ತಾರೆ. ಹಾಗಾಗಿ ಅಂಥ ಅವಮಾನಗಳಿಗೆ ಕಾರಣವಾಗುವುದು ಆ ಮಗುವಿನ ಅಪ್ಪ ಅಮ್ಮ. ಹಾಗಾಗಿ ಪ್ರತೀ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅತ್ಯಗತ್ಯ.ಇದರಿಂದ ಮಗು ಸಮಾಜದಲ್ಲಿ ನಾಲ್ಕು ಜನರ ಮಧ್ಯೆ ಬುದ್ಧಿವಂತಿಕೆಯಿಂದ ವರ್ತಿಸುತ್ತದೆ. ಮುಂದೊಂದು ದಿನ ಗೌರವಾನ್ವಿತ ವ್ಯಕ್ತಿಯೂ ಆಗಬಹುದು. ಹಾಗಾಗಿ ಶಿಕ್ಷಣ ತುಂಬಾ ಮುಖ್ಯ ಎಂದಿದ್ದಾರೆ ಚಾಣಕ್ಯರು.

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..

- Advertisement -

Latest Posts

Don't Miss