ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಶೇಂಗಾ ಚಿಕ್ಕಿ ಅಂದ್ರೆ ಸ್ವೀಟ್ ಪ್ರಿಯರಿಗೆ ಸಖತ್ ಇಷ್ಟವಾಗುವ ತಿಂಡಿ. ಇರು ಬರೀ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ಚಳಿಗಾಲದಲ್ಲಿ ನೀವು ಪ್ರತಿದಿನ ಒಂದು ಶೇಂಗಾ ಚಿಕ್ಕಿ ತಿಂದ್ರೂ ನಿಮ್ಮ ಆರೋಗ್ಯ ಸರಿಯಾಗಿರತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಂದು ಕಪ್ ಶೇಂಗಾ ಹಾಕಿ, ಚೆನ್ನಾಗಿ ಹುರಿಯಿರಿ. ಶೇಂಗಾ ಸಿಪ್ಪೆ ಬೇರೆ ಮಾಡಿ. ಮತ್ತದೇ ಪ್ಯಾನ್‌ಗೆ ಕೊಂಚ ತುಪ್ಪ, ಒಂದು ಕಪ್ ಬೆಲ್ಲ ಹಾಕಿ, ಬೆಲ್ಲದ ಪಾಕ ಮಾಡಿಕೊಳ್ಳಿ. ಪಾಕ ಸರಿಯಾಗಿ ಆಗಬೇಕು. ಇಲ್ಲದಿದ್ದಲ್ಲಿ, ಶೇಂಗಾ ಚಿಕ್ಕಿ ಸರಿಯಾಗಿ ಬರುವುದಿಲ್ಲ. ಪಾಕಕ್ಕೆ ಹುರಿದ ಶೇಂಗಾ ಸೇರಿಸಿ. ಒಂದು ಪ್ಲೇಟ್‌ಗೆ ತುಪ್ಪ ಸವರಿ, ಶೇಂಗಾ ಚಿಕ್ಕಿ ಸೇರಿಸಿ, ಚೌಕಾಕಾರವಾಗಿ ಕತ್ತರಿಸಿದರೆ, ಶೇಂಗಾ ಚಿಕ್ಕಿ ರೆಡಿ.

ಕೆಂಪು ಸೇಬು, ಹಸಿರು ಸೇಬು..ಎರಡರಲ್ಲಿ ಯಾವುದು ತಿಂದರೆ ಉತ್ತಮ..?

ಹೆಚ್ಚು ಹಾಲು ಕುಡಿದರೆ ಇಷ್ಟೆಲ್ಲಾ ಸಮಸ್ಯೆಗಳು ಬರುತ್ತದಾ…?

About The Author