ನಾವು ನೀವು ಮಹಾಭಾರತ ಕಥೆಗಳನ್ನು ಕೇಳುತ್ತಲೇ ಇದ್ದೇವೆ. ಅಲ್ಲದೇ, ಧಾರಾವಾಹಿ ಮೂಲಕವೂ ಮಹಾಭಾರತವನ್ನ ನೋಡಿದ್ದೇವೆ. ಆದ್ರೆ ಹಲವು ಜನರಿಗೆ ಈ ಕಾಲದಲ್ಲಿ ನೀಡಲ್ಪಟ್ಟ ಶಾಪದ ಬಗ್ಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು, ಮಹಾಭಾರತ ಕಾಲದಿಂದಲೂ ಜನರಿಗೆ ತಟ್ಟಿದ 5 ಶಾಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ಶಾಪ ಯುಧಿಷ್ಠಿರ ಹೆಣ್ಣಿಗೆ ನೀಡಿದ ಶಾಪ. ಮಹಾಭಾರತ ಯುದ್ಧದಲ್ಲಿ ಕರ್ಣ ಸಾವನ್ನಪ್ಪಿದಾಗ, ಕುಂತಿ ದೇವಿ ಅವನ ಶವ ಎದುರಿಗೆ ಕುಳಿತು ದುಃಖಿಸುತ್ತಿದ್ದಳು. ಆಗ ಪಾಂಡವರು, ಅಮ್ಮಾ ನೀವು ನಮ್ಮ ಪರಮ ಶತ್ರುವಾದ ಕರ್ಣನಿಗಾಗಿ ದುಃಖಿಸುತ್ತಿರುವುದೇಕೆ ಎಂದು ಕೇಳಿದಳು. ಆಗ ಕುಂತಿ ಇವನು ನಿಮ್ಮೆಲ್ಲರ ಹಿರಿಯಣ್ಣ ಎಂಬ ಸತ್ಯವನ್ನ ಹೇಳಿದಳು.
ಆಗ ಯುಧಿಷ್ಠಿರ ನೀನು ಈ ಮೊದಲೇ ಯಾಕೆ ಈ ಮಾತನ್ನ ನಮಗೆ ಹೇಳಲಿಲ್ಲ..? ನಿಮ್ಮ ಮೌನದಿಂದಾಗಿ, ನಾವು ನಮ್ಮ ಅಣ್ಣನನ್ನೇ ಕೊಲ್ಲಬೇಕಾಯಿತು. ಹಾಗಾಗಿ ಭೂಮಿ, ಆಕಾಶ, ಅಗ್ನಿ ಎಲ್ಲರಿಗೂ ಸಾಕ್ಷಿಯಾಗಿ ನಾನಿಂದು, ಸ್ತ್ರೀ ಕುಲಕ್ಕೆ ಶಾಪ ನೀಡುತ್ತೇನೆ. ಇನ್ನು ಮುಂದೆ ಈ ಪ್ರಪಂಚದಲ್ಲಿ ಯಾವ ಹೆಣ್ಣೂ ತನ್ನ ಮನಸ್ಸಿನಲ್ಲಿ ಯಾವ ರಹಸ್ಯವನ್ನು ಇಟ್ಟಕೊಳ್ಳದಿರುವಂತಾಗಲಿ. ಈ ಕಾರಣಕ್ಕೆ ಹೆಣ್ಣು ಯಾರಿಗಾದರೂ ಒಬ್ಬರಿಗೆ ತನ್ನ ಜೀವನದ ರಹಸ್ಯವನ್ನ ಹೇಳೇ ಹೇಳುತ್ತಾಳೆ.
ಎರಡನೇಯ ಶಾಪ ಶೃಂಗಿ ಋಷಿ ಪರೀಕ್ಷಿತನಿಗೆ ಕೊಟ್ಟ ಶಾಪ. ಪಾಂಡವರು ತಮ್ಮ ಜೀವನವನ್ನು ಮುಗಿಸಿ, ಸ್ವರ್ಗಕ್ಕೆ ಹೋಗಬೇಕಾದರೆ, ತಮ್ಮ ರಾಜ್ಯ ಭಾರವನ್ನು ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನಿಗೆ ನೀಡಿದರು. ಒಮ್ಮೆ ಪರೀಕ್ಷಿತ ರಾಜ ಬೇಟೆಯಾಡಲು ಕಾಡಿಗೆ ಹೋದರು. ಆಗ ಅಲ್ಲಿ ಶಮಿ ಋಷಿ ಮೌನ ವೃತ ಧಾರಣೆ ಮಾಡಿ, ತಪಸ್ಸಿನಲ್ಲಿ ಲೀನವಾಗಿದ್ದರು. ಆದರೆ ಪರೀಕ್ಷಿತನಿಗೆ ಇದು ಗೊತ್ತಿರಲಿಲ್ಲ. ಹಾಗಾಗಿ ರಾಜ, ಋಷಿಗಳನ್ನ ಕೂಗಿ ಕೂಗಿ ಕರೆದ. ಎಷ್ಟೇ ಕರೆದರೂ ಋಷಿಗಳು ನೋಡದಿದ್ದಾಗ, ಕ್ರೋಧಿತನಾದ ರಾಜ, ಋಷಿಗಳ ಕುತ್ತಿಗೆಗೆ ಸತ್ತ ಹಾವನ್ನು ಹಾಕಿದ.
ಈ ವಿಷಯ ತಿಳಿದ ಶಮಿ ಋಷಿಯ ಪುತ್ರ ಶೃಂಗಿ, ಪರೀಕ್ಷಿತನನ್ನು ಕುರಿತು, ನಿನಗೆ 7 ದಿನಗಳ ಬಳಿಕ, ನಾಗ ಕಚ್ಚಿ ಸಾವನ್ನಪ್ಪು ಎಂದು ಶಾಪ ನೀಡಿದ. 7 ದಿನಗಳ ಬಳಿಕ ತಕ್ಷಕ ಎಂಬ ನಾಗ ಕಚ್ಚಿ, ಪರೀಕ್ಷಿತ ರಾಜ ಸಾವನ್ನಪ್ಪಿದ. ಪರೀಕ್ಷಿತ ರಾಜನ ಮರಣದ ನಂತರ, ಕಲಿಯುಗ ಶುರುವಾಯಿತು. ಯಾಕಂದ್ರೆ ಪರೀಕ್ಷಿತ ರಾಜ ಇದ್ದಾಗ, ಈ ಪ್ರಪಂಚ ಸುಖಮಯವಾಗಿತ್ತಂತೆ. ಆತನ ಸಾವಿನ ಬಳಿಕ ಹೆಚ್ಚಿನ ಸಾವು, ನೋವು, ಕಳ್ಳತನ, ಕೊಲೆ, ದರೋಡೆ ಹೆಚ್ಚಾಯಿತಂತೆ. ಅದೇ ಶಾಪವನ್ನ ಜನ ಇಂದಿಗೂ ಅನುಭವಿಸುತ್ತಿದ್ದಾರೆ.
ಮಹಾಭಾರತದಲ್ಲಿ ಇರುವ ಮೂರು, ನಾಲ್ಕು, ಮತ್ತು ಐದನೇ ಶಾಪವೇನು..? ಆ ಶಾಪವನ್ನು ಕೊಟ್ಟಿದ್ದು ಯಾರು..? ಈ ಎಲ್ಲದರ ಬಗ್ಗೆ ಮುಂದಿನ ಭಾಗದಲ್ಲಿ ಮಾಹಿತಿಯನ್ನ ತಿಳಿಯೋಣ.