Recipe: ಪೂರಿ ಮತ್ತು ಸಾಗು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಲವರು ಇದನ್ನು ಬೆಳಗ್ಗಿನ ತಿಂಡಿಯಲ್ಲಿ ತಿನ್ನೋಕ್ಕೆ ಇಷ್ಟಪಡುತ್ತಾರೆ. ಇನ್ನು ಕೆಲವರು ಸಂಜೆ ಚಾ ಕುಡಿಯುವಾಗ ತಿನ್ನಲು ಇಷ್ಟಪಡ್ತಾರೆ. ಮತ್ತೆ ಕೆಲವರು ರಾತ್ರಿ ವೇಳೆ. ಹಾಗಾಗಿ ಇಂದು ನಾವು ಮನೆಯಲ್ಲಿ ಪೂರಿ ಸಾಗು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅದಕ್ಕೆ 4 ಸ್ಪೂನ್ ಎಣ್ಣೆ, 2 ಲವಂಗ, 2 ಪಲಾವ್ ಎಲೆ, ಚಿಟಿಕೆ ಹಿಂಗು, 1 ಸ್ಪೂನ್ ಹುರಿದ ಜೀರಿಗೆ ಪುಡಿ, ಕೊಂಚ ತುರಿದ ಶುಂಠಿ, ಇವಿಷ್ಟನ್ನು ಹಾಕಿ, ಹುರಿದುಕೊಳ್ಳಿ. ಈಗ ಇದಕ್ಕೆ ಸಣ್ಣಗೆ ಹೆಚ್ಚಿದ 3 ಹಸಿಮೆಣಸಿನಕಾಯಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಧನಿಯಾಪುಡಿ, ಗರಂ ಮಸಾಲೆ ಸೇರಿಸಿ ಹುರಿಯಿರಿ.
ಈಗ 3 ಸಣ್ಣಗೆ ಹೆಚ್ಚಿದ ಟೊಮೆಟೋ ಸೇರಿಸಿ, ಮತ್ತೆ ಹುರಿಯಿರಿ. 3 ಬೇಯಿಸಿ, ಮ್ಯಾಶ್ ಮಾಡಿದ ಆಲೂಗಡ್ಡೆ, 1 ಕಪ್ ನೀರು, ಉಪ್ಪು, ಚಿಟಿಕೆ ಸಕ್ಕರೆ, ಚಾಟ್ ಮಸಾಲೆ ಪುಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಕುದಿ ಬರಿಸಬೇಕು. ಬಳಿಕ, 1 ಸ್ಪೂನ್ ಕಸೂರಿ ಮೇಥಿ, ಕೊಂಚ ಕೊತ್ತೊಂಬರಿ ಸೊಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸಾಗೂ ರೆಡಿ.
ಈಗ ಪೂರಿ ತಯಾರಿಸಿ. 1 ಕಪ್ ಗೋಧಿ ಹಿಟ್ಟು, ಉಪ್ಪು, ಎರಡು ಸ್ಪೂನ್ ರವೆ, ತುಪ್ಪ, ನೀರು ಹಾಕಿ ಪೂರಿ ಹಿಟ್ಟು ತಯಾರಿಸಿಕೊಳ್ಳಿ. ಬಳಿಕ ಉಂಡೆ ಮಾಡಿ, ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿದರೆ, ಪೂರಿ ರೆಡಿ.

