ನೀವು ಪೂರಿ ಜೊತೆ ಸಾಗು, ಕರಿ, ಸಾಂಬಾರ್, ಚಟ್ನಿ ಮ್ಯಾಚ್ ಮಾಡಿಕೊಂಡು ತಿಂದಿರುತ್ತೀರಿ. ಆದ್ರೆ ನೀವು ಪೂರಿ ಜೊತೆ ಸಿಹಿ ತಿಂಡಿ ಸೇರಿಸಿ ತಿಂದ್ರೆ ಇನ್ನೂ ಸಖತ್ ಆಗಿರತ್ತೆ. ಹಾಗಾಗಿ ನಾವಿಂದು, ಪೂರಿ ಜೊತೆ ತಿನ್ನಬಹುದಾದ ಶೀರಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸೋಕ್ಕೆ ಏನೇನು ಬೇಕು..? ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ತುಪ್ಪ- ಹಾಲು- ನೀರು- ಸಕ್ಕರೆ- ರವಾ ಇವೆಲ್ಲವೂ ಒಂದೊಂದು ಕಪ್ ಬೇಕು. ಕೊಂಚ ಏಲಕ್ಕಿ ಪುಡಿ, ಕೊಂಚ ಕೇಸರಿ ದಳ, ಬೇಕಾದಷ್ಟು ಡ್ರೈ ಫ್ರೂಟ್ಸ್. ಪೂರಿ ಮಾಡಲು 2 ಕಪ್ ಗೋಧಿ ಹಿಟ್ಟು, 2 ಸ್ಪೂನ್ ಎಣ್ಣೆ, ಉಪ್ಪು, ನೀರು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಎರಡು ಸ್ಪೂನ್ ಬಿಸಿ ಹಾಲಿನಲ್ಲಿ ಕೇಸರಿ ನೆನೆಸಿಡಿ. ನಂತರ ಪ್ಯಾನ್ ಬಿಸಿ ಮಾಡಿ ತುಪ್ಪವನ್ನ ಕರಗಿಸಿ. ಇದಕ್ಕೆ ರವಾ ಹಾಕಿ, ಘಮ ಬರುವವರೆಗೂ ಹುರಿಯಿರಿ. ಈಗ ಹಾಲು, ನೀರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ವೇಳೆ ಎಲ್ಲಿಯೂ ರವಾ ಗಂಟಾಗಬಾರದು. ಆ ರೀತಿ ಅದನ್ನ ಮಿಕ್ಸ್ ಮಾಡಬೇಕು.
ಅದನ್ನ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಏಲಕ್ಕಿ ಪುಡಿ, ನೆನೆಸಿಟ್ಟ ಕೇಸರಿ ದಳವನ್ನ ಸೇರಿಸಿ, ಮೂರು ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ನಂತರ ಸಕ್ಕರೆ, ಡ್ರೈಫ್ರೂಟ್ಸ್ ಹಾಕಿ, ಮಿಕ್ಸ್ ಮಾಡಿ, ಮತ್ತೆರಡು ನಿಮಿಷ ಬೇಯಿಸಿ. ಈಗ ಗ್ಯಾಸ್ ಆಫ್ ಮಾಡಿ, ಅದರ ಪ್ಲೇಟ್ ತೆಗಿಯದೇ, ಅರ್ಧ ಗಂಟೆಯಾದರೂ ಅದು ಹಾಗೆ ಇರಲು ಬಿಡಿ. ನಂತರ ಪೂರಿಯೊಂದಿಗೆ ತಿನ್ನಿ.
ಪೂರಿ ಮಾಡಲು 2 ಕಪ್ ಗೋದಿ ಹಿಟ್ಟು, ಬೇಕಾದಷ್ಟು ಉಪ್ಪು, ಎರಡು ಸ್ಪೂನ್ ಎಣ್ಣೆ, ನೀರು ಹಾಕಿ ಪೂರಿ ಹಿಟ್ಟು ತಯಾರಿಸಿಕೊಳ್ಳಿ. ಇದನ್ನ 15 ನಿಮಿಷ ಹಾಗೆ ಇರಿಸಿ, ನಂತರ ಪೂರಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಪೂರಿಯೊಂದಿಗೆ ಶೀರಾ ಕಾಂಬಿನೇಷನ್ ಸಖತ್ ಆಗಿರತ್ತೆ.
1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..