Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ಪೆನ್‌ಡ್ರೈವ್ ಕೇಸ್ ಬಗ್ಗೆ ಮಾತನಾಡಿದ್ದಾರೆ.
ಬಿ ಕೆ ಸಿಂಗ್ ಗೆ ಪ್ರಶ್ನೆ ಮಾಡಿದ ಹೆಚ್ಡಿಕೆ, ಇವರನ್ನೆಲ್ಲಾ ಯಾಕೆ ತನಿಖೆಗೆ ಕರೆದಿಲ್ಲಾ? ಅಮಿತ್ ಶಾ ಮೋದಿನಾ ಎಳಿತಿದೀರಾ? ಸಿಂಗಾಪುರ್ ಚಾನೆಲ್‌ನಲ್ಲೂ ತೋರಿಸ್ಕೊಂಡು ಕೂತಿದೀರಾ. 2900 ಅಂತೀರಾ. ಎಲ್ಲಿವರೆಗೂ ಎಷ್ಟು Fir ಆಗಿದೆ..? ನಿನ್ನೆ 4 ನೇ ಕೇಸ್ ಹುಡುಕೀದಿರಾ? ಹೆಣ್ಣು ಮಕ್ಕಳ ಫೋಟೋ ಹಾಕಿ ಬೀದಿ ಬೀದಿಲಿ ಹಂಚಿದೀರಾ. ರಾಜ್ಯದ ಮಾನ ಮಾರ್ಯಾದೆ ಬೀದಿಗೆ ಹಂಚಿದ್ದು ನೀವು. ಪೆನ್‌ಡ್ರೈವ್ ಕುಟುಂಬ ಅಂತಾ ಡಿ ಕೆ ಸುರೇಶ್ ಹೇಳ್ತಾರೆ. ಎಲ್ ಎನ್ ಮೂರ್ತಿ ಅಂತಾ ಅನ್ನೋರು ಒಂದು ವಿಡಿಯೋ ಬಿಟ್ಟಿದೀರಾ. ಸಂಗ್ರಾಮ್ ಸಿಂಗ್ ಎಲ್ ಎಚ್ ಲಿ ರೇಡ್ ಮಾಡಿದಾಗ ಎನ್ ಆಯ್ತು ಹೇಳಿದಾರೆ. ಸುರ್ಜೇವಾಲಾ ಸಂತ್ರಸ್ಥರಿಗೇ ನೆರವು ಕೊಡ್ಬೇಕು ಅಂತಾರೆ. ಮೊದಲು ಯಾರ ವಿಡಿಯೋ ಬಿಡ್ಬೇಕು ಅಂತಾ ಟಿಕ್ ಮಾಡಿದ್ದು ಯಾರು ಸುರ್ಜೇವಾಲಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನನ್ನ ಮಗ ಎಂದಿದ್ದು ನಾನು ನಿಜಾ. ಕಾರ್ಯಕರ್ತರು ದೊಡ್ಡವರಿಗೇ ಗೌರವ ಕೊಡಲ್ಲಾ ಕ್ಯಾಂಡಿಡೇಟ್ ಚೆಂಜ್ ಮಾಡಿ ಅಂದಿದ್ರು. ಹಾಗಾಗಿ ಚೇಂಜ್ ಮಾಡ್ಬೇಕು ಅಂದ್ಕೊಂಡಿದ್ದು ನಾನು ನಿಜಾ. ತಿದ್ದಿಕೊಳ್ಳಕೆ ಅವಕಾಶ ಕೊಡಿ ಎಂದಿದ್ದೆ. ತಪ್ಪು ಸರಿ ಪಡಿಸಿ ಅನ್ನೋದುನನ್ನ ಉದ್ದೇಶ. ಆದ್ರೆ ನನ್ನನ್ನು ಇದಕ್ಕೆ ಎಳಿತೀರಲ್ಲಾ ಕೃಷ್ಣ ಭೈರೇಗೌಡ್ರೇ..? ಮೋದಿ ಮಾತಾಡಿದಾರೆ. ಪ್ರಜ್ವಲ್ ಅವರನ್ನು ಸಾಫ್ಟ್ ಕಾರ್ನರ್‌ನಿಂದ ನೋಡೋಕಾಗಲ್ಲಾ ಅಂತಿದಾರೆ. ನೀವು ನೋಡಿದ್ರೆ ಮೋದಿ ಉತ್ತರ ಕೊಡ್ಬೇಕು ಅಂತೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಹೆಚ್ ಡಿಕೆ ಸತ್ಯ ಹರಿಶ್ಚಂದ್ರ ಅಂತಾ ವ್ಯಂಗ್ಯ ಮಾಡ್ತಾರೆ. ನಾನು ಸತ್ಯ ಹರಿಶ್ಚಂದ್ರ ಮೊಮ್ಮಗ ಅಂತಾ ಹೇಳಿಕೊಂಡಿಲ್ಲಾ. ಕುಟುಂಬ ರಾಜಕಾರಣದಿಂದ ನಾನೇ ಬಿಟ್ಟಿದಾನೆ ಅಂತಾರೆ. ಈಗ ಎಸ್ ಐಟಿ ವಿಡಿಯೋ ಶೇರ್ ಮಾಡಿದ್ರೆ ಶಿಕ್ಷೆ ಅಂತಾರೆ. ಇಲ್ಲಿವರೆಗೂ ಬಿಟ್ಟೋರಿಗೆ ಏನ್ ಹೇಳ್ತೀರಾ? ನವೀನ್ ಗೌಡ, ಕಾರ್ತಿಕ ಗೌಡ ಬೇಲ್ ಗೆ ಅಪ್ಲೈ ಮಾಡಿದಾರೆ. ಫೇರ್ ತನಿಖೆ ಮಾಡ್ತಿಲ್ಲಾ. ನಿಮ್ಮ ಮುಖ ನೋಡಿದ್ರೆ ಗೊತ್ತಾಗ್ತಿತ್ತು ಡಿಕೆಶಿ ಅವ್ರೇ. ಬಾಲ ಸುಟ್ಟ ಬೆಕ್ಕಿನ ಥರಾ ಕಾಣ್ತಿದ್ರಿ. ಮೊದ್ಲು ಪತ್ರಿಕಾ ಹೇಳಿಕೆ ಕೊಡ್ತಿರಾ. ಆಮೇಲೆವಿಡಿಯೋ ಮಾಡಿ ಬಿಡ್ತೀರಿ. ಆಮೇಲೆ ರಾತ್ರಿ ಮಾಧ್ಯಮದ ಜೊತೆ ಮಾತಾಡ್ತಿರಾ? ಎಂದು ಕುಮಾರಸ್ವಾಮಿ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಜಾರಕಿಹೊಳಿ ಕೇಸ್ ಏನಾಯ್ತು..? ಇವ್ರೇ ಮಾಡಿದ್ದು ತಾನೇ. ಬೆಳಗಾವಿ ಸಾವ್ಕಾರ್ ಮೇಲೆ. 30 ರಿಂದ 40 ಕೋಟಿ ಖರ್ಚು ಮಾಡಿದೀನಿ ಅನ್ನೋ ವಿಡಿಯೋ ಇದೆ. ವಿವೇಕ ಸುಬ್ಬಾರೆಡ್ಡಿ ಜ್ಯೂಡಿಷಿಯಲ್ ತನಿಖೆಗೆ ಒತ್ತಾಯಿಸಿದ್ದಾರೆ. ತನಿಖೆಗೆ ಕೊಡಿ. ಕ್ಯಾಬಿನೆಟ್‌ನಿಂದ ಡಿಕೆಶಿ ಸಸ್ಪೆಂಡ್ ಮಾಡಿ. ಸುಲಭಕ್ಕೆ ಇದನ್ನಾ ಬಿಡಲ್ಲಾ. ಯಾರೇ ತಪ್ಪು ಮಾಡ್ಲಿ ಶಿಕ್ಷೆ ಆಗ್ಬೇಕು. ಕೇಸ್ ಮುಚ್ಚಿ ಹಾಕೋಕು ಬಿಡಲ್ಲಾ. ಸಿದ್ದರಾಮಯ್ಯ ಡಿಕೆಶಿ ಏಜೆಂಟ್ ಆಗಿ ಎಸ್ಐಟಿ ಕೆಲ್ಸಾ ಮಾಡ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೇವರಾಜೇಗೌಡ ಅವರನ್ನು ಆಫೀಶಿಯಲ್ ಆಗಿ ತನಿಖೆ ಮಾಡಿಲ್ಲಾ. ಅನ್ ಆಫಿಸಿಯಲ್ ಆಗಿ ತನಿಖೆ ಮಾಡಿದಾರೆ. ರೇವಣ್ಣ ಕರ್ಕೊಂಡು ಹೋಗಿ ಕೂರ್ಸಿದೀರಾ. ಅವ್ರು ಕಿಡ್ನ್ಯಾಪ್ ಮಾಡಿದೀರಾ ಅಂತಾ. ದೇವೆಗೌಡ್ರ ಆರೋಗ್ಯದಲ್ಲಿ ಏರುಪೇರಾದ್ರೆ ಅಂತಾ ಆತ್ಮ ಸ್ಥೈರ್ಯ ನೀಡೋಕೆ ಅಂತಾ ನಾನು ಹೊದ್ರೆ, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕೊಡ್ತಾರೆ ಸಂಘಟಿತ ಪಾಪ ಕೃತ್ಯ. ಮನುಷ್ಯರೇನ್ರಿ ನೀವು? ಬೆಳಗ್ಗೆ 10 ರಿಂದ ರಾತ್ರಿ 12 ಗಂಟೆ ವರೆಗೂ ಕ್ಯಾಮರಾ ಹಾಕಿದ್ರಿ. ಯಾವ ಲಾಯರ್ ಜೊತೆ ಮಾತಾಡಿದೀನಿ ನಾನು ಸಿದ್ದರಾಮಯ್ಯ ಅವ್ರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇನ್ನು ರೇವಣ್ಣ ಅವರನ್ನು ದೇವೇಗೌಡರ ನಿವಾಸದಲ್ಲೇ ಬಂಧಿಸಲಾಯ್ತು ಎಂದು ಸುದ್ದಿ ಬಿತ್ತರಿಸಿದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ದೇವೆಗೌಡ್ರ ನಿವಾಸ ಅಂತೀರಾ. ಅದು ಅವರ ಮಗಳ ಮನೆ. ಸಿದ್ದರಾಮಯ್ಯ ಅವ್ರೇ ದೇವೆಗೌಡರಿಂದ ಬೆಳೆದಿದ್ದಾರೆ. ಅವ್ರ ಬಗ್ಗೆ ಲಘುವಾಗಿ ಮಾತಾಡಬೇಡಿ. ಇವ್ರಿಗೆ ಬೇಕಾಗಿರೋದು ಪ್ರಚಾರ. ಯಾರಿಗೂ ಇವ್ರು ನ್ಯಾಯ ಕೊಡಲ್ಲಾ. ದೆಹಲಿ ಗದ್ದುಗೆ ಹಿಡಿಯೋಕೆ ಈ ಸಬ್ಜೆಕ್ಟ್ ತಗೊಂಡಿದಾರೆ. ಈ ಘಟನೆ ನಡೆದಿದ್ರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ದೇವೆಗೌಡ್ರ ಅವಶ್ಯಕತೆ ನಿಮ್ಗೆ ಯಾಕೆ ಬಂತು..? ಅವ್ರ ಮೇಲೆ ಕೇಸ್ ಈಗ ಹಾಕ್ತಿದಾರೆ. ಎಸ್ಐಟಿ ಅಧಿಕಾರಿಗಳೇ ಪಾರದರ್ಶಕ ತನಿಖೆಮಾಡಿ. ಒತ್ತಡಗಳಿಗೆ ಮಣಿಯಬೇಡಿ. ಅಧಿಕಾರಿಗಳೇ ಎಚ್ಚರಿಕೆಯಿಂದಕೆಲಸ ಮಾಡಿ. ನಾವೆಲ್ಲ ಶಾಶ್ವತ ಅಲ್ಲಾ. 2800 ಪ್ರಕರಣ ಅಂತೀರಾ. ಈ ತೀರ್ಮಾನ ತಗೊಂಡಿರೋದು ಯಾರು ಕಾಂಗ್ರೆಸ್ ನವರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಎಲ್ಲಿದಾರೆ ಅಂತಾ ನನಗೆ ಗೊತ್ತಿಲ್ಲಾ. ಎಲ್ಲಿ ಹೋಗಿದಾರೆ, ಯಾವಾಗ ಹೋದ್ರು ಗೊತ್ತಿಲ್ಲಾ. ನನ್ನ ಜೊತೆ ಸಂಪರ್ಕದಲ್ಲಿ ಇಲ್ಲಾ. ಯಾರ ಜೊತೆ ಸಂಪರ್ಕದಲ್ಲಿ ಇದಾರೆ ಗೊತ್ತಿಲ್ಲಾ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದಿಂದ ಮುಜುಗರ ಆಗುತ್ತೆ ಅಂತಾ ಅವ್ರು ತೀರ್ಮಾನ ತೆಗೆದುಕೊಂಡರೆ ಓಕೆ. ಮೈತ್ರಿ ಲಾಂಗ್ ಟೈಮ್ ಇರ್ಬೇಕು ಅಂತಾ ಮಾಡ್ಕೊಂಡಿದ್ವಿ. ಮೈತ್ರಿ ಆಗಿದ್ದೆ ಕಾಂಗ್ರೆಸ್ ನಾಯಕರು ನಿದ್ದೆಗೆಟ್ರು. ಅಭ್ಯರ್ಥಿಗಳಆಯ್ಕೆಗೆ ದುಸ್ಸಾಹಸ ಪಟ್ರು ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಸ್ಟೇ ತೆಗೆದುಕೊಂಡಿದ್ದು ಯಾಕಂದ್ರೆ. ಪದೇ ಪದೇ ದೇವೆಗೌಡ್ರು, ನನ್ನ ಹೆಸರು ಬಳಸಿದ್ದಕ್ಕೆ. ಇವತ್ತು ಸುದ್ದಿಗೋಷ್ಟಿ ನಡೆಸ್ತಾ ಇರೋದು ಪಕ್ಷದ ಅಧ್ಯಕ್ಷನಾಗಿ. ಅಧಿಕಾರ ದುರುಪಯೋಗ ಪಡಿಸಿಕೊಳ್ತಿದಾರೆ. cbi ತನಿಖೆಗೆ ಒತ್ತಾಯಿಸಿ ಕೋರ್ಟ್ ಗೆ ಹೋಗ್ತೀವಿ. ರಾಜ್ಯಪಾಲರಿಗೂ ದೂರು ಕೊಡ್ತಿವಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ
Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ
ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ




