Sunday, February 9, 2025

Latest Posts

ದೆಹಲಿ ಚುನಾವಣೆ ವೇಳೆಯೇ ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದಾರೆ ಪ್ರಧಾನಿ ಮೋದಿ

- Advertisement -

Political News: ಮುಂದಿನ ತಿಂಗಳು ಫೆಬ್ರವರಿ 5ರಂದು ದೆಹಲಿಯ ವಿಧಾನಸಭೆ ಚುನಾವಣೆಯಾಗಲಿದ್ದು, ಅದೇ ದಿನ ಪ್ರಧಾನಿ ಮೋದಿ ಅಲಹಾಬಾದ್‌ನ ದೇವಭೂಮಿ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿ, ಅಮೃತ ಸ್ನಾನ ಮಾಡಲಿದ್ದಾರೆ.

ಇನ್ನು ಗೃಹ ಸಚಿವ ಅಮಿತ್ ಶಾ ಜನವರಿ 27ರಂದು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಫೆಬ್ರವರಿ 1ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಫೆಬ್ರವರಿ 10ರಂದು ಕುಂಭ ಮೇಳಕ್ಕೆ ಭೇಟಿ ನೀಡಿ, ಗಂಗಾನದಿಯಲ್ಲಿ ಅಮೃತಸ್ನಾನ ಮಾಡಲಿದ್ದಾರೆ.

ಇವರನ್ನು ಬಿಟ್ಟು ಇನ್ನು ಕೆಲ ದಿನಗಳಲ್ಲಿ ವಿವಿಐಪಿಗಳು ಬರಲಿದ್ದು, ಇವರ ಅಮೃತ ಸ್ನಾನಕ್ಕಾಗಿ ಹೈಟೆಕ್ ವ್ಯವಸ್ಥೆಯನ್ನೇ ಮಾಡಲಾಗಿದೆ. ವಿವಿಐಪಿ ಗಂಗಾಸ್ನಾನಕ್ಕಾಗಿ ಒಂದು ಸಣ್ಣ ಸ್ವಿಮ್ಮಿಂಗ್ ಪೂಲ್‌ ನಿರ್ಮಿಸಲಾಗಿದ್ದು, ಸ್ನಾನದ ಬಳಿಕ, ವಿಶ್ರಮಿಸಲು ಕೂಡ ಜಾಗವಿದೆ.

ಇನ್ನು ಕುಂಭ ಮೇಳದಲ್ಲಿ ಉಳಿದುಕೊಳ್ಳಲು ಸಣ್ಣ ಸಣ್ಣ ಟೆಂಟ್‌ನಿಂದ ಹಿಡಿದು, ಲಕ್ಷ ಲಕ್ಷ ಬಾಡಿಗೆ ಇರುವ ರೂಮ್‌ಗಳು ಕೂಡ ಲಭ್ಯವಿದೆ. ಶಿವರಾತ್ರಿಯತನಕ ನಡೆಯಲಿರುವ ಮಹಾ ಕುಂಭ ಮೇಳಕ್ಕೆ 40ರಿಂದ 45 ಕೋಟಿ ಜನ ಬರಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ಅಲಹಾಬಾದ್‌ನಲ್ಲಿ 20 ಸಾವಿರ ಕೋಟಿಗೂ ಅಧಿಕ ವ್ಯಾಪಾರವಾಗುವ ಅಂದಾಜು ಮಾಡಲಾಗಿದೆ.

- Advertisement -

Latest Posts

Don't Miss