Thursday, February 13, 2025

Latest Posts

Problems in Divorce: ಅಪ್ಪ-ಅಮ್ಮನ ಜಗಳ ಮಕ್ಕಳು ಯಾರ ಸುಪರ್ದಿಗೆ?

- Advertisement -

Problems in Divorce: ಇತ್ತೀಚಿನ ದಿನಗಳಲ್ಲಿ ಮದುವೆ ಅಂದರೆ ಮಕ್ಕಳಾಟವಾಗಿದೆ. ಮದುವೆಯಾಗಿ ಮಕ್ಕಳಾದ ಬಳಿಕ, ಜಗಳಗಳು ಶುರುವಾಗೋದು ಕಾಮನ್. ಆದರೆ ಅದೇ ಜಗಳವನ್ನು ಸಂಬಂಧ ಮುರಿಯುವವರೆಗೂ ತೆಗೆದುಕೊಂಡು ಹೋಗಬಾರದು. ಆದರೆ ಎಷ್ಟೋ ಜನ, ಜಗಳವಾಡಿ, ಅದರಿಂದಲೇ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮಕ್ಕಳ ಗತಿ ಏನು..? ಅಪ್ಪ- ಅಮ್ಮನ ಪ್ರೀತಿ ಒಟ್ಟಿಗೆ ಸಿಗದಿದ್ದರೆ, ಅದರಿಂದ ಮಕ್ಕಳ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತದೆ ಅಂತಲೂ ಅವರು ಯೋಚಿಸುವುದಿಲ್ಲ.

ಈ ಬಗ್ಗೆ ಖ್ಯಾತ ವಕೀಲರಾದ ವಿ.ಮಂಜುನಾಥ್ ವಿವರಿಸಿದ್ದು, ಅಪ್ಪ- ಅಮ್ಮನ ಜಗಳವಾದಾಗ, ಮಕ್ಕಳು ಯಾರ ಸುಪರ್ದಿಗೆ ಹೋಗುತ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಮಂಜುನಾಥ್ ಅವರು ಹೇಳುವ ಪ್ರಕಾರ, ಡಿವೋರ್ಸ್ ಆದಾಗ, ಪತಿ-ಪತ್ನಿಗಿಂತ ಹೆಚ್ಚು ಕಷ್ಟ, ದುಃಖ ಅನುಭವಿಸುವವರು ಮಕ್ಕಳು. ಏನೂ ತಪ್ಪೇ ಮಾಡದೇ, ಶಿಕ್ಷೆ ಅನುಭವಿಸುವವರು ಮಕ್ಕಳು.

ಡಿವೋರ್ಸ್ ಆದಾಗ ಮಕ್ಕಳು ಯಾರ ಸುಪರ್ದಿಗೆ ಹೋಗುತ್ತಾರೆ ಎಂಬ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತದೆ. ಹೆಚ್ಚಿನ ಕೇಸ್‌ನಲ್ಲಿ ಮಕ್ಕಳು ತಾಯಿಯ ಬಳಿಯೇ ಇರುತ್ತಾರೆ. ಏಕೆಂದರೆ, ಓರ್ವ ತಾಯಿ ತನ್ನ ಮಕ್ಕಳನ್ನು ತಂದೆಗೆ ಬಿಟ್ಟುಕೊಡಲು ಒಪ್ಪುವುದೇ ಇಲ್ಲ. ಹಾಾಗಾಗಿ ಮಕ್ಕಳು ಹೆಚ್ಚಾಗಿ ತಾಯಿಯ ಬಳಿಯೇ ಇರುತ್ತಾರೆ. ತನಗೆ ಸಾಕಲು ಸಾಧ್ಯವಾಗುವುದಿಲ್ಲ. ಮಕ್ಕಳು ತಂದೆಯ ಬಳಿ ನೆಮ್ಮದಿಯಾಗಿ ಇರಲಿ ಎನ್ನುವವರು ಮಾತ್ರ, ತಂದೆಯ ಬಳಿ ತಾವೇ ಮಕ್ಕಳನ್ನು ಒಪ್ಪಿಸುತ್ತಾರೆ.

ಆದರೆ ಮಕ್ಕಳು ಅಪ್ಪ- ಅಮ್ಮನನ್ನು ಆಯ್ಕೆ ಮಾಡುವ ಅಥವಾ 18 ವರ್ಷ ಮೇಲ್ಪಟ್ಟವರಾಗಿದ್ದರೆ, ತಮಗೆ ಬೇಕಾದವರ ಬಳಿ ಅವರು ಹೋಗಲು ಕೋರ್ಟ್ ಒಪ್ಪಿಗೆ ನೀಡುತ್ತದೆ. ಅಥವಾ ತಾನೊಬ್ಬನೇ ಇರುತ್ತೇನೆ. ತಂದೆ ತಾಯಿ ಖರ್ಚು ವೆಚ್ಚ ನೋಡಿಕೊಳ್ಳಲಿ ಎಂದರೂ, ಕೋರ್ಟ್ ಅದಕ್ಕೂ ಒಪ್ಪಿಗೆ ನೀಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

ವಿ.ಮಂಜುನಾಥ್ ಅವರನ್ನು ಸಂಪರ್ಕಿಸಲು ಈ ನಂಬರ್​​ಗೆ ಕರೆ ಮಾಡಿ: 8792368759, 9243059248

- Advertisement -

Latest Posts

Don't Miss