ಬೆಲ್ಲ ಬಳಸಿ ಮನೆಯಲ್ಲೇ ತಯಾರಿಸಬಹುದು ಪ್ರೋಟಿನ್ ಬೈಟ್ಸ್..

Recipe: ಮನೆಯಲ್ಲಿ ಏನಾದರೂ ಸಿಹಿ ತಿಂಡಿ ತಯಾರಿಸಿ ತಿನ್ನಬೇಕು. ಅದು ಆರೋಗ್ಯವಾಗಿಯೂ, ರುಚಿಯಾಗಿಯೂ ಇರಬೇಕು ಅಂತಿದ್ದರೆ, ನೀವು ಬೆಲ್ಲ ಬಳಸಿ, ಮನೆಯಲ್ಲೇ ಪ್ರೋಟಿನ್‌ ಬೈಟ್ಸ್ ತಯಾರಿಸಬಹುದು. ಹಾಗಾದ್ರೆ ಇದನ್ನು ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಮೊದಲು ಒಂದು ಕಪ್ ಶೇಂಗಾವನ್ನು ಪ್ಯಾನ್‌ಗೆ ಹಾಕಿ ಹುರಿಯಿರಿ. ಬಳಿಕ ಬದಿಗಿರಿಸಿ, ಇದೇ ರೀತಿ, ಅಗಸಿ ಬೀಜ, ಎಳ್ಳು, ಈ ಮೂರನ್ನೂ ಹುರಿದುಕೊಳ್ಳಿ. ಈ ಮಿಶ್ರಣ ತಣ್ಣಗಾದ ಬಳಿಕ, ಮಿಕ್ಸಿ ಜಾರ್‌ಗೆ ಹಾಕಿ, ತರಿ ತರಿಯಾಗಿ ಗ್ರೈಂಡ್ ಮಾಡಿ. ಈಗ 20 ಹಸಿ ಖರ್ಜೂರದ ಬೀಜ ತೆಗೆದು ಪೇಸ್ಟ್ ಮಾಡಿ, ಪುಡಿ ಮಾಡಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ.

ಈಗ ಪ್ಯಾನ್ ಬಿಸಿ ಮಾಡಿ, ಕೊಂಚ ಪುಡಿ ಮಾಡಿದ ಬಾದಾಮಿ, ಪಿಸ್ತಾ, ಗೇರುಬೀಜ, ಸೂರ್ಯಕಾಂತಿ ಬೀಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ಇವಿಷ್ಟನ್ನು ಹಾಕಿ ಹುರಿಯಿರಿ. ಈಗ ಹುರಿದ ಮಿಶ್ರಣವನ್ನು, ಈಗಾಗಲೇ ರೆಡಿ ಮಾಡಿಟ್ಟ ಖರ್ಜೂರದ ಮಿಶ್ರಣಕ್ಕೆ ಸೇರಿಸಿ, ಲಡ್ಡು ತಯಾರಿಸಿ. ಈಗ ಪ್ರೋಟಿನ್ ಬೈಟ್ ರೆಡಿ. ಬೆಳಿಗ್ಗೆ ಎದ್ದ ತಕ್ಷಣ, ಖಾಲಿ ಹೊಟ್ಟೆಯಲ್ಲಿ ಒಂದು ಲಾಡು ತಿಂದರೆ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗುವ ಜೊತೆಗೆ ನಿಮ್ಮ ದೇಹದ ಶಕ್ತಿಯೂ ಹೆಚ್ಚಾಗುತ್ತದೆ.

ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?

‘ಜೀನಿ ಕುಡಿದಿದ್ದರಿಂದ ದೇಹದಲ್ಲಿದ್ದ ಗಾಯಗಳು ಕೂಡ ಮಾಯವಾಗಿದೆ’

ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

About The Author