Saturday, November 23, 2024

Latest Posts

ಪರಿಹಾರಕ್ಕಾಗಿ ರಸ್ತೆಯಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ ..

- Advertisement -

ಹಾಸನ: ಬೇಲೂರು: ಮೃತ ಪಟ್ಟ ಮಹಿಳೆಗೆ ಕೂಡಲೇ ಪರಿಹಾರ ಒದಗಿಸುವಂತೆ ಬ್ಲಾಕ್ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಿದರು. ಬಿಕ್ಕೋಡು ರಸ್ತೆಯ ಮದ್ಯದಲ್ಲಿ ಇದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಚೌಡನಹಳ್ಳಿ ಗ್ರಾಮದ ಕಮಲ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು.

ಅಪಘಾತ ನಡೆದು ಒಂದು ದಿನ ನಡೆದರೂ ಸ್ಥಳೀಯ ಶಾಸಕರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬರದೇ ಇರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ನೇತೃತ್ವದಲ್ಲಿ ರಸ್ತೆಯ ಮದ್ಯದಲ್ಲಿ ಆಂಬುಲೆನ್ಸ್ ನಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಕಾಡಾನೆಗೆ ಎಸ್ಕಾರ್ಟ್ ಮಾದರಿ ಭದ್ರತೆ ಮಾಡಿಕೊಟ್ಟ ಅರಣ್ಯ ಇಲಾಖೆ..

ಬೇಲೂರಿನ ರಾಷ್ಟ್ರಿಯ ಹೆದ್ದಾರಿಯಾದ ಹಾಸನ,ಚಿಕ್ಕಮಗಳೂರು ಗೆಂಡೇಹಳ್ಳಿ ,ಮೂಡಿಗೆರೆ ಹಾಗೂ ಮುಖ್ಯವಾಗಿ ಬಿಕ್ಕೋಡು ಮಾರ್ಗವಾಗಿ ಸಕಲೇಶಪುರ ರಸ್ತೆ ಸುಮಾರು 20 ಕಿಮೀ ದೂರದಲ್ಲಿ ಒಂದು ವರ್ಷದಿಂದ ಗುಂಡಿ ಬಿದ್ದಿದ್ದರೂ ಅದೇ ರಸ್ತೆಯಲ್ಲಿ ತಿರುಗುವ ಶಾಸಕರು ಹಾಗೂ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲ.

ಇಂದು ಒಂದು ಬಡ ಕುಟುಂಬ ಇದೇ ರಸ್ತೆಯಲ್ಲಿ ಅಪಘಾತವಾಗಿ ಬೀದಿಗೆ ಬಂದಿದೆ.ಅವರಿಗೆ ಯಾರು ಹೊಣೆ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಯಾಗಿರುವ ಮಕ್ಕಳಿಗೆ ಈಗ ಯಾರು ಹೊಣೆ.ತಾಲೂಕಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ರಸ್ತೆಗಳ ಪೊಟೋ ತೆಗೆದು ಪ್ರಚಾರ ಮಾಡುವ ಇವರು ಮುಖ್ಯವಾದ ರಸ್ತೆಯನ್ನು ಕೊನೆಪಕ್ಷ ಗುಂಡಿ ಮುಚ್ಚಲಾಗದ ಇಂತಹ ಶಾಸಕರು ನಮಗೆ ಬೇಕಾ.

ಇನ್ನು 40% ಕಮಿಷನ್ ಸರ್ಕಾರ ಬಿಜೆಪಿ ತನ್ನ ಕಮಿಷನ್ ಆಸೆಗಾಗಿ ಬಡ ಮಹಿಳೆಯ ಜೀವ ತೆಗೆದಿದೆ.ಈ ಎರಡು ಪಕ್ಷಗಳಿಗೆ ನಮ್ಮ ಧಿಕ್ಕಾರ. ಈಭಾಗದಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರು ಗುಂಡಿಗಳಿಗೆ ಗಿಡ ನೆಟ್ಟು ಪ್ರತಿಭಟನೆ ಮಾಡಿದರೂ ಸಹ ಗಮನ ಹರಿಸಿಲ್ಲ. ಶಾಸಕರನ್ನುಕೇಳಿದರೆ ಈ ರಸ್ತೆಗೆ ಎರಡು ಕೋಟಿ ಅನುಮೋದನೆ ಆಗಿದೆ ಎನ್ನುತ್ತಾರೆ ಅದು ಬರುವವರೆಗೂ ಆ ಗುಂಡಿ ಮುಚ್ಚಿದ್ದರೆ ಇಂದು ಬಡ ಕುಟುಂಬ ಬೀದಿಗೆ ಬರುತ್ತಿರಲಿಲ್ಲ.

‘ಕಾಫಿಬೆಳೆಗಾರರಿಗೆ ಹೊಸವರ್ಷಕ್ಕೆ ಬಿಜೆಪಿ ಸರ್ಕಾರ ಉಡುಗೊರೆ ನೀಡಲಿದೆ’

ಕೇವಲ ರಸ್ತೆಗಳನ್ನು ಶಂಕುಸ್ಥಾಪನೆ ಮಾಡಿದರೆ ಸಾಲದು ಇಂತಹ ಗುಂಡಿಗಳನ್ನು ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸೂಕ್ತ ಪರಿಹಾರ ಕೊಡಬೇಕು ಇಲ್ಲದಿದ್ದರೆ ಮುಂದೆ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಕುಟುಂಬಕ್ಕೆ ಇಂದು ಆಸರೆಯೇ ಇಲ್ಲದಂತಾಗಿದೆ.ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಯಾರು ಹೊಣೆ ತಕ್ಷಣವೇ ನಮ್ಮ ಪಕ್ಷದ ವತಿಯಿಂದ ಆ ಕುಟುಂಬಕ್ಕೆ ೧ ಲಕ್ಷ ಹಣವನ್ನು ನೀಡಲಾಗುವುದು ಎಂದರು. ಇದೇ ವೇಳೆ ಅಧಿಕಾರಿಗಳು ಆಗಮಿಸುವವರೆಗೂ ಯಾವುದೇ ಕಾರಣಕ್ಕೂ ಸೂಚಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ತಹಶಿಲ್ದಾರ್ ರಮೇಶ್,ಪಿಡ್ಬ್ಲೂಡಿ ಇಂಜಿಯರ್ ಆಗಮಿಸಿ ಪ್ರತಿಭಟನೆ ಕಾರರ ಮನವೊಲಿಸಲು ಸಫಲರಾದರು.

- Advertisement -

Latest Posts

Don't Miss