National News: ಅಯೋಧ್ಯೆ ರಾಮಮಂದೀರಕ್ಕೆ ನಿನ್ನೆಯಷ್ಟೇ ರಾಮಲಲ್ಲಾನನ್ನು ತಂದು ಪ್ರತಿಷ್ಠಾಪನೆ ಮಾಡಲಾಯಿತು. ಇಂದು ಬಾಲರಾಮನ ಮೂರ್ತಿಯ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹವನ್ನು ನಿನ್ನೆಯಷ್ಟೇ ಬಿಗಿಭದ್ರತೆಯ ಮೂಲಕ, ಕ್ರೇನ್‌ನಲ್ಲಿ ಗರ್ಭಗುಡಿಗೆ ತಂದಿಡಲಾಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಪ್ಪು ಶಿಲೆಯ ಮೂರ್ತಿಗೆ ಬಿಳಿ ಬಟ್ಟೆ ಸುತ್ತಲಾಗಿದೆ. ಶ್ರೀರಾಮನ ಮುಖಕ್ಕೆ ಹಳದಿ ಬಟ್ಟೆಯನ್ನು ಸುತ್ತಲಾಗಿದೆ.
ಜನವರಿ 22ರಂದು ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ದಿನ, ಈ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ಮೋದಿ, ರೋಮಮಂದಿರದ ಪ್ರಧಾನ ಅರ್ಚಕರು ಸೇರಿ, ಹಲವು ಗಣ್ಯರ ಸಮ್ಮುಖದಲ್ಲಿ, ಸೋಮವಾರದ ಶುಭ ದಿನದಂದು, ರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಅಂದು ನಡೆಯುವ ಭವ್ಯರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ, ರಾಮಭಕ್ತರೆಲ್ಲ ಸಾಕ್ಷಿಯಾಗಲಿದ್ದಾರೆ.
“ನಿರೀಕ್ಷೆ ಎಂಬಂತೆ ರಾಮ ಹನುಮರ ಬಾಂಧವ್ಯಕ್ಕೆ ಕನ್ನಡದ ನಂಟಿದೆ, ಕರುನಾಡ ಕಂಪಿದೆ”
ಕನಸಲ್ಲಿ ರಾಮ ಕಂಡನೆಂದು ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಮಹಿಳೆ..
ಪೂಜಿಸಲೆಂದೇ ಹೂಗಳ ತಂದೆ ಹಾಡು ಮತ್ತು ಹಾಡುಗಾರ್ತಿಯನ್ನು ಮೆಚ್ಚಿ ಹೊಗಳಿದ ಮೋದಿ..

