ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿದೆ. ಜನ ಮಾರುಕಟ್ಟೆಯಲ್ಲಿ ಸಿಗುವ ಹಲವು ಪ್ರಾಡಕ್ಟ್‌ಗಳನ್ನ ಬಳಸಿದ್ರೂ, ಉತ್ತಮ ರಿಸಲ್ಟ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೋಮ್ ರೆಮಿಡಿಯಿಂದ ಕೆಲವು ಉತ್ತಮ ರಿಸಲ್ಟ್ ಕಂಡಿರಬಹುದು. ಆದ್ರೆ ನೀವು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೊದಲು ಮಾಡಬೇಕಾದ ಕೆಲಸ ಅಂದ್ರೆ, ಕೂದಲು ಉದುರಲು ಕಾರಣವೇನು ಅಂತಾ ತಿಳಿಯೋದು.
ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..
ದೇಹದಲ್ಲಿ ವಿಟಾಮಿನ್ ಬಿ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಗೋದಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರಿಂದ ದೇಹದಲ್ಲಿ ವಿಟಾಮಿನ್ ಬಿ ಹೆಚ್ಚುತ್ತದೆ. ಅಥವಾ ನೀವು ವೈದ್ಯರ ಸಲಹೆ ಪಡೆದು ವಿಟಾಮಿನ್ ಬಿ ಮಾತ್ರೆ ತೆಗೆದುಕೊಳ್ಳಬಹುದು. ವಿಟಾಮಿನ್ ಈ ಕೊರತೆಯಿಂದಲೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ತಲೆಕೂದಲಿಗೆ ಎಣ್ಣೆ ಬಳಸುವಾಗ ಅದರೊಂದಿಗೆ ವಿಟಾಮಿನ್ ಈ ಎಣ್ಣೆ ಬೆರೆಸಿ, ಬಳಸಿ.
ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..
ಮೊಟ್ಟೆ ತಿನ್ನುವವರು ಹಳದಿ ಭಾಗವನ್ನು ತಿನ್ನಬಹುದು. ಮೊಟ್ಟೆ ಬೇಯಿಸಿ, ತಿನ್ನುವುದರಿಂದಲೂ ಕೂದಲು ಉದುರುವ ಸಮಸ್ಯೆಗೆ ನೀವು ಬ್ರೇಕ್ ಹಾಕಬಹುದು. ಇನ್ನು ವಿಟಾಮಿನ್ ಡಿ ಕೂಡ ಕೂದಲು ಬೆಳೆಯಲು ಸಹಕಾರಿಯಾಗಿದೆ. ಇದಕ್ಕಾಗಿ ನೀವು ಬೆಳಿಗ್ಗೆ 9 ಗಂಟೆಯೊಳಗೆ ಬರುವ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕು. ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ವಿಟಾಮಿನ್ ಡಿ ಸಿಗುತ್ತದೆ. ಇದರಿಂದಲೂ ಕೂದಲು ಉದುರುವ ಸಮಸ್ಯೆ, ಚರ್ಮದ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರ ಸಿಗುತ್ತದೆ.