Thursday, February 13, 2025

Latest Posts

ನೀವು ಜೀವನದಲ್ಲಿ ಮಾಡಬಹುದಾದ 5 ಪುಣ್ಯದ ಕೆಲಸಗಳು ಯಾವುದು ಗೊತ್ತಾ..?

- Advertisement -

ನಾವು ಉತ್ತಮ ಕೆಲಸಗಳನ್ನು ಮಾಡಿದ್ರೆ ಉತ್ತಮರಾಗುತ್ತೇವೆ. ಕೆಟ್ಟ ಕೆಲಸಗಳನ್ನು ಮಾಡಿದ್ರೆ ಪಾಪಿಗಳಾಗುತ್ತೇವೆಂದು ಎಲ್ಲರಿಗೂ ಗೊತ್ತು. ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಅನ್ನೋದು ಗೊತ್ತು. ಆದ್ರೆ ನಾವಿಂದು ಜೀವನದಲ್ಲಿ ನಾವು ಮಾಡಬಹುದಾದ 5 ಪುಣ್ಯದ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾವುದು ಆ 5 ಪುಣ್ಯದ ಕೆಲಸಗಳು ಅಂತಾ ತಿಳಿಯೋಣ ಬನ್ನಿ..

ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ..

ಮೊದಲನೇಯ ಕೆಲಸ, ಹಸಿದವರಿಗೆ ಊಟ ನೀಡುವುದು. ಹಸಿದವನು ಶ್ರೀಮಂತನೇ ಆಗಲಿ, ಬಡವನೇ ಆಗಲಿ. ಮನುಷ್ಯನೇ ಆಗಲಿ. ಪ್ರಾಣಿ, ಪಕ್ಷಿಯೇ ಆಗಲಿ, ಅವನಿಗೆ ಆಹಾರ ನೀಡುವುದು ಪುಣ್ಯದ ಕೆಲಸ. ಹಸಿದವರು ನಿಮ್ಮ ಬಳಿ ಬಂದು ಏನಾದರೂ ಕೇಳಿದರೆ, ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ನಿಮ್ಮ ಬಳಿ ಇರುವುದರಲ್ಲೇ ಕೊಂಚ ಹಂಚಿ ತಿನ್ನಿ.

ಎರಡನೇಯ ಕೆಲಸ, ನಿರಾಶ್ರಿತರಿಗೆ ಆಶ್ರಯ ನೀಡುವುದು. ಈಗಿನ ಕಾಲದಲ್ಲಿ ಅನಾಥ ಮಕ್ಕಳಿಗೆ ವೃದ್ಧರಿಗೆಲ್ಲ ವೃದ್ಧಾಶ್ರಮ, ಅನಾಥಾಶ್ರಮ ಬಂದರೂ ಕೂಡ, ಕೆಲವೆಡೆ ಅದನ್ನ ನ್ಯಾಯುತವಾಗಿ ನಡೆಸುತ್ತಿಲ್ಲ. ಆದರೆ, ನಿರಾಶ್ರಿತರಿಗೆ, ಅನಾಥರಿಗೆ, ವೃದ್ಧರಿಗೆ, ನಿರಾಶ್ರಿತ ಪ್ರಾಣಿಗಳಿಗೆ ಆಶ್ರಯ ಕೊಡುವುದು ಪುಣ್ಯದ ಕೆಲಸವಾಗಿದೆ.

ಇಂಥ ಜಾಗಗಳಲ್ಲಿ ಉಳಿಯಲೇಬೇಡಿ.. ಉಳಿದರೆ ಎಂದಿಗೂ ಉದ್ಧಾರವಾಗುವುದಿಲ್ಲ..

ಮೂರನೇಯ ಕೆಲಸ, ಉತ್ತಮವಾಗಿ ಮಾತನಾಡುವುದು. ನೀವು ಎಲ್ಲರೊಂದಿಗೂ ತಾಳ್ಮೆಯಿಂದ, ಪ್ರೀತಿ, ಕಾಳಜಿಯಿಂದ ಮಾತನಾಡುವುದು ಕೂಡ ಪುಣ್ಯದ ಕೆಲಸವೇ. ಕಷ್ಟದಲ್ಲಿರುವವರಿಗೆ ನಿಮ್ಮಿಂದ ಸಹಾಯ ಮಾಡಲು ಆಗದಿದ್ದಲ್ಲಿ, ನಾಲ್ಕು ಸಮಾಧಾನದ ಮಾತನಾಡಿ.

ನಾಲ್ಕನೇಯ ಕೆಲಸ, ಯಾರಿಗೂ ಹಿಂಸೆ ಕೊಡದಿರುವುದು. ಮನುಷ್ಯನಾಗಲಿ, ಪ್ರಾಣಿ, ಪಕ್ಷಿಯಾಗಲಿ ಯಾರಿಗೂ ಕೂಡ ಹಿಂಸೆ ಮಾಡಬಾರದು. ಉದಾಹರಣೆಗೆ ಕೆಲವರು ನಾಯಿಗೆ, ಬೆಕ್ಕಿಗೆ ಸುಮ್ಮಸುಮ್ಮನೆ ಹೊಡೆಯುತ್ತಾರೆ. ಹಾಗೆ ಹೊಡೆಯುವುದು, ಬೇಕಂತಲೇ ಗಾಯ ಮಾಡುವುದೆಲ್ಲ ಮಾಡಬಾರದು. ನೀವು ಈ ರೀತಿ ಮಾಡದಿದ್ದರೂ, ಬೇರೆಯವರು ಹೀಗೆ ಮಾಡುವುದನ್ನು ಕಂಡಾಗ, ಅದನ್ನು ತಡೆಯುವುದು ಕೂಡ ಪುಣ್ಯದ ಕೆಲಸವೇ ಸರಿ.

ಐದನೇಯ ಕೆಲಸ, ಗುರುಹಿರಿಯರಿಗೆ ಗೌರವ ನೀಡುವುದು. ಮಕ್ಕಳಿಗೆ ಪ್ರೀತಿ ಕಾಳಜಿಯಿಂದ ನೋಡುವುದು. ಹಿರಿಯರಿಗೆ ಗೌರವಿಸುವುದು, ಅವರ ಕಾಲಿಗೆರಗಿ ನಮಸ್ಕರಿಸುವುದು ಪುಣ್ಯದ ಕೆಲಸ. ಅಂತೆಯೇ ಪುಟ್ಟ ಮಕ್ಕಳಿಗೆ ಪ್ರೀತಿ ತೋರಿಸುವುದು, ಕಾಳಜಿ ಮಾಡುವುದು ಕೂಡ, ದೇವರ ಪೂಜೆಗೆ ಸಮ.

- Advertisement -

Latest Posts

Don't Miss