ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಮಕ್ಕಳಾಗುವುದಕ್ಕೂ ಮುನ್ನ ಹೆಚ್ಚು ಹೊಟ್ಟೆ ನೋವು, ಬ್ಲೀಡಿಂಗ್ ಇರತ್ತೆ. ಮಕ್ಕಳಾದ ಮೇಲೆ ಈ ಸಮಸ್ಯೆ ಕಡಿಮೆಯಾಗತ್ತೆ. ಹೀಗೆ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ಸಮಸ್ಯೆ ಇರುತ್ತದೆ. ಇಂದು ನಾವು ಮುಟ್ಟಿನ ಸಮಯದಲ್ಲಿ ಹೆಚ್ಚು ಬ್ಲೀಡಿಂಗ್ ಆಗಲು ಕಾರಣ ಮತ್ತು ಚಿಕಿತ್ಸೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ..
ಹೆಚ್ಚು ಬ್ಲೀಡಿಂಗ್ ಆಗಲು ಮೊದಲ ಕಾರಣವೇನೆಂದ್ರೆ, ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗೋದು. ಮಹಿಳೆಯರಿಗೆ ಜೀವನದ ಯಾವ ಘಟ್ಟದಲ್ಲಾದರೂ ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಬಹುದು. ಮುಟ್ಟು ಶುರುವಾದಾಗ ಮತ್ತು ಮುಟ್ಟು ನಿಲ್ಲುವ ಸಂದರ್ಭದಲ್ಲಿ ಹೆಚ್ಚು ಹಾರ್ಮೋನಲ್ ಇಂಬ್ಯಾಲೆನ್ಸ್ ಆಗುತ್ತದೆ.
ಥೈರಾಯ್ಡ್, ಫೈಬ್ರಾಯ್ಡ್ ಸಮಸ್ಯೆ ಇದ್ದಾಗಲೂ ಹೆಚ್ಚು ಬ್ಲೀಡಿಂಗ್ ಆಗುತ್ತದೆ. ಹೆಚ್ಚು ಟೆನ್ಶನ್ ತೆಗೆದುಕೊಳ್ಳುವುದರಿಂದ, ಯಾವ ಆರೋಗ್ಯ ಸಮಸ್ಯೆ ಬಂದಾಗಲೂ, ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುವುದರಿಂದಲೂ ಬ್ಲೀಡಿಂಗ್ ಹೆಚ್ಚಾಗುತ್ತದೆ. ಯುರಿನ್ ಇನ್‌ಫೆಕ್ಷನ್ ಇದ್ದಾಗ, ಗರ್ಭಪಾತವಾದಾಗ, ಸಿಸೆರಿನ್ ಆದಾಗ ಬ್ಲೀಡಿಂಗ್ ಹೆಚ್ಚಾಗುವ ಸಾಧ್ಯತೆ ಇದೆ.
ನಿಮಗೆ ಹೆಚ್ಚು ಬ್ಲೀಡಿಂಗ್ ಸಮಸ್ಯೆ ಇದ್ದರೆ, ನೀವು ಹೆಚ್ಚು ಉಷ್ಣವಾದ, ಫ್ರಿಜ್‌ನಲ್ಲಿರಿಸಿದ, ಆಹಾರವನ್ನ ತಿನ್ನಬಾರದು. ಏನೇನ ತಿನ್ನುವುದಿದ್ದರೂ, ಫ್ರೆಶ್ ಆಗಿ ತಯಾರಿಸಿ ತಿನ್ನಿ. ಹೆಚ್ಚು ಮಸಾಲೆ, ಉಪ್ಪು, ಹುಳಿ, ಖಾರ ಬೆರೆಸಿದ ಪದಾರ್ಥವನ್ನು ಸೇವಿಸಬೇಡಿ. ಬೆಲ್ಲ, ಎಳ್ಳು, ಮಾಂಸ, ಮೀನು ಇವೆಲ್ಲವನ್ನೂ ಸೇವಿಸಬಾರದು. ರಾಜ್ಮಾ, ಕಡಲೆ, ಬಟಾಣಿ, ಉದ್ದಿನ ಬೇಳೆ ಪದಾರ್ಥವನ್ನ ಕೂಡ ಸೇವಿಸುವಂತಿಲ್ಲ. ಯಾಕಂದ್ರೆ ಇವೆಲ್ಲ ದೇಹಕ್ಕೆ ಉಷ್ಣತೆ ಒದಗಿಸುವ ಆಹಾರವಾಗಿದೆ.
ದ್ರಾಕ್ಷಿ, ಪಪ್ಪಾಯಿ, ಅನಾನಸ್ ಹಣ್ಣನ್ನ ಕೂಡ ಸೇವಿಸುವಂತಿಲ್ಲ. ಸೀಸನಲ್ ಫ್ರೂಟ್ಸ್ ಆಗಿರುವಂಥ, ಮಾವಿನ ಹಣ್ಣು, ಹಲಸಿನ ಹಣ್ಣನ್ನ ಕೂಡ ಲಿಮಿಟಿನಲ್ಲಿ ಸೇವಿಸಬೇಕು. ಬಾದಾಮ್ ತಿನ್ನುವುದಿದ್ದರೂ ನೆನೆಸಿ ಸಿಪ್ಪೆ ತೆಗೆದು ತಿನ್ನಿ, ಮೊಸರು ತಿನ್ನುವ ಮೊದಲು ಅದಕ್ಕೆ ಕೊಂಚ ನೀರು ಸೇರಿಸಿ. ಮಜ್ಜಿಗೆ, ತುಪ್ಪ, ಹಾಲಿನ ಸೇವನೆ ಉತ್ತಮ. ಇನ್ನು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು ತುಂಬಾ ಇಂಪಾರ್ಟೆಂಟ್. ಅಲ್ಲದೇ ಸ್ವಲ್ಪ ಸಿಟ್ಟು ಕೂಡ ಕಡಿಮೆ ಮಾಡಿಕೊಳ್ಳಿ. ನಾವೀಗ ಹೇಳಿರುವ ಪರಿಹಾರವನ್ನು ನೀವು ಪ್ರಯೋಗ ಮಾಡಿದರೂ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿಲ್ಲವೆಂದಲ್ಲಿ, ನೀವು ಖಂಡಿತ ಒಮ್ಮೆ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ.
ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..
ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1