ಎಲ್ಲರಿಗೂ ಚುರುಕಾದ, ನೋಡಲು ಸುಂದರವಾದ, ಆರೋಗ್ಯಕರ ಮಗು ಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಎಲ್ಲರಿಗೂ ಅಂಥ ಮಮಗು ಹುಟ್ಟಲ್ಲ. ಕೆಲ ಮಕ್ಕಳು ನೋಡಲು ಚೆಂದವಿದ್ರೆ, ಅಷ್ಟು ಚುರುಕಿರುವುದಿಲ್ಲ. ಮತ್ತೆ ಕೆಲ ಮಕ್ಕಳು ನೋಡಲು ಅಷ್ಟು ಚೆಂದವಿಲ್ಲದಿದ್ದರೂ, ಆರೋಗ್ಯವಾಗಿ, ಚುರುಕಾಗಿ ಇರುತ್ತಾರೆ. ಇನ್ನು ಕೆಲ ಅಮ್ಮಂದಿರು ಎಷ್ಟೇ ಉತ್ತಮ ಆಹಾರ ತಿಂದರೂ, ಸರಿಯಾಗಿ ನಿದ್ದೆ ಮಾಡಿದ್ರೂ ಕೂಡ ಬುದ್ದಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟುತ್ತಾರೆ. ಹಾಗಾದ್ರೆ ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದು ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಯಾವ ಪತಿ- ಪತ್ನಿಯ ದೇಹದಲ್ಲಿ ಕ್ಯಾಲ್ಶಿಯಂ ಅಂಶ ತುಂಬಾ ಕಡಿಮೆ ಇರುತ್ತದೆಯೋ, ಅಂಥವರ ಮಕ್ಕಳು ಬುದ್ಧಿಮಂದ ಮತ್ತು ಅಂಗವೈಕಲ್ಯವನ್ನ ಅನುಭವಿಸುತ್ತಾರೆ. ಹಾಗಾಗಿ ಮಕ್ಕಳು ಮಾಡಿಕೊಳ್ಳುವ ಮುನ್ನ ಪತಿ ಪತ್ನಿಯ ಆರೋಗ್ಯ ಸರಿಯಾಗಿ ಇರುವಂತೆ, ದೇಹದಲ್ಲಿ ವಿಟಾಮಿನ್, ಪ್ರೋಟೀನ್, ಕ್ಯಾಲ್ಶಿಯಂ ಕಡಿಮೆ ಇರದಂತೆ ನೋಡಿಕೊಳ್ಳಬೇಕು.
ಕ್ಯಾಲ್ಸಿಯಂ ಅಂಶ ಸರಿಯಾಗಿ ಇರಬೇಕು ಅಂದ್ರೆ, ನೀವು ಮೂಳೆ ಗಟ್ಟಿಕೊಳಿಸುವ ಆಹಾರವನ್ನು ತಿನ್ನಬೇಕು, ಶೇಂಗಾ ಮತ್ತು ಬೆಲ್ಲ, ಪಾಲಕ್ ಸೊಪ್ಪು, ಎಳನೀರು, ನೆಲ್ಲಿಕಾಯಿ, ಚಿಕ್ಕು ಹಣ್ಣು, ಬಾಳೆ ಹಣ್ಣು, ಡ್ರೈಫ್ರೂಟ್ಸ್ ಸೇರಿ, ಹಲವು ಆರೋಗ್ಯಕರ ಹಣ್ಣುಗಳನ್ನು, ತರಕಾರಿ, ಸೊಪ್ಪುಗಳನ್ನ ನೀವು ತಿನ್ನಬೇಕು. ತಂದೆ ತಾಯಿಯ ಮೂಳೆ ಗಟ್ಟಿಯಾಗಿದ್ರೆ, ಮಕ್ಕಳು ಆರೋಗ್ಯವಾಗಿರುತ್ತಾರೆ. ಅಲ್ಲದೇ ಗರ್ಭಿಣಿಯಾದ ತಾಯಿ ಕೂಡ ಉತ್ತಮ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.
ಇನ್ನು ನಿಮಗೆ ಅತ್ಯುತ್ತಮವಾದ, ಶಕ್ತಿಯುತವಾದ, ಚುರುಕಾದ ಮಕ್ಕಳು ಬೇಕಂದ್ರೆ, ನೀವು ಸಂಭೋಗ ಮಾಡುವ ಮೂರು ತಿಂಗಳಿಗೂ ಮೊದಲೇ ಸಾತ್ವಿಕ ಆಹಾರ ತಿನ್ನಲು ಶುರು ಮಾಡಬೇಕು. ಮತ್ತು ಗರ್ಭಿಣಿಯಾದ ಬಳಿಕ, ತಾಯಿಯಾದವಳು, ಬಾಣಂತನದವರೆಗೂ ಸಾತ್ವಿಕ ಆಹಾರವನ್ನೇ ತಿನ್ನಬೇಕು. ಸಾತ್ವಿಕ ಭೋಜನವೆಂದರೆ, ಮಣ್ಣಿನ ಪಾತ್ರೆಯಲ್ಲಿ ಮಾಡಿ, ಸಸ್ಯಾಹಾರಿ ಊಟ.
ಈ ವೇಳೆ ಯಾವುದೇ ಕಾರಣಕ್ಕೂ ಪತಿ- ಪತ್ನಿ ಇಬ್ಬರೂ ಮಾಂಸಾಹಾರ, ಮೊಟ್ಟೆ, ಮದ್ಯಪಾನ, ಧೂಮಪಾನ ಸೇವನೆ ಮಾಡಲೇಬಾರದು. ಮತ್ತು ಹೆಚ್ಚಿಗೆ ಖಾರವಾದ, ಮಸಾಲೆಯುಕ್ತ ಪದಾರ್ಥದ ಸೇವನೆಯೂ ಮಾಡಬಾರದು. ಗೋವಿನ ಹಾಲು, ಆ ಹಾಲಿನಿಂದ ಮಾಡಿದ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪದ ಸೇವನೆ ಮಾಡಬೇಕು. ಎಲ್ಲಕ್ಕಿಂತ ಹೆಚ್ಚು ಹಾಲು, ಮೊಸರು ಮತ್ತು ತುಪ್ಪದ ಸೇವನೆ ಮಾಡುವುದು ಮುಖ್ಯ.