ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೆ ಮತ್ತೊಮ್ಮೆ ವಚನಭ್ರಷ್ಟರಾಗ್ತಾರೆ ಅಂತ ಬಿಜೆಪಿ ಶಾಸಕ ರಾಜೀವ್ ಹೇಳಿದ್ದಾರೆ.
ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡಾ ರೆಸಾರ್ಟ್ ಬಳಿ ಮಾತನಾಡಿದ ಶಾಸಕ ರಾಜೀವ್, ಸಿಎಂ ವಿಶ್ವಾಸ ಮತ ಯಾಚನೆ ಮಾಡ್ತೀನಿ ಅಂದಿದ್ದೇ ಪ್ಲಸ್ ಪಾಯಿಂಟ್ ಅಂತ ಭಾವಿಸಲಾಗಿದೆ. ಆದ್ರೆ ಅಲ್ಪಮತಕ್ಕೆ ಸರ್ಕಾರ ಇಳಿದಾಗ ಸಿಎಂಗೆ ವಿಶ್ವಾಸ ಮತ ಯಾಚನೆ ಬಿಟ್ಟು ಬೇರೆ ದಾರಿನೇ ಇರಲ್ಲ. ವಿಶ್ವಾಸಮತ ಯಾಚನೆ ಮಾಡದ ಹೊರತು ಬೇರೆ ಯಾವ ನಡವಳಿಕೆ, ಕಲಾಪ ನಡೆಸಲು ಸಿಎಂಗೆ ಅವಕಾಶ ಇರೋದಿಲ್ಲ ಅಂತ ರಾಜೀವ್ ಹೇಳಿದ್ರು. ಅಲ್ಲದೆ ವಿಶ್ವಾಸಮತ ಯಾಚಿಸದಿದ್ದಲ್ಲಿ ಸಿಎಂ ಮತ್ತೊಂದು ಸಾರಿ ವಚನಭ್ರಷ್ಟರಾಗ್ತಾರೆ, ವಚನಬ್ರಷ್ಟರಾಗೋದು ಬೇಡ ಅಂದರೆ ಸೋಮವಾರ ವಿಶ್ವಾಸ ಮತ ಯಾಚನೆ ಮಾಡಲಿ ಅಂತ ಸವಾಲ್ ಹಾಕಿದ್ದಾರೆ.
ಬಳಿಕ ಮಾತನಾಡಿದ ರಾಜೀವ್, ಅವಿಶ್ವಾಸ ಮತ ಯಾಚನೆ ವಿಶ್ವಾಸ ಮತ ಯಾಚನೆ ಎರಡಿದೆ.ಈಗಾಗಲೇ ನಮ್ಮ ನಾಯಕರು ಹೇಳಿದಂತೆ ಸಿಎಂ ಬಹುಮತ ಕಳೆದುಕೊಂಡಿರೋ ಕಾರಣ ಬಿಜೆಪಿಯವರು ಅವಿಶ್ವಾಸ ಮತ ನಿರ್ಣಯ ಮಾಡೋ ಅಗತ್ಯವಿಲ್ಲ. ಈಗ ವಿಶ್ವಾಸಮತ ಯಾಚನೆ ಮಾಡೋದು ಸಿಎಂ ಕರ್ತವ್ಯ ಅಂತ ಹೇಳಿದ್ರು. ಇನ್ನು ಮೂರು ಜನ ಸಚಿವರು ರಾಜೀನಾಮೆ ಕೊಟ್ಟಿರೋದಕ್ಕೆ ಸದನದ ಒಪ್ಪಿಗೆ ಪಡೆಯಬೇಕು. ಸಚಿವ ಸಂಪುಟದ ಮೇಲೆ ಸದನದ ವಿಶ್ವಾಸವಿದೆ ಅಂತ ಸಾಬೀತುಪಡಿಸಬೇಕು. ನಿಯಮ 29ರಡಿ ಒಪ್ಪಿಗೆ ಪಡೆಯಬೇಕು. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ವಿಶ್ವಾಸ ಮತ ಯಾಚನೆ ಮಾಡಲ್ಲ. ಮತ್ತೊಮ್ಮೆ ವಚನಬ್ರಷ್ಟರಾಗ್ತಾರೆ ಅಂತ ಇದೇ ವೇಳೆ ರಾಜೀವ್ ಭವಿಷ್ಯ ನುಡಿದ್ರು.
ಅತೃಪ್ತರಿಗೆ ಆಟ, ಯಡಿಯೂರಪ್ಪಾಗೆ ಪ್ರಾಣ ಸಂಕಟ..!ಮಿಸ್ ಮಾಡದೇ ಈ ವಿಡಿಯೋ ನೋಡಿ