- Advertisement -
ಬೇಕಾಗುವ ಸಾಮಗ್ರಿ: 500 ಗ್ರಾಂ ಮೈದಾ, ಅರ್ಧ ಕಪ್ ತುಪ್ಪ, ಚಿಟಿಕೆ ಉಪ್ಪು, ಹಿಟ್ಟು ಕಲಿಸಲು ಉಗುರು ಬೆಚ್ಚಗಿನ ನೀರು, 500 ಗ್ರಾಮ್ ಸಕ್ಕರೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಮೈದಾ, ತುಪ್ಪ, ಉಪ್ಪು, ಉಗುರು ಬೆಚ್ಚಗಿನ ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲಿಸಿ. ಬಳಿಕ ಬಟ್ಟೆ ಒದ್ದೆ ಮಾಡಿ, ಇದರ ಮೇಲೆ 10 ನಿಮಿಷ ಹಾಕಿಡಿ.
ಬಳಿಕ ಚಪಾತಿ ತಯಾರಿಸಿದಂತೆ ಹಿಟ್ಟನ್ನು ಲಟ್ಟಿಸಿ, ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಳಿಕ ಕಾದ ಎಣ್ಣೆಯಲ್ಲಿ ಇದನ್ನು ಕರಿಯಿರಿ. ಈಗ ಸಕ್ಕರೆ ಮತ್ತು ನೀರು ಹಾಕಿ ಸಕ್ಕರೆ ಪಾಕ ತಯಾರಿಸಿ. ಗಟ್ಟಿ ಸಕ್ಕರೆ ಪಾಕವಾದ ಬಳಿಕ, ಇದರಲ್ಲಿ ಕರಿದಿದ್ದನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ಕೆಲ ಸಮಯ ಹಾಗೇ ಇಟ್ಟಾಗ, ಉತ್ತರ ಭಾರತೀಯರು ಮಾಡುವ ಶಕ್ಕರ್ ಪಾರಾ ರೆಡಿಯಾಗುತ್ತದೆ.
- Advertisement -