ನೀವು ಆರೋಗ್ಯವಾಗಿದ್ರೆ ನಿಮ್ಮ ತ್ವಚೆಯ ಮೇಲೆ ಆ ಆರೋಗ್ಯ ಎದ್ದು ಕಾಣತ್ತೆ. ಯಾಕಂದ್ರೆ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರತ್ತೆ. ನಿಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದಲ್ಲಿ, ನಿಮ್ಮ ಮುಖ ಚೆಂದಗಾಣಿಸಲು ನೀವು ಮೇಕಪ್ ಸಹಾಯ ಪಡೆಯಬೇಕಾಗತ್ತೆ. ಆದ್ರೆ ನೀವು ಮನೆಯಲ್ಲೇ ತ್ವಚೆಯ ಆರೋಗ್ಯಕ್ಕಾಗಿ ಕೆಲವು ರೆಮಿಡಿ ಬಳಸಬಹುದು. ಹಾಗಾದ್ರೆ ಅದ್ಯಾವ ರೆಮಿಡಿ ಅಂತಾ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ ಗೋಟುಕಲಾ ಎಂಬ ಎಲೆಯಲ್ಲಿ ಸೌಂದರ್ಯ ವೃದ್ಧಿಸುವ ಅಂಶವಿರುತ್ತೆ. ಗೋಟುಕಲಾ ಎಂಬ ಗಿಡವನ್ನ ಮನೆಯಲ್ಲೇ ಸುಲಭ2ವಾಗಿ ಬೆಳೆಸಬಹುದು. ಇದು ಬ್ರಾಹ್ಮಿ ಎಲೆಯ ಜಾತಿಯ ಎಲೆಯಾಗಿದೆ. ಗೋಟುಕಲಾ ಎಲೆಯ ಪೇಸ್ಟ್ ಮಾಡಿಕೊಂಡು, ಅದಕ್ಕೆ ಅರ್ಧ ಸ್ಪೂನ್ ರೋಸ್ ವಾಟರ್ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ, ಕೊಂಚ ನೀರು ಹಾಕಿ, ಫೇಸ್‌ಪ್ಯಾಕ್ ರೆಡಿ ಮಾಡಿ. ಇದನ್ನ ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ಪೇಸ್‌ಪ್ಯಾಕ್ ಹಾಕಿದ್ರೆ ಸಾಕು.
ಎರಡನೇಯ ಟಿಪ್ಸ್, ಗೋಟುಕಲಾ ಎಲೆಯ ಸಲಾಡ್ ಮಾಡಿ ತಿನ್ನಬೇಕು. ವಾರದಲ್ಲಿ ಮೂರು ಬಾರಿ ಈ ಸಲಾಡ್ ತಿಂದ್ರೆ ಸಾಕು. ಒಂದು ಈರುಳ್ಳಿ, ಒಂದು ಟೋಮೆಟೋ, ಅರ್ಧ ಕಪ್ ಗೋಟುಕಲಾ ಎಲೆ, ಇವಿಷ್ಟನ್ನೂ ಸಣ್ಣಗೆ ಕತ್ತರಿಸಿ ಮಿಕ್ಸ್ ಮಾಡಿ. ಇದಕ್ಕೆ ಕೊಂಚ ಕಾಯಿತುರಿ, ಅರ್ಧ ಸ್ಪೂನ್ ನಿಂಬೆರಸ, ರುಚಿಗೆ ಬೇಕಾದಷ್ಟು ಸೇಂಧವ ಲವಣ, ಇವಿಷ್ಟನ್ನ್ ಮಿಕ್ಸ್ ಮಾಡಿ, ಸಲಾಡ್ ಮಾಡಿ, ಮಧ್ಯಾಹ್ನದ ಹೊತ್ತು ಸೇವಿಸಿ.
ಒಂದು ಸ್ಪೂನ್ ಆ್ಯಲೋವೆರಾ ಜೆಲ್, ಒಂದು ಸ್ಪೂನ್ ಜೇನುತುಪ್ಪ, ಎರಡನ್ನೂ ಮಿಕ್ಸ್ ಮಾಡಿ, ಮುಖಕ್ಕೆ ಮಸಾಜ್ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಫೇಸ್‌ವಾಶ್ ಮಾಡಿ. ಇನ್ನು ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಮತ್ತು ಹಾಲು ಸೇರಿಸಿ, ಫೇಸ್‌ಪ್ಯಾಕ್ ಹಾಕಿ. ನಂತರ ಫೇಸ್‌ವಾಶ್ ಮಾಡಿ, ಹಸುವಿನ ತುಪ್ಪದಿಂದ ಮುಖಕ್ಕೆ ಮಸಾಜ್ ಮಾಡಿ.
ನಾವು ಈಗ ಹೇಳಿದ ಮನೆಮದ್ದುಗಳಲ್ಲಿ ಯಾವುದಾದರೂ ಒಂದು ಮನೆಮದ್ದು ಉಪಯೋಗಿಸಿ, ನೀವು ನಿಮ್ಮ ಸೌಂದರ್ಯವನ್ನು ಅಭಿವೃದ್ಧಿಗೊಳಿಸಬಹುದು.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?