ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಪಂಚದಾದ್ಯಂತ ಎಷ್ಟು ಸದ್ದು ಮಾಡಿತ್ತು ಅನ್ನೋದು ನಿಮ್ಮೆಲ್ಲರಿಗೂ ಗೊತ್ತು. ಯಾವಾಗ ಕೆಜಿಎಫ್ 2 ಬರತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಅದು ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. ಈಗ ಕೆಜಿಎಫ್ 3 ಶೂಟಿಂಗ್ ನಡೆಯುತ್ತಿದ್ದು, ಅದು ಯಾವಾಗ ರಿಲೀಸ್ ಆಗತ್ತೆ ಅಂತಾ ಜನ ವೇಯ್ಟ್ ಮಾಡ್ತಿದ್ದಾರೆ.
ಇದೇ ಸಮಯದಲ್ಲಿ ರಾಧಿಕಾ ಯಶ್, ಕೆಜಿಎಫ್ ಚಿತ್ರದ ಶೂಟಿಂಗ್ ನೆನಪನ್ನ ಮೆಲುಕು ಹಾಕಿದ್ದಾರೆ. ಪುಟ್ಟ ಐರಾನನ್ನು ಹಿಡಿದು, ರಾಧಿಕಾ ಶೂಟಿಂಗ್ ಸ್ಪಾಟ್‌ಗೆ ಹೋಗಿದ್ದು, ಅಲ್ಲಿ ಯಶ್ ಅವರ ಔಟ್‌ಫಿಟ್ ಕಂಡು, ಇಟ್ಸ್ ವೆರಿ ನೈಸ್ ಎಂದಿದ್ದಾರೆ. ಈ ವೀಡಿಯೋವನ್ನ ರಾಧಿಕಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೆನ್ ರಾಕಿ ಮೀಟ್ಸ್ ರಾಧಿಕಾ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋ ನೋಡಲು ಈ ಲಿಂಕ್ ಪ್ರೆಸ್ ಮಾಡಿ..
ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..