Sunday, October 13, 2024

Latest Posts

ಕೇಂದ್ರ ಸಚಿವರ ಭೇಟಿಯಾದ ರೋಷನ್ ಬೇಗ್

- Advertisement -

ದೆಹಲಿ: ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದು ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಮೇಲೆ ಕೆಂಡಕಾರಿದ್ದ ಮಾಜಿ ಸಚಿವ ರೋಷನ್ ಬೇಗ್ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಭೇಟಿಯಾಗಿದ್ದಾರೆ. ರೋಷನ್ ಬೇಗ್ ರ ಈ ನಡೆ ಬಿಜೆಪಿ ಸೇರೋದು ಖಚಿತ ಅನ್ನೋದನ್ನ ಮತ್ತೆ ಸಾಬಿತುಪಡಿಸಿದೆ

ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಯವರನ್ನು ಕಾಂಗ್ರೆಸ್ ನ ಮಾಜಿ ಸಚಿವ ರೋಷನ್ ಬೇಗ್ ಭೇಟಿ ಮಾಡಿದ್ರು. ಕಾಂಗ್ರೆಸ್ ವಿರುದ್ಧ ಹರಿಯಾಯ್ದಿದ್ದ ಬೇಗ್ ಇದೀಗ ಕೇಂದ್ರ ಸಚಿವರನ್ನು ಭೇಟಿಯಾಗೋ ಮೂಲಕ ಮತ್ತೊಮ್ಮೆ ತಾವು ಬಿಜೆಪಿ ಸೇರ್ಪಡೆಯಾಗೋ ಸುಳಿವು ನೀಡಿದ್ದಾರೆ.

ಇನ್ನು ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪವಾದ ಬೆನ್ನಲ್ಲಿ ಕೇಂದ್ರ ಸಚಿವ ನಖ್ವಿ ಭೇಟಿ ಕುತೂಹಲ ಕೆರಳಿಸಿದೆ.

ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=R_zM-Ugb7cg
- Advertisement -

Latest Posts

Don't Miss