- Advertisement -
Recipe: ಸಾಬಕ್ಕಿ ವಡೆ ಮಾಡಲು ಒಂದು ಕಪ್ ಸಾಬಕ್ಕಿ, ಎರಡು ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಶೇಂಗಾ, ಎರಡು ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಉಪ್ಪು, ಕೊಂಚ ಗರಂ ಮಸಾಲೆ, ಕರಿಯಲು ಎಣ್ಣೆ, ಇವಿಷ್ಟು ಬೇಕು.
ಮೊದಲು ಸಾಬಕ್ಕಿಯನ್ನು ಚೆನ್ನಾಗಿ ತೊಳೆದು ನಾಲ್ಕು ಗಂಟೆ ನೆನೆಸಿಡಿ. ಬಳಿಕ, ಇದಕ್ಕೆ ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಉಪ್ಪು, ಕೊತ್ತೊಂಬರಿ ಸೊಪ್ಪು, ಶೇಂಗಾ, ಹಸಿಮೆಣಸಿನಕಾಯಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ, ವಡೆಯ ರೀತಿ ಶೇಪ್ ಕೊಡಿ. ಬಳಿಕ ಎಣ್ಣೆಯಲ್ಲಿ ಕರಿದರೆ, ಸಾಬಕ್ಕಿ ವಡೆ ರೆಡಿ..
- Advertisement -