- Advertisement -
Recipe: ಸಜ್ಜಿಗೆ ರೊಟ್ಟಿ ಮಾಡಲು, ಒಂದು ಕಪ್ ಸಜ್ಜಿಗೆ(ರವಾ), ಒಂದು ಬೌಲ್ ಸೌತೆ ತುರಿ ಮತ್ತು ಈರುಳ್ಳಿ, ಕೊಂಚ ಕಾಯಿತುರಿ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತೊಂಬರಿ ಸೊಪ್ಪು, ಉಪ್ಪು, ಕೊಂಚ ಎಣ್ಣೆ. ಇವಿಷ್ಟು ಬೇಕು. ನಿಮಗೆ ಬೇಕಾದಲ್ಲಿ, ಕ್ಯಾರೇಟ್ ಸೇರಿ ಬೇರೆ ಬೇರೆ ತರಕಾರಿ, ಸೊಪ್ಪುಗಳ ಬಳಕೆ ಮಾಡಬಹುದು.
ಮೊದಲು ಮಿಕ್ಸಿಂಗ್ ಬೌಲ್ ತೆಗೆದುಕೊಂಡು, ಅದಕ್ಕೆ ಸಜ್ಜಿಗೆ, ಸೌತೆ ತುರಿ, ಈರುಳ್ಳಿ, ಕೊಬ್ಬರಿ ತುರಿ, ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತೊಂಬರಿ ಸೊಪ್ಪು, ಉಪ್ಪು ಇವಿಷ್ಯನ್ನು ಹಾಕಿ, ನೀರು ಹಾಕಿ, ರೊಟ್ಟಿ ಹಿಟ್ಟಿನ ಹದಕ್ಕೆ ಮಿಕ್ಸ್ ಮಾಡಿ. ಅರ್ಧ ಗಂಟೆ ಬಿಟ್ಟು, ರೊಟ್ಟಿ ತಟ್ಟಿ, ಬೆಣ್ಣೆ ಮತ್ತು ಗಟ್ಟಿ ಚಟ್ನಿಯೊಂದಿಗೆ ಸೇವಿಸಿ..
- Advertisement -