Thursday, June 19, 2025

Latest Posts

ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

- Advertisement -

Health Tips: ನೀವು ಪ್ರಾಣಿಗಳು ತಮ್ಮ ನಾಲಿಗೆಯಿಂದ ಚರ್ಮ ವರೆಸಿಕೊಳ್ಳುವುದನ್ನ ನೋಡಿರಬಹದು. ಗಾಯವಾದ ಸ್ಥಳದಲ್ಲಿ, ಪೆಟ್ಟು ಬಿದ್ದ ಸ್ಥಳದಲ್ಲಿ ನಾಲಿಗೆಯಿಂದ ನೆಕ್ಕಿ ಚರ್ಮವನ್ನು ವರೆಸಿಕೊಳ್ಳುತ್ತದೆ. ಯಾಕಂದ್ರೆ ಆ ನಾಲಿಗೆಯ ಮೇಲೆ ಔಷಧಿಯ ಗುಣಗಳಿರುತ್ತದೆ. ಅದೇ ರೀತಿ ಮನುಷ್ಯನ ಬಾಯಿಯಲ್ಲೂ ಕೂಡ ಲಾಲಾರಸವಿರುತ್ತದೆ. ಆ ಲಾಲಾರಸವೇ, ಮನುಷ್ಯನ ಆರೋಗ್ಯ ಕಾಪಾಡುತ್ತದೆ. ಹಾಗಾದರೆ ನಮ್ಮ ಬಾಯಲ್ಲಿರುವ ಲಾಲಾರಸದಿಂದ ಏನೇನು ಪ್ರಯೋಜನಗಳಿದೆ ಅಂತಾ ತಿಳಿಯೋಣ ಬನ್ನಿ..

ನಿಮಗೆ ಚರ್ಮ ರೋಗವಿದ್ದಲ್ಲಿ, ಅಥವಾ ಗಾಯವಾಗಿದ್ದಲ್ಲಿ, ಸ್ವಲ್ಪ ದಿನ ನಿಮ್ಮ ಎಂಜಿಲನ್ನೇ ನೀವು ಅದಕ್ಕೆ ಹಚ್ಚಿಕೊಳ್ಳಿ. ಕೆಲ ದಿನಗಳಲ್ಲೇ ಚರ್ಮ ರೋಗ ಕಂಟ್ರೋಲಿಗೆ ಬರುತ್ತದೆ. ಅಷ್ಟು ಶಕ್ತಿ ನಿಮ್ಮ ಎಂಜಿಲಿನಲ್ಲಿ ಇರುತ್ತದೆ. ಅಷ್ಟೇ ಅಲ್ಲದೇ, ಮುಖದ ಮೇಲೆ ಮೊಡವೆಯಾಗಿದ್ದಲ್ಲಿ, ಪ್ರತಿದಿನ ನಿಮ್ಮ ಎಂಜಿಲನ್ನು ಅದಕ್ಕೆ ಹಚ್ಚಿ. ಆದರೆ ಆ ಎಂಜಿಲು ಖಾಲಿ ಹೊಟ್ಟೆಯಲ್ಲಿ ರೆಡಿಯಾಗಿದ್ದಿರಬೇಕು.

ಅಂದರೆ, ರಾತ್ರಿಯಿಡೀ ನಿಮ್ಮ ಬಾಯಿಯಲ್ಲಿ ತಯಾರಾದ ಲಾಲಾರಸ, ಹೆಚ್ಚು ಆರೋಗ್ಯಕಾರಿಯಾಗಿರುತ್ತದೆ. ಎದ್ದ ತಕ್ಷಣ ಬಾಯಿ ಸ್ವಚ್ಛಗೊಳಿಸುವ ಮುನ್ನ ಮುಖ ತೊಳೆದು, ಬಳಿಕ ನಿಮ್ಮ ಮುಖದ ಮೇಲಾದ ಮೊಡವೆಗೆ ಎಂಜಿಲು ಹಚ್ಚಿ. ಇದಾದ ನಂತರ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಬಳಿಕ ಬ್ರಶ್ ಮಾಡಿ. ನೀವು ಬ್ರಶ್ ಮಾಡದೇ, ನೀರು ಕುಡಿದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ರಾತ್ರಿ ಬಾಯಿಯಲ್ಲಿ ರೆಡಿಯಾಗುವ ಲಾಲಾರಸ ನಿಮ್ಮ ಸೌಂದರ್ಯ ಕಾಪಾಡುವುದರ ಜೊತೆಗೆ, ಆರೋಗ್ಯವನ್ನೂ ಅಭಿವೃದ್ಧಿಗೊಳಿಸುತ್ತದೆ. ಆದರೆ ನೀವು ಎದ್ದ ಬಳಿಕ ಬಾಯಿ ಮುಕ್ಕಳಿಸಿದ್ದಲ್ಲಿ, ಆ ಎಂಜಿಲು ಸುಮ್ಮನೆ ವೇಸ್ಟ್ ಆಗುತ್ತದೆ. ಅದಕ್ಕಾಗಿ ಎದ್ದ ತಕ್ಷಣ ನೀರು ಕುಡಿದು, ಬಳಿಕ ಬ್ರಶ್ ಮಾಡಬೇಕು. ಇದರಿಂದ ಹೊಟ್ಟೆಯ ಯಾವ ಸಮಸ್ಯೆ ಇದ್ದರೂ ಕಡಿಮೆಯಾಗುತ್ತದೆ.

ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

ನೀವು ಈ ಪರಿಸರಕ್ಕೆ ಕೊಡುಗೆ ಕೊಡುವುದಿದ್ದಲ್ಲಿ ಹೀಗೆ ಮಾಡಿ..

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

- Advertisement -

Latest Posts

Don't Miss