Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಈಗಾಗಲೇ ಸಿಎಂ ರೇಸ್ ನಲ್ಲಿದ್ದಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಬಜೆಟ್ ನಂತರ ಸಿಎಂ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆಗಾಗಿ ಸಮಯ ಕಾಯಬೇಕು. ವರಿಷ್ಠರು ಅಂತಿಮ ತೀರ್ಮಾನ ತಗೋತಾರೆ. ಸಂಪುಟ ಪುನರ್ರಚನೆ ಬಗ್ಗೆ ಮಾತನಾಡೋ ಅಧಿಕಾರ ನನಗಿಲ್ಲ. ಇದು ನನ್ನ ವ್ಯಾಪ್ತಿಗೆ ಬರಲ್ಲ. ನಾನು ಮಂತ್ರಿ ಮಂಡಲದಲ್ಲಿ ಒಬ್ಬ ಮಂತ್ರಿ ಅಷ್ಟೇ. ಆ ಬಗ್ಗೆ ಚರ್ಚೆ ಮಾಡುವ ಅಧಿಕಾರ ನಮಗಿಲ್ಲ. ಏನೇ ಇದ್ರು ಈ ಬಗ್ಗೆ ವರಿಷ್ಟರೆ ಚರ್ಚೆ ಮಾಡಬೇಕು. ಈಗಾಗಲೇ ಸಚಿವರ ಕಾರ್ಯವೈಖರಿ ಬಗ್ಗೆ ವರದಿ ತೆಗೆದುಕೊಂಡಿದ್ದಾರೆ. ಯಾವ ಸಚಿವರನ್ನ ತೆಗೆದುಕೊಳ್ಳಬೇಕು, ಕೈ ಬಿಡಬೇಕು ಹಿರಿಯ ನಾಯಕರೇ ನಿರ್ಧಾರ ತಗೋತಾರೆ. ಪ್ರೋಗ್ರೆಸ್ ರಿಪೋರ್ಟ್ ಅನ್ನ ವರಿಷ್ಟರೆ ನೋಡಿ ತೀರ್ಮಾನ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಡಿ ಇಕ್ಕಳಲ್ಲಿ ಸಿಗಿಸಲು ಹುನ್ನಾರ ವಿಚಾರದ ಬಗ್ಗೆ ಮಾತನಾಡಿರುವ ಸತೀಶ್, ಬಿಜೆಪಿ ಕೈಯಲ್ಲಿ ಏನು ಇಲ್ಲಾ, ಇಡಿ ಒಂದು ಏಜೆನ್ಸಿ. ಇದಕ್ಕೆ ಸಾಕ್ಷ್ಯಾಧಾರಗಳು ಇಲ್ಲ. ಆದರೆ ನಾವು ಮುಡಾ ಪ್ರಕರಣದಲ್ಲಿ ಇಡೀ ದುರುಪಯೋಗವಾಗ್ತಿದೆ ಅಂತ ಹೇಳೋಕೆ ಆಗಲ್ಲ. 14 ಸೈಟ್ ಗಳ ಬಗ್ಗೆನೇ ಹೆಚ್ಚಿನ ವಿಷಯ ಪ್ರಸ್ತಾಪ ಮಾಡ್ತಿರೋದೇ ರಾಜಕೀಯ. ಇದೆ ರೀತಿ 2000 ಸೈಟ್ ಗಳು ಹಂಚಿಕೆ ಆಗಿವೆ, ಆ ಬಗ್ಗೆ ಯಾಕೆ ಚರ್ಚೆ ಆಗ್ತಿಲ್ಲ. ಸಿಎಂ ಅವರ ಪ್ರಕರಣ ಬೆಳಕಿಗೆ ಬಂದ ನಂತರ ಇದು ರಾಜಕೀಯ ಅಂತ ನಾವೇ ಹೇಳಿದ್ವಿ ಎಂದು ಸತೀಶ್ ಜಾರಕಿಹೊಳಿ ಹೇಳಿದರು.