Friday, March 14, 2025

Latest Posts

ವಿವಿಧ ಸಿರಿಧಾನ್ಯಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

- Advertisement -

Krishi News: ಸಿರಿಧಾನ್ಯಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಜೀನಿ ಕುಡಿದವರಿಗೆ, ಸಿರಿ ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳುಂಟು ಅನ್ನೋದು ಗೊತ್ತಾಗಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬಂದಿದ್ದ ಡಾ.ಸಂತೋಷ್ ಅವರು, ವಿವಿಧ ಸಿರಿಧಾನ್ಯಗಳ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಸಜ್ಜೆ, ನವಣೆ, ಕೆಂಪು ನವಣೆ, ಬರಗು, ಹಾರಕ, ಹಾರಕ ಅಕ್ಕಿ ಹೀಗೆ ಹಲವು ರೀತಿಯ ಸಿರಿಧಾನ್ಯಗಳನ್ನು ಕೃಷಿ ಮೇಳದಲ್ಲಿ ಪ್ರದರ್ಶಿಸಲಾಯಿತು. ಅಷ್ಟೇ ಅಲ್ಲದೇ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದಲ್ಲಿ ಬೆಳೆಯುವಂಥ ವಿವಿಧ ರೀತಿಯ ಭತ್ತದ ತಳಿಗಳು, ಅಡಿಕೆಗಳ ಪ್ರದರ್ಶನವೂ ಕೂಡ ಮಾಡಲಾಯಿತು. ಅಲ್ಲದೇ ಕೋಕಂ, ಬಾಳೆಕಾಯಿ ಚಿಪ್ಸ್, ಹಲಸಿನ ಹಣ್ಣಿನ ಚಾಕೋಲೇಟ್ಸ್, ಕರಿಮೆಣಸು ಸೇರಿ ಹಲವು ವಸ್ತುಗಳ ಪ್ರದರ್ಶನವನ್ನು ಸಂತೋಷ್‌ ಅವರು ಕೃಷಿ ಮೇಳದಲ್ಲಿ ಮಾಡಿದ್ದಾರೆ.

ವಿಶ್ವವಿದ್ಯಾಲಯಗಳು ಯಾವ ರೀತಿ ರೈತರಿಗೆ ಅನುಕೂಲವಾಗುವಂತೆ ಬೀಜಗಳನ್ನು ಮಾರಾಟ ಮಾಡುತ್ತದೆ..? ಏಕೆ ವಿವಿಗಳು ಹೈಬ್ರೀಡ್‌ ಬೀಜಗಳ ಮಾರಾಟ ಮಾಡುವುದಿಲ್ಲ..? ತಳಿಗಳಲ್ಲೇ ಬೆಳೆಸಲು ಕಾರಣವೇನು..? ಯಾವ ವೆಬ್‌ಸೈಟ್‌ಗೆ ಹೋದರೆ, ಈ ಸಿರಿಧಾನ್ಯಗಳು, ಅಕ್ಕಿ, ಅಡಿಕೆ ಸೇರಿ ಹಲವು ಬೀಜಗಳನ್ನು ಪಡೆಯಬಹುದು..? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಈ ವೀಡಿಯೋ ನೋಡಿ..

ಚಾಕೋಲೇಟ್ಸ್ ತಿನ್ನಬಾರಂದು ಅಂತಾ ಹೇಳೋದ್ಯಾಕೆ..?

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

ಕಣ್ಣಿನ ಪೊರೆಗೆ treatment ಏನು..?

- Advertisement -

Latest Posts

Don't Miss