ನಿದ್ದೆ ನಮಗೆ ಬೇಕಾದಾಗ ಮಾಡಿದ್ರೂ ಕನಸು ಮಾತ್ರ ನಮಗೆ ಬೇಕಾದ ಹಾಗೆ ಬೀಳೋದಿಲ್ಲಾ. ಅದರಲ್ಲೂ ಕೆಲವೊಂದು ಕನಸು, ನಮ್ಮ ಜೀವನದಲ್ಲಿ ನಡೆಯಬಹುದಾದ ಘಟನೆ ಬಗ್ಗೆ ಸೂಚನೆ ನೀಡುತ್ತದೆ. ಅದೇ ರೀತಿ ಕನಸ್ಸಿನಲ್ಲಿ ಗೋವು ಬಂದು ಕೆಲವು ಸೂಚನೆ ನೀಡುತ್ತದೆ. ಹಾಗಾಗಿ ಇಂದು ನಾವು ಗೋವು ಕನಸ್ಸಿನಲ್ಲಿ ಬಂದರೆ, ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕನಸ್ಸಿನಲ್ಲಿ ಗೋವು ಬರುವುದು ಉತ್ತಮ ಸಂಕೇತ. ಶುಭ ಸಂಕೇತ. ಕನಸ್ಸಿನಲ್ಲಿ ಗೋವು ಬಂದರೆ, ನೀವಂದುಕೊಂಡ ಕೆಲಸ ನೆರವೇರುತ್ತದೆ ಎಂದರ್ಥ. ಅಲ್ಲದೇ, ಕುಟುಂಬಸ್ಥರೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ವ್ಯಕ್ತಿಯ ಶವ ಸಂಸ್ಕಾರವಾದ ಬಳಿಕ ಈ ಕೆಲಸವನ್ನು ಖಂಡಿತ ಮಾಡಿ..
ಇನ್ನು ಕನಸ್ಸಿನಲ್ಲಿ ಕರು ಕಾಣಿಸಿಕೊಂಡರೆ, ನೀವು ಯಾವ ಕೆಲಸ ಮಾಡುತ್ತಿರೋ, ಅದರಲ್ಲಿ ಯಶಸ್ಸು ಕಾಣುತ್ತೀರಿ ಎಂದರ್ಥ. ಅಲ್ಲದೇ ನಿಮಗೆ ಧನಲಾಭವಾಗಲಿದೆ ಎಂದರ್ಥ. ಇನ್ನು ನೀವು ಕನಸ್ಸಿನಲ್ಲಿ ಗೋಮಾತೆಗೆ ಊಟ ತಿನ್ನಿಸುವ ರೀತಿ ಕನಸು ಬಿದ್ದರೆ, ನಿಮ್ಮ ಆಯಸ್ಸು ಹೆಚ್ಚಾಗಲಿದೆ. ನೀವು ಆರೋಗ್ಯವಾಗಿರಲಿದ್ದೀರಿ ಎಂದರ್ಥ. ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಆರೋಗ್ಯ ಉತ್ತಮವಾಗಿರಲಿದೆ ಎಂದರ್ಥ.
ಸೂರ್ಯಾಸ್ತದ ಬಳಿಕ ಈ 4 ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..
ಇನ್ನು ಎರಡು ದನಗಳು ಕೋಡನ್ನು ತಿವಿದುಕೊಳ್ಳುವ ರೀತಿ ಕನಸು ಬಿದ್ದರೆ, ನಿಮಗೆ ಹೆಚ್ಚು ಧನಲಾಭವಾಗಲಿದೆ ಎಂದರ್ಥ. ಯಾಕಂದ್ರೆ ಇಂಥ ಕನಸುಗಳು ಯಾವಾಗಲೂ, ಎಲ್ಲರಿಗೂ ಬೀಳುವುದಿಲ್ಲ. ನಿಮ್ಮ ಅದೃಷ್ಟ ಖುಲಾಯಿಸುವ ಸಂದರ್ಭ ಬಂದಾಗ ಮಾತ್ರ ಅಂಥ ಕನಸು ಬೀಳುತ್ತದೆ.

