ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿನ ಸಾ ಮೀಲ್ (Saw Meal) ಒಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಸಾ ಮೀಲ್ ಧಗಧಗಿಸಿ ಹೊತ್ತಿ ಉರಿದಿದೆ. ಸತತ ಎಂಟು ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿದಂತ ಆಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರೋ ಕೆಲಸ ಮಾಡಿದ್ದಾರೆ.
ಭದ್ರಾವತಿಯ ಬಸ್ ನಿಲ್ದಾಮದ ಸಮೀಪದಲ್ಲಿದ್ದಂತ ಮಂಜುನಾಥ ಸಾ ಮೀಲ್ ನಲ್ಲಿ ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ 9 ಅಗ್ನಿಶಾಮಕ ವಾಹನಗಳ ಸಿಬ್ಬಂದಿಗಳು, ಸತತ 8 ಗಂಟೆಗಳ ಕಾಲ ಬೆಂಕಿ ನಂದಿಸೋ ಕಾರ್ಯ ನಡೆಸಿ, ಹತೋಟಿಗೆ ತಂದಿದ್ದಾರೆ.
ಅಂದಹಾಗೇ ಮಂಜುನಾಥ ಸಾ ಮೀಲ್ ನಲ್ಲಿ ಭಾರೀ ಪ್ರಮಾಣದ ನಾಟವನ್ನು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಇದೇ ಕಾರಣದಿಂದಾಗಿ ಒಂದು ಕಡೆ ಬಂಕಿ ನಂದಿಸಿದ್ರೇ.. ಮತ್ತೊಂದು ಕಡೆ ಬೆಂಕಿ ಹೊತ್ತಿ ಉರಿಯುತ್ತಲೇ ಇತ್ತು ಎನ್ನಲಾಗಿದೆ. ಸಾ ಮೀಲ್ ಗೆ ಬಿದ್ದಂತ ಬೆಂಕಿ, ಅಕ್ಕಪಕ್ಕದ ಮನೆಗಳಿಗೂ ಒಂದಷ್ಟು ಹಾನಿ ಉಂಟು ಮಾಡಿದೆ ಎನ್ನಲಾಗಿದೆ. ಸಾಮಿಲ್ ಪಕ್ಕದಲ್ಲಿದ್ದಂತ 2 ಅಂಗಡಿಗಳು ಕೂಡ ಸುಟ್ಟು ಭಸ್ಮವಾಗಿವೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಮಾಹಿತಿ ತಿಳಿಯಬೇಕಿದೆ.