Spiritual: ದೇವರಂತೆ, ಗುರುಗಳ ಶಕ್ತಿಯೂ ಹೆಚ್ಚು ಎಂದು ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಗುರುರಾಯರು, ದತ್ತಾತ್ರೇಯರು, ದಕ್ಷಿಣಾ ಮೂರ್ತಿ, ಸಾಯಿಬಾಬಾ ಹೀಗೆ ಗುರುಗಳನ್ನ ಪೂಜಿಸಿ, ಉದ್ಧಾರವಾದವರೂ ಇದ್ದಾರೆ. ಇಂದು ನಾವು ಸಾಯಿಬಾಬಾ ನೆಲೆಸಿರುವ ಶಿರಡಿ ಪುಣ್ಯಕ್ಷೇತ್ರದ ಬಗ್ಗೆ ವಿವರಣೆ ನೀಡಲಿದ್ದೇವೆ.
ಮಹಾರಾಷ್ಟ್ರದ ಶಿರಡಿ ಗ್ರಾಮದಲ್ಲಿ ಸಾಯಿಬಾಬಾ ದೇವಸ್ಥಾನವಿದ್ದು, ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು , ಬಾಬಾರ ದರ್ಶನ ಪಡೆದು ಹೋಗುತ್ತಾರೆ. ಇದ್ದಷ್ಟು ದಿನ ಫಕೀರನಂತೆ ಇದ್ದು, ಪವಾಡಗಳನ್ನು ಮಾಡಿದ್ದ ಸಾಯಿಬಾಬಾರ ಪವಾಡಗಳ ಕುರುಹನ್ನು ನಾವು ಇಂದಿಗೂ ಶಿರಡಿಯಲ್ಲಿ ಕಾಣಬಹುದು. ಸಾಯಿಬಾಬಾ ಫಕೀರರಾಗಿದ್ದ ಕಾರಣ, ಅವರನ್ನು ಹಲವರು ಮುಸ್ಲಿಂಮರೆಂದು, ಇನ್ನು ಕೆಲವರು ಹಿಂದೂಗಳೆಂದು ಕರೆಯುತ್ತಾರೆ. ಹಾಗಾಗಿ ಸಾಯಿಬಾಬಾ, ಸಬ್ ಕಾ ಮಾಲೀಕ್ ಏಕ್ ಹೈ ಎಂದು ಹೇಳಿದ್ದಾರೆ. ಅಂದರೆ, ಎಲ್ಲರಿಗೂ ಒಬ್ಬನೇ ದೇವರು ಎಂದು ಹೇಳಿದ್ದಾರೆ.
ಇನ್ನು ಸಾಯಿಬಾಬಾರ ಧೂಪದ ಬಗ್ಗೆ ಹೇಳುವುದಾದರೆ, ಸಾಯಿಬಾಬಾ ಹಾಕಿದ ಧೂಪ ಇಂದಿಗೂ ಹಾಗೇ ಉರಿಯುತ್ತಿದೆ ಎಂದು ಹೇಳುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವವರು, ಈ ಧೂಪದ ಹೊಗೆಯನ್ನು ತೆಗೆದುಕೊಂಡರೆ, ಅವನು ಆರೋಗ್ಯವಂತನಾಗುತ್ತಾನೆ ಅಂತಾ ಹೇಳಲಾಗುತ್ತದೆ. ಇನ್ನು ಇಲ್ಲೊಂದು ಬೇವಿನ ಮರವಿದೆ. ಎಲ್ಲ ಬೇವಿನ ಮರದಲ್ಲಿ ಬೇವು ಕಹಿಯಾಗಿದ್ದರೆ, ಈ ಬೇವಿನ ಮರದ ಬೇವು ಸಿಹಿಯಾಗಿತ್ತಂತೆ. ಈ ಮೊದಲು ಈ ಎಲೆಯನ್ನು, ಭಕ್ತರಿಗೆ ಕೊಡುತ್ತಿದ್ದರು. ಆದರೆ, ಈಗ ಆ ಮರವನ್ನು ಯಾರೂ ಮುಟ್ಟದಂತೆ, ಬೇಲಿ ಹಾಕಲಾಗಿದೆ.
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?