Friday, March 14, 2025

Latest Posts

ನೀವೂ ಈ ಹಣ್ಣುಗಳ ಮರಗಳನ್ನು ಬೆಳೆಸಬೇಕೇ..? ಹಾಗಿದ್ದಲ್ಲಿ ಈ ವೀಡಿಯೋ ನೋಡಿ..

- Advertisement -

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ರಾಜ್ಯದ ಹಲವು ಭಾಗಗಳಿಂದ ಬೆಳೆಗಾರರು ಬಂದಿದ್ದು, ಅಕ್ಕಿ, ತರಕಾರಿ, ಹಣ್ಣು, ಗಿಡ, ಹಸು, ಮೇಕೆ ಹೀಗೆ ಎಲ್ಲವನ್ನೂ ಪ್ರದರ್ಶನಕ್ಕೆ ತಂದಿದ್ದರು. ಅದರಲ್ಲಿ ಹಲವಾರು ಬಗೆಯ ಹಣ್ಣುಗಳನ್ನು, ತರಕಾರಿಯನ್ನು ತಂದವರೊಬ್ಬರು, ಆ ಹಣ್ಣುಗಳ ಟೇಸ್ಟ್ ಹೇಗಿರತ್ತೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ, ಸಹ ಸಂಶೋಧಕ ಮತ್ತು ನಿರ್ದೇಶಕರಾದ ಎಸ್.ಎಲ್.ಜಗದೀಶ್ ಅವರು, ಹಲವು ಬಗೆಯ ಹಣ್ಣುಗಳನ್ನು, ತರಕಾರಿಗಳನ್ನು ಕೃಷಿ ಮೇಳದ ಪ್ರದರ್ಶನಕ್ಕೆ ತಂದಿದ್ದರು. ಹಲವು ಬಗೆಯ ಆಲೂಗಡ್ಡೆ, ಟೊಮೆಟೋ, ಹಣ್ಣುಗಳನ್ನ ಸಹ ಪ್ರದರ್ಶನಕ್ಕೆ ಇಟ್ಟಿದ್ದರು.

ಕುಫ್ರಿ ಮೋಹನ್, ಕುಫ್ರಿ ಜ್ಯೋತಿ, ಕುಫ್ರಿ ಸೂರ್ಯಾ, ಕುಫ್ರಿ ಕರಣ, ಕುಫ್ರಿ ಹಿಮಾಲಿನಿ ಸೇರಿ, ಹಲವು ಬಗೆಯ ಆಲೂಗಡ್ಡೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಲ್ಲದೇ ವಿವಿಧ ತೆಂಗಿನ ತಳಿಗಳನ್ನು ಸಹ ಜಗದೀಶ್ ಅವರು ಪರಿಚಯ ಮಾಡಿಕೊಟ್ಟರು. ಜೊತೆಗೆ ರೈತರಿಗೆ ಅನುಕೂಲವಾಗಲಿ ಎಂದು, ಬಾಗಲಕೋಟೆಯ ವಿಶ್ವವಿದ್ಯಾಲಯಗಳಲ್ಲಿ ಬೆಳೆದ ತಳಿಗಳ ಸಸ್ಯಗಳನ್ನು ಮಾರಾಟ ಮಾಡಲು ಕೂಡ ಇಡಲಾಗಿತ್ತು.

ನೋನಿ ಫಲ, ಹನುಮಾನ್ ಫಲ, ರಾಮ ಫಲ ಸೇರಿ ಹಲವು ರೀತಿಯ ಫಲಗಳ ಬಗ್ಗೆಯೂ ಜಗದೀಶ್ ಪರಿಚಯ ಮಾಡಿದ್ದಾರೆ. ಅಲ್ಲದೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಈ ಹಣ್ಣಿನ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಅಥವಾ ಇಂಥ ಗಿಡಗಳನ್ನು ಬೆಳೆಸಿ, ಫಲ ಬಯಸುವವರು, ಕೃಷಿ ವಿಶ್ವವಿದ್ಯಾಲಯಕ್ಕೆ ಹೋಗಿ, ಗಿಡಗಳನ್ನು ಖರೀದಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಚಾಕೋಲೇಟ್ಸ್ ತಿನ್ನಬಾರಂದು ಅಂತಾ ಹೇಳೋದ್ಯಾಕೆ..?

ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

ಕಣ್ಣಿನ ಪೊರೆಗೆ treatment ಏನು..?

- Advertisement -

Latest Posts

Don't Miss