Sunday, September 8, 2024

Latest Posts

ನೀವು ಚಾಕೋಲೇಟ್ ಪ್ರಿಯರಾ..? ಹಾಗಾದ್ರೆ ಈ ಸ್ಟೋರಿ ಖಂಡಿತ ಓದಿ..

- Advertisement -

ಚಾಕೋಲೇಟ್ಸ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ವಾರಕ್ಕೊಮ್ಮೆ ಅಥವಾ ತಿಂಗಳಿಗೆರಡು ಬಾರಿ ಚಾಕೋಲೇಟ್ಸ್ ತಿಂದ್ರೆ ಅಷ್ಟೇನು ತೊಂದರೆ ಇಲ್ಲ. ಆದ್ರೆ ನೀವು ಪ್ರತಿದಿನ ಚಾಕೋಲೇಟ್ಸ್ ತಿಂದ್ರೆ ಅಥವಾ ವಾರಕ್ಕೆ ಮೂರರಿಂದ ನಾಲ್ಕು ಬಾರಿ ಚಾಕೋಲೇಟ್ಸ್ ತಿಂದ್ರೆ, ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ನೀವು ಚಾಕೋಲೇಟ್ಸೇ ತಿನ್ನಬೇಕು ಅಂತಿಲ್ಲ. ಚಾಕೋಲೇಟ್ ಫ್ಲೆವರ್ ಕೇಕ್, ಮಿಲ್ಕ್‌ಶೇಕ್, ಐಸ್‌ಕ್ರಿಮ್, ಬಿಸ್ಕೀಟ್ಸ್ ಏನೇ ಸೇವಿಸಿದರೂ ಒಳ್ಳೆಯದಲ್ಲ. ಹಾಗಾದ್ರೆ ಚಾಕೋಲೇಟ್ ಹೆಚ್ಚು ಸೇವಿಸಿದ್ರೆ, ಅದರಿಂದ ಆಗುವ ಸಮಸ್ಯೆಗಳೇನು ಅಂತಾ ತಿಳಿಯೋಣ..

ಮಧುಮೇಹವನ್ನು (ಶುಗರ್) ಕಂಟ್ರೋಲಿನಲ್ಲಿಡುವುದು ಹೇಗೆ..?

ವಿಪರೀತವಾಗಿ ಚಾಕೋಲೇಟ್ಸ್ ತಿಂದ್ರೆ ನಿಮ್ಮ ಮೂಳೆ ಸವೆಯುತ್ತ ಹೋಗುತ್ತದೆ. ಇದರಿಂದ ಮೂಳೆ ಮುರಿಯುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೇ ಮೂಳೆ ಸವೆಯುತ್ತ, ನಿಮ್ಮ ಬೊಜ್ಜು ಬೆಳೆಯುತ್ತ ಹೋಗುತ್ತದೆ. ಅನಾರೋಗ್ಯಕರ ರೀತಿಯಲ್ಲಿ ನೀವು ದಪ್ಪ ಆಗುತ್ತೀರಿ. ಇದರಿಂದ ನಿಮ್ಮ ಚರ್ಮ ದಪ್ಪವಾಗುತ್ತದೆ ಹೊರತು, ನಿಮ್ಮ ದೇಹದಲ್ಲಿ ಶಕ್ತಿ ಇರುವುದಿಲ್ಲ.

ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚು ಚಾಕೋಲೇಟ್ ಸೇವನೆ ಮಾಡುವುದರಿಂದ ಬೊಜ್ಜು ಬೆಳೆದು ಪಿಸಿಓಡಿ ಸಮಸ್ಯೆ ಎದುರಿಸಬೇಕಾಗುತ್ತದೆ. ಗಂಡು ಮಕ್ಕಳು ಪುರುಷತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ಚಾಕೋಲೇಟ್ಸ್ ಸೇವನೆಯಿಂದ ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತದೆ. ಕ್ಯಾಲ್ಶಿಯಂ ಅಂಶ ಕಡಿಮೆಯಾಗುತ್ತಿದ್ದಂತೆ, ಮೂಳೆ ರೋಗ ಬರುತ್ತದೆ. ಹಲ್ಲು ತನ್ನ ಗಟ್ಟಿತನ ಕಳೆದುಕೊಳ್ಳುತ್ತದೆ. ಇದರಿಂದ ವಸಡು ನೋವು ಬರುತ್ತದೆ. ಸಣ್ಣ ವಯಸ್ಸಿನಲ್ಲೇ ಹಲ್ಲು ಉದುರಿ ಹೋಗುವ ಸಾಧ್ಯತೆಯೂ ಇದೆ.

ಬೊಜ್ಜನ್ನ ಕರಗಿಸಬೇಕೇ..? ಹಾಗಾದ್ರೆ ಈ ಸೂಪ್ಗಳನ್ನ ಸೇವಿಸಿ..

ಚಿಕ್ಕ ವಯಸ್ಸಿನಲ್ಲೇ ಮಧುಮೇಹ ಬರಬಹುದು. ನಿಮ್ಮ ಜ್ಞಾಪಕ ಶಕ್ತಿ ಕಡಿಮೆ ಮಾಡುವ ಶಕ್ತಿ ಚಾಕೋಲೇಟ್ಸ್‌ಗಿದೆ. ಅಲ್ಲದೇ, ಹೆಚ್ಚು ಚಾಕೋಲೇಟ್ಸ್ ಸೇವನೆಯಿಂದ ದಡ್ಡತನ ಬರುತ್ತದೆ. ಹಾಗಾಗಿ ಚಾಕೋಲೇಟ್ಸ್ ತಿನ್ನುವುದನ್ನ ಕಡಿಮೆ ಮಾಡಬೇಕು.

- Advertisement -

Latest Posts

Don't Miss