ಇಂದಿನ ಕಾಲದ ಯುವ ಪೀಳಿಗೆಯವರಿಗೆ ಯೋಗ, ವ್ಯಾಯಮ ಮಾಡುವುದರ ಬದಲು ಹೆಚ್ಚಾಗಿ ಜಿಮ್ ಹೋಗುವುದೆಂದರೆ ಬಹಳ ಇಷ್ಟ. ಅವರು ಅಲ್ಲಿ ತೂಕ ಇಳಿಸಿಕೊಳ್ಳಲು ಆಗದಿದ್ದರೂ, ಒಂದೆರಡು ರೀಲ್ಸ್ ಮಾಡ್ತಾರೆ. ಅಥವಾ ಒಂದು ಹತ್ತು ಸೆಲ್ಫಿ ತೆಗೆದುಕೊಳ್ತಾರೆ. ಆದ್ರೆ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದು ಅಷ್ಟು ಉತ್ತಮವಲ್ಲ. ಹಾಗಾದ್ರೆ ಯಾಕೆ ಜಿಮ್ ವರ್ಕೌಟ್ ಅಷ್ಟು ಉತ್ತಮವಲ್ಲ ಅಂತಾ ತಿಳಿಯೋಣ ಬನ್ನಿ..
ಜಿಮ್ ಹೋಗುವತನಕ ನಿಮ್ಮ ದೇಹದ ತೂಕ ಇಳಿಯಬಹುದು. ಹೊಟ್ಟೆಯ ಬೊಜ್ಜು ಕರಗಬಹುದು. ಆದ್ರೆ ನೀವು ಜಿಮ್ ಹೋಗುವುದನ್ನ ಬಿಟ್ರೆ, ಮತ್ತೆ ಬೊಜ್ಜು ಬೆಳೆಯತ್ತೆ. ಹೊಟ್ಟೆ ಮುಂದೆ ಬರತ್ತೆ. ಹಾಗಾಗಿ ಜಿಮ್ ಹೋಗುವುದರಿಂದ ಇಂಥ ನಷ್ಟವಾಗುತ್ತದೆ ಹೊರತು, ಲಾಭವೇನಿಲ್ಲ. ನಿಮಗೆ ಹೊಟ್ಟೆ ಕರಗಬೇಕು, ಮತ್ತೆ ಬೊಜ್ಜು ಬರಬಾರದು ಅಂತಿದ್ರೆ, ಮನೆಯಲ್ಲೇ ಯೋಗ ಮಾಡಿ, ವ್ಯಾಯಾಮ ಮಾಡಿ.
ಯೋಗ ಮತ್ತು ವ್ಯಾಯಾಮ ಮಾಡಲು ಬರದಿದ್ದರೆ, ಹಿಟ್ಟು ಬೀಸುವ ಕಲ್ಲಿನಲ್ಲಿ ಹಿಟ್ಟು ಬೀಸಿ, ಬಟ್ಟೆಯನ್ನ ನೀವೇ ತೊಳೆಯಿರಿ. ನೆಲ ಗುಡಿಸಿ, ಒರೆಸಿ. ಇವೆಲ್ಲವೂ ಜಿಮ್ ಗಿಂತಲೂ ಹೆಚ್ಚು ಎಫೆಕ್ಟಿವ್ ಕೆಲಸ. ಯಾಕಂದ್ರೆ ಈ ಕೆಲಸ ಮಾಡುವುದರಿಂದ ನಿಮ್ಮ ದೇಹದ ತೂಕ ಸರಿಯಾಗಿ ಇರುತ್ತದೆ. ಬೊಜ್ಜು ಕರಗುತ್ತದೆ. ಗಂಡು ಮಕ್ಕಳು ಕೂಡ ಈ ಕೆಲಸ ಮಾಡಬಹುದು. ನಿಮ್ಮ ತಾಯಿ, ಸೋಹದರಿ, ಅಥವಾ ಪತ್ನಿಗೆ ಈ ಕೆಲಸ ಮಾಡಲು ಸಹಾಯ ಮಾಡಿ. ಆರಾಮವಾಗಿ ನಿಮ್ಮ ದೇಹದ ತೂಕ ಕರಗುತ್ತದೆ.
ಇನ್ನು ಗರ್ಭಿಣಿಯರು ಈ ಮನೆ ಕೆಲಸವನ್ನೆಲ್ಲ ಮಾಡುವುದರಿಂದ ನಾರ್ಮಲ್ ಡೆಲಿವರಿಯಾಗಲು, ಇದು ಸಹಕಾರಿಯಾಗಿದೆ. ಮೂರು ತಿಂಗಳು ತುಂಬಿದಾಗಿನಿಂದ, 7 ತಿಂಗಳು ಪೂರ್ತಿಯಾಗುವವರೆಗೂ ನೀವು ಹಿಟ್ಟು ಬೀಸಬಹುದು. ಇದರ ಬಳಿಕ, ಭಾರವಾದ ಕೆಲಸ ಮಾಡಬಾರದು. ಇನ್ನು ನೀವು ಜಿಮ್‌ಗೆ ಹೋಗದೇ, ಈ ಕೆಲಸಗಳನ್ನ ಮನೆಯಲ್ಲೇ ಮಾಡಿದ್ರೆ, ನೀವು ಡಯಟ್ ಮಾಡದೇ ನಿಮ್ಮ ವೇಟ್ ಲಾಸ್ ಮಾಡಬಹುದು.