International News: ತಮ್ಮ ಸಂಬಂಧದ ನಡುವೆ ಕಿರಿಕಿರಿ ಎನ್ನಿಸುತ್ತಿದ್ದ, ಬಾಯ್‌ಫ್ರೆಂಡ್‌ನ ಪುಟ್ಟ ಮಗುವನ್ನು ಕಿರಾತಕಿಯೊಬ್ಬಳು ನೇಲ್ ಪಾಲೀಶ್ ರಿಮೂವರ್ ತಿನ್ನಿಸಿ ಹತ್ಯೆಗೈದಿದ್ದಾಳೆ.
ಅಲಿಸಿಯಾ ಓವೆನ್ಸ್(20) ಎಂಬ ಮಹಿಳೆ ತನ್ನ ಬಾಯ್‌ಫ್ರೆಂಡ್ ಮಗಳಾದ ಐರಿಸ್‌ಗೆ (18 ತಿಂಗಳು), 2023 ಜೂನ್‌ನಲ್ಲಿ ನೇಲ್ ಪಾಲೀಶ್ ರಿಮೂವರ್, ಸ್ಕ್ರೂ, ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ, ಕೊಲೆಗೈದಿದ್ದಾಳೆ. ಆ ಆರೋಪ ಇಂದು ಸಾಬೀತಾಗಿದ್ದು, ಆಕೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಈಕೆ ಇಂಟರ್‌ನೆಟ್ಟನಲ್ಲಿ ಅನುಮಾನ ಬಾರದಂತೆ ಯಾವ ರೀತಿ ಮಗುವನ್ನು ಕೊಲ್ಲಬೇಕು ಎಂದು ಹುಡುಕಿದ್ದಳು. ಅದರಂತೆ ಇವನ್ನೆಲ್ಲ ತಿನ್ನಿಸಿದ್ದಳು. ಮಗುವಿನ ಆರೋಗ್ಯ ಹದಗೆಟ್ಟಿದೆ ಎಂದು ಆಕೆಯ ಅಪ್ಪ, ಮಗುವನ್ನು ಆಸ್ಪತ್ರೆಗೆ ಸೇರಿಸಿ, 4 ದಿನ ಚಿಕಿತ್ಸೆ ಕೊಡಿಸಿದ್ದ. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿತ್ತು. ಶವ ಪರೀಕ್ಷೆ ನಡೆಸಿದಾಗ, ದೇಹದಲ್ಲಿ ಬ್ಯಾಟರಿ, ನೇಲ್‌ಪಾಲೀಶ್ ರಿಮೂವರ್ ಸೇವಿಸಿರುವುದು ಧೃಡಪಟ್ಟಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದಾಗ, ಅಲಿಸಿಯಾ ಅಸಲಿಯತ್ತು ಬಯಲಿಗೆ ಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬ್ರಿಟೀಷ್ ರಾಯಭಾರಿ: ಆಕ್ಷೇಪ ವ್ಯಕ್ತಪಡಿಸಿದ ಭಾರತ
ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನ ಹಿಂದೂಗಳಿಗೆ ಪ್ರಾರ್ಥನೆಗಾಗಿ 2 ಗಂಟೆ ವಿಶೇಷ ವಿಶ್ರಾಂತಿ