ಪುಟ್ಟ ಮಗು ಇರುವ ಮನೆಯಲ್ಲಿ ಎಷ್ಟು ಖುಷಿ ಸಂಭ್ರಮ ಇರುತ್ತದೆಯೋ, ಅದು ರಾತ್ರಿಯಿಡೀ ಅತ್ತಾಗ, ಅಷ್ಟೆ ಬೇಸರವಾಗುತ್ತದೆ. ಒಂದು ಅದರ ಅಳುವಿಗೆ ಕಾರಣ ಗೊತ್ತಾಗುವುದಿಲ್ಲ. ಇನ್ನೊಂದು ಸುಖ ನಿದ್ರೆ ಬರುವ ಸಮಯದಲ್ಲಿ ಅಡಚಣೆಯಾಗುವ ಬೇಸರ. ಹಾಗಾದ್ರೆ ಶಿಶು ಬೇಗ ನಿದ್ದೆ ಮಾಡಬೇಕು ಅಂದ್ರೆ ಏನು ಮಾಡಬೇಕು. ಶಿಶುವಿನ ಅಳುವಿಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮಗುವಿನ ಅಳುವಿಗೆ ನಾಲ್ಕರಿಂದ ಐದು ಕಾರಣವಿರುತ್ತದೆ. ಮೊದಲನೇಯ ಕಾರಣ ಅದಕ್ಕೆ ಹೊಟ್ಟೆ ಹಸಿವಾಗಿರುತ್ತದೆ. ಎರಡನೇಯ ಕಾರಣ ಅದು ಮಲ ಮೂತ್ರ ವಿಸರ್ಜನೆ ಮಾಡಿರುತ್ತದೆ. ಆದರೆ ಅದಕ್ಕೆ ಹಾಕಿದ ಬಟ್ಟೆ ಚೇಂಜ್ ಮಾಡಿರುವುದಿಲ್ಲ. ಮೂರನೇಯ ಕಾರಣ ಅದಕ್ಕೆ ನಿದ್ದೆ ಬರುತ್ತದೆ. ಆದರೆ ಮಲಗಲು ಸರಿಯಾಗಿ ವ್ಯವಸ್ಥೆಯಾಗಿರುವುದಿಲ್ಲ. ನಾಲ್ಕನೇಯ ಕಾರಣ ಅದಕ್ಕೆ ಹೊಟ್ಟೆ ನೋವಾಗುತ್ತಿರಬಹುದು. ಇದೆಲ್ಲ ಮಗುವಿನ ಅಳುವಿಗೆ ಕಾರಣವಾಗಿರುತ್ತದೆ.
ಕಾಲಿಗೆ ಆಣಿಯಾಗಲು ಕಾರಣವೇನು..? ಅದನ್ನ ಹೋಗಲಾಡಿಸುವುದು ಹೇಗೆ..?
ಇನ್ನು ನೀವೆಷ್ಟೇ ಪ್ರಯತ್ನಿಸಿದರೂ ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೆಂದಲ್ಲಿ, ಅದಕ್ಕಾಗಿ ನಾವಿವತ್ತು ಕೆಲ ಟ್ರಿಕ್ಸ್ ಹೇಳಿಕೊಡುತ್ತಿದ್ದೇವೆ. ಮೊದಲನೇಯದಾಗಿ ಜೋಗುಳ ಅಥವಾ ತೊಟ್ಟಿಲಿಗೆ ಹಾಕಿ ಮಲಗಿಸಲು ಪ್ರಯತ್ನಿಸಿ. ಕೆಲವು ಮಕ್ಕಳಿಗೆ ಬೆಚ್ಚಗಿನ ಜಾಗ ಬೇಕಾಗಿರುತ್ತದೆ. ಅವರು ಮೈ ಮೇಲೆ ಮಲಗಲು ಇಚ್ಛಿಸುತ್ತಾರೆ. ಹಾಗಾಗಿದ್ದಲ್ಲಿ ನೀವು ಭುಜಕ್ಕೆ ತಲೆ ಇಡುವಂತೆ ಮಗುವನ್ನು ಮಲಗಿಸಬೇಕು.
ಕೆಲವು ಮಕ್ಕಳಿಗೆ ಲೈಟ್ ಸಮಸ್ಯೆ, ಫ್ಯಾನಿನ ಸಮಸ್ಯೆ ಇರುತ್ತದೆ. ಕೆಲ ಮಕ್ಕಳಿಗೆ ಫ್ಯಾನ್ ಹಾಕಿದರಷ್ಟೇ ನಿದ್ದೆ ಬರುತ್ತದೆ. ಕೆಲ ಮಕ್ಕಳಿಗೆ ಫ್ಯಾನ್ ಗಾಳಿ ತಾಕಿದರೆ ಇಷ್ಟವಾಗುವುದಿಲ್ಲ. ಮತ್ತೆ ಕೆಲ ಮಕ್ಕಳಿಗೆ ಲೈಟ್ ಇದ್ದರಷ್ಟೇ ನಿದ್ದೆ ಬರುತ್ತದೆ. ಕೆಲ ಮಕ್ಕಳು ಗಾಢ ಕತ್ತಲೆಯಲ್ಲಿ ಮಲಗಲು ಇಚ್ಛಿಸುತ್ತಾರೆ. ಅದನ್ನೆಲ್ಲ ನೀವು ಗಮನದಲ್ಲಿರಿಸಬೇಕು.
ಕರ್ಬೂಜ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?
ಇನ್ನು ನಿಮ್ಮ ಮಗುವಿಗೆ ರಾತ್ರಿ ಮಲಗುವಾಗ ಸ್ನಾನ ಮಾಡಿಸಲು ಯಾವುದೇ ತೊಂಡರೆ ಇಲ್ಲವಾದಲ್ಲಿ, ಮಗುವಿಗೆ ರಾತ್ರಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ, ಮಲಗಿಸಿ. ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದಾಗ, ಗಾಢವಾದ ನಿದ್ದೆ ಬರುತ್ತದೆ. ಇನ್ನು ಜಾಯಿಕಾಯಿನ್ನು ತೇಯ್ದು ಕೊಂಚವೇ ನೆಕ್ಕಿಸಿದರೆ ಸಾಕು, ಮಗುವಿಗೆ ಗಾಢವಾದ ನಿದ್ದೆ ಬರುತ್ತದೆ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಜಾಯಿಕಾಯಿ ತೇಯ್ದು ತಿನ್ನಿಸಬೇಡಿ. ಇದು ಮಗುವಿನ ಆರೋಗ್ಯಕ್ಕೆ ಹಾನಿ ಮಾಡಬಹುದು. ಒಟ್ಟಾರೆಯಾಗಿ ನಿಮ್ಮ ಸುಖ ನಿದ್ರೆಗಾಗಿ ಮಗುವಿನ ಆರೋಗ್ಯ ಹಾಳಾಗದಂತೆ, ಟ್ರಿಕ್ ಉಪಯೋಗಿಸಿ, ಮಗುವನ್ನು ಮಲಗಿಸಿ.